ಮಣಿಪುರ ಕಲಹಕ್ಕೆ ರಾಜಕೀಯ ಪಕ್ಷಗಳು ಕಾರಣವಲ್ಲ- ರಾಜನಾಥ್ ಸಿಂಗ್‌; ಕಮ್ಯುನಿಸ್ಟರಿಂದ ಅರಾಜಕತೆ ಸೃಷ್ಟಿ- ಭಾಗವತ್‌

Date:

Advertisements

ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಭಿನ್ನ ನಿಲುವು ವ್ಯಕ್ತಪಡಿಸಿದ್ದು, ಯಾರು ನಿಜ ಹೇಳುತ್ತಿದ್ದಾರೆ?

ಸಂಘರ್ಷ ಪೀಡಿತ ಮಣಿಪುರದ ನೆರೆಯ ರಾಜ್ಯ ಮಿಜೊರಾಂನಲ್ಲಿ ವಿಧಾನಸಭಾ ಚುನಾವಣೆ ಕಾವೇರಿದ್ದು, ಎಲೆಕ್ಷನ್ ಪ್ರಚಾರದ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಮಹತ್ವದ ಹೇಳಿಕೆ ನೀಡಿದ್ದಾರೆ.

“ಮಣಿಪುರದ ಹಿಂಸಾಚಾರಕ್ಕೆ ಯಾವುದೇ ರಾಜಕೀಯ ಪಕ್ಷ ಕಾರಣವಲ್ಲ. ಎರಡು ಸಮುದಾಯಗಳ ನಡುವೆ ಹುಟ್ಟಿರುವ ಅಭದ್ರತೆ ಇದಾಗಿದೆ” ಎಂದು ತಿಳಿಸಿದ್ದಾರೆ. ಆದರೆ ಇತ್ತೀಚೆಗೆ ವಿಜಯ ದಶಮಿಯಂದು ಮಾತನಾಡಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌, “ಮಣಿಪುರದ ಹಿಂಸಾಚಾರಕ್ಕೆ ಹೊರಗಿನ ಶಕ್ತಿಗಳು ಕಾರಣ, ಕಮ್ಯುನಿಸ್ಟರು ಅರಾಜಕತೆ ಸೃಷ್ಟಿಸುತ್ತಾರೆ” ಎಂದು ಹೇಳಿಕೆ ನೀಡಿದ್ದರು.

Advertisements

ಮಣಿಪುರದಲ್ಲಿ ಹೆಚ್ಚಿನ ಸಂತ್ರಸ್ತರಾಗಿರುವ ಕುಕಿಗಳಿಗೆ ಮಿಜೊರಾಂ ರಾಜ್ಯದ ಬೆಂಬಲವಿದೆ. ಹೀಗಾಗಿ ಮಿಜೊರಾಂ ಚುನಾವಣೆ ಹೆಚ್ಚಿನ ಗಮನ ಸೆಳೆದಿದೆ. ನವೆಂಬರ್ 7ರಂದು ಮತದಾನ ನಡೆಯಲಿರುವ ಮಿಜೊರಾಂನ ರಾಜ್ಯ ವಿಧಾನಸಭೆ ಚುನಾವಣೆಯು ಮಣಿಪುರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾವು ಪಡೆದಿದೆ.

ಮಿಜೊರಾಂನಲ್ಲಿ ಕುಕಿ- ಜೋ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸಮುದಾಯ ಮಣಿಪುರದಲ್ಲಿ ಮೈತೇಯಿಗಳೊಂದಿಗೆ ಸಂಘರ್ಷ ನಡೆಸುತ್ತಿದೆ. ಮಣಿಪುರದಿಂದ ವಲಸೆ ಬಂದ ಸುಮಾರು 12,000ಕ್ಕೂ ಹೆಚ್ಚು ಜನರಿಗೆ ಮಿಜೊರಾಂನಲ್ಲಿ ಆಶ್ರಯ ನೀಡಲಾಗಿದೆ.

ಮಿಜೊರಾಂನ ಸಿಯಾಹಾದಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, “ಕಳೆದ ಒಂಬತ್ತು ವರ್ಷಗಳಿಂದ ಈಶಾನ್ಯ ಭಾರತ ಬಹಳ ಶಾಂತಿಯುತವಾಗಿದೆ. ಎಲ್ಲ ರಾಜ್ಯಗಳಲ್ಲೂ ಬಂಡಾಯ ನಿಂತಿವೆ ಅಥವಾ ತೀರಾ ಕಡಿಮೆಯಾಗಿವೆ. ಆದರೆ ಈ ಬಾರಿ ಮಣಿಪುರದಲ್ಲಿ ನಡೆದ ಹಿಂಸಾಚಾರ ನಮ್ಮೆಲ್ಲರಿಗೂ ತುಂಬಾ ನೋವನ್ನುಂಟು ಮಾಡಿದೆ. ಈ ಹಿಂಸಾಚಾರವನ್ನು ಯಾವುದೇ ರಾಜಕೀಯ ಪಕ್ಷಗಳು ಮಾಡಿಲ್ಲ ಎಂದು ನಾನು ಪ್ರಾಮಾಣಿಕವಾಗಿ ಹೇಳಬಯಸುತ್ತೇನೆ. ಮಣಿಪುರದಲ್ಲಿ ಎರಡೂ ಸಮುದಾಯಗಳ ನಡುವೆ ಇಂತಹ ಪರಿಸ್ಥಿತಿ, ಅಭದ್ರತೆ ಹುಟ್ಟಿದೆ, ಇದರಿಂದಾಗಿ ಹಿಂಸಾಚಾರ ಸಂಭವಿಸಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಎರಡೂ ಸಮುದಾಯಗಳು ಒಟ್ಟಿಗೆ ಕೂತು ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ನಾನು ವಿನಂತಿಸುತ್ತೇನೆ. ಮಣಿಪುರದಲ್ಲಿ ಎರಡೂ ಸಮುದಾಯಗಳಲ್ಲಿ ಹುಟ್ಟಿರುವ ವಿಶ್ವಾಸದ ಕೊರತೆಯನ್ನು ಕೊನೆಗೊಳಿಸಬೇಕು. ಹಿಂಸೆಯು ಯಾವುದೇ ಸಮಸ್ಯೆಗೆ ಪರಿಹಾರವಲ್ಲ, ಪರಿಹಾರಕ್ಕೆ ಹೃದಯಗಳ ಸಂಭಾಷಣೆಯ ಅಗತ್ಯವಿದೆ ಎಂದು ಮಣಿಪುರದ ಎಲ್ಲ ಜನರಿಗೆ ಮನವಿ ಮಾಡುತ್ತೇನೆ” ಎಂದಿದ್ದಾರೆ.

ಮೇ 3 ರಂದು ಸಂಘರ್ಷ ಆರಂಭವಾದಾಗಿನಿಂದ ರಾಜನಾಥ ಸಿಂಗ್ ಅವರು ಮಣಿಪುರಕ್ಕೆ ಹೋಗಿಲ್ಲ ಎಂಬುದೂ ಗಮನಾರ್ಹ.

ಆರ್‌ಎಸ್‌ಎಸ್‌ ಭಿನ್ನ ನಿಲುವು

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗಪುರದಲ್ಲಿ ದಸರಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, “ಮಣಿಪುರ ಹಿಂಸಾಚಾರವನ್ನು ಸಂಘಟಿಸಲಾಗಿತ್ತು. ಈಶಾನ್ಯ ರಾಜ್ಯದ ಪರಿಸ್ಥಿತಿಗೆ ಹೊರಗಿನ ಶಕ್ತಿಗಳು ಕಾರಣ” ಎಂದು ಆರೋಪಿಸಿದ್ದರು.

“ಮೈತೇಯಿ ಮತ್ತು ಕುಕಿಗಳು ಅಲ್ಲಿ ದೀರ್ಘಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಇದು ಗಡಿ ರಾಜ್ಯ. ಇಂತಹ ಪ್ರತ್ಯೇಕತಾವಾದ ಮತ್ತು ಆಂತರಿಕ ಸಂಘರ್ಷದಿಂದ ಯಾರಿಗೆ ಲಾಭ? ಹೊರಗಿನ ಶಕ್ತಿಗಳಿಗೂ ಲಾಭವಾಗುತ್ತದೆ. ಅಲ್ಲಿ ನಡೆದ ಘಟನೆಯಲ್ಲಿ ಹೊರಗಿನವರು ಭಾಗಿಯಾಗಿದ್ದಾರೆಯೇ?” ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿರಿ: ಮಹಿಳೆಗೆ ಅವಮಾನ, ಕೊಲೆ ಬೆದರಿಕೆ, ಜಾತಿ ನಿಂದನೆ: ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್

ಮುಂದುವರಿದು, “ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಮತ್ತು ಜನಾಂಗೀಯ ಪೂರ್ವಗ್ರಹ ಹೊಂದಿರುವವರು  ದೇಶದ ಶಿಕ್ಷಣ, ಸಂಸ್ಕೃತಿಯನ್ನು ಹಾಳು ಮಾಡುವುದಕ್ಕಾಗಿ ಮಾಧ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಬಳಸುತ್ತಿದ್ದಾರೆ” ಎಂದು ಹೇಳಿದ್ದರು.

ಮಣಿಪುರದ ಪರಿಸ್ಥಿತಿಯ ಕುರಿತು ಭಾಗವತ್, “ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ದಿನಗಳ ಕಾಲ ಮಣಿಪುರದಲ್ಲಿದ್ದರು. ವಾಸ್ತವವಾಗಿ ಸಂಘರ್ಷಕ್ಕೆ ಉತ್ತೇಜನ ನೀಡಿದವರು ಯಾರು? ಹಿಂಸಾಚಾರ ನಡೆಯುತ್ತಿಲ್ಲ, ಹೊರತಾಗಿ ಅದು ಸಂಭವಿಸುವಂತೆ ಮಾಡಲಾಗುತ್ತಿದೆ” ಎಂದಿದ್ದರು.

“ಶಾಂತಿ ಮರುಸ್ಥಾಪನೆಯತ್ತ ನಡೆಯುತ್ತಿದ್ದಾಗ ಕೆಲವು ಘಟನೆಗಳು ಸಂಭವಿಸುತ್ತವೆ. ಇದು ಸಮುದಾಯಗಳ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ಇಂತಹ ಕೃತ್ಯಗಳನ್ನು ಮಾಡುತ್ತಿದ್ದವರ ಹಿಂದೆ ಯಾರಿದ್ದಾರೆ? ಹಿಂಸಾಚಾರವನ್ನು ಯಾರು ಪ್ರಚೋದಿಸುತ್ತಿದ್ದಾರೆ?” ಎಂದು ಕೇಳಿದ್ದರು.

ದೇಶದ ರಕ್ಷಣಾ ಸಚಿವರ ಮಾತನ್ನು ಒಪ್ಪುವುದಾದರೆ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮಾತನ್ನು ಸುಳ್ಳು ಎನ್ನಬೇಕಾಗುತ್ತದೆ. ಸಂಘಪರಿವಾರದ ಇಬ್ಬರು ನಾಯಕರು ಭಿನ್ನ ಹೇಳಿಕೆಗಳನ್ನು ನೀಡಿರುವುದು ಗೊಂದಲಕ್ಕೆ ಕಾರಣವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X