ಮಹಿಳೆಗೆ ಅವಮಾನ, ಕೊಲೆ ಬೆದರಿಕೆ, ಜಾತಿ ನಿಂದನೆ: ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್

Date:

ಸ್ವಘೋಷಿತ ಧರ್ಮ ರಕ್ಷಕನಾಗಿ ಗುರುತಿಸಿಕೊಂಡಿರುವ, ಹಿಂದುತ್ವ ಹೋರಾಟದ ಹೆಸರಲ್ಲಿ ಕೆಟ್ಟ ಭಾಷೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಳಸಿ ಹೋರಾಟಗಾರರನ್ನು ನಿಂದಿಸುತ್ತಿರುವ ಪುನೀತ್‌ ಕೆರೆಹಳ್ಳಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.

ಇದ್ರೀಸ್ ಪಾಷಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ  ಬಂಧಿತನಾಗಿ, ನಂತರ ಬಿಡುಗಡೆಯಾಗಿರುವ ಮತ್ತು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗಿರುವ ಪುನೀತ್‌ ಕೆರೆಹಳ್ಳಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಬೆದರಿಕೆಗಳ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಬೆದರಿಕೆ, ಮಕ್ಕಳನ್ನು ಅಪರಾಧ ಕೃತ್ಯಕ್ಕೆ ಎಳೆದು ತಂದಿರುವುದು, ಪರಿಶಿಷ್ಟ ಜಾತಿ ನಿಂದನೆ ಮಾಡಿರುವುದರ ಸಂಬಂಧ ದೂರು ದಾಖಲಾಗಿದೆ. ಈಗಾಗಲೇ ಗಂಭೀರ ಪ್ರಕರಣಗಳಲ್ಲಿ ಭಾಗಿರುವ ಪುನೀತ್‌ ಕೆರೆಹಳ್ಳಿ ಮಾಡಿರುವ ಬೆದರಿಕೆಗಳ ಕುರಿತಂತೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ಆಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕನ್ನಡ ಪರ ಹೋರಾಟಗಾರ, ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಹರೀಶ್ ಭೈರಪ್ಪ ಅವರು ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಾಗಿದೆ.

ಭೈರಪ್ಪ ಅವರು ನೀಡಿದ ದೂರಿನಲ್ಲಿ ಏನಿದೆ?

ವಿಷಯ: ವೇಶ್ಯಾವಾಟಿಕೆಯ ಸೆಕ್ಷನ್ ಗಳಡಿಯಲ್ಲಿ ಬಂಧಿತನಾಗಿ ಕೊಲೆ, ಜೀವಬೆದರಿಕೆ, ಆಸ್ತಿಪಾಸ್ತಿ ಹಾನಿ, ಗಲಭೆಗಳ ಸೃಷ್ಟಿ ಸೇರಿದಂತೆ ರಾಜ್ಯಾದ್ಯಂತ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಪುನೀತ್ ಕೆರೆಹಳ್ಳಿ ಎಂಬಾತ ನನ್ನ ಮತ್ತು ನನ್ನ ಕುಟುಂಬಕ್ಕೆ ಜೀವಬೆದರಿಕೆ ಒಡ್ಡಿ, ದಲಿತ ಜಾತಿ ನಿಂದನೆ, ಮಹಿಳೆಯರ ಅವಹೇಳನ ಮಾಡಿ, ಅಪ್ರಾಪ್ತ ಮಕ್ಕಳ ಮೇಲೆ ಅಶ್ಲೀಲ ಪದಗಳನ್ನು ಬಳಸಿ ದೌರ್ಜನ್ಯ ಮಾಡಿರುವ ಬಗ್ಗೆ IPC 509 (word, gesture or act intended to insult the modesty of a woman), 506 (2) (criminal intimidation), 354, sections 66 (computer related offences) and 67 (punishment for publishing or transmitting obscene material in electronic form) of the Information Technology Act and POCSO Section 11, 12, 16 ಮತ್ತು sc st prevention of atrocities act 1989 u/s 3(1)(r), 3(1)(u), 3(1)(x) ಅಡಿಯಲ್ಲಿ ದೂರು.

ನಾನು ಕನ್ನಡ ಪರ ಹೋರಾಟಗಾರನಾಗಿದ್ದು, ನಾಡು ನುಡಿಗಾಗಿ ಕರ್ನಾಟಕ ರಣಧೀರ ಪಡೆ ಎಂಬ ಸಂಘಟನೆಯ ಮೂಲಕ ಕೆಲಸ ಮಾಡುತ್ತಿದ್ದೇನೆ. ದಲಿತ ಸಮುದಾಯಕ್ಕೆ ಸೇರಿರುವ ನಾನು ಸೌಹಾರ್ದತೆ, ಸಮಾನತೆ ಮತ್ತು ಶಾಂತಿಗಾಗಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್, ಬುದ್ದ, ಬಸವಣ್ಣ, ಕುವೆಂಪು ಹಾಕಿಕೊಟ್ಟ ದಾರಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಸಮಾಜದ ಸ್ವಾಸ್ಥ್ಯ ಕದಡುವ ಪುನೀತ್ ಕೆರೆಹಳ್ಳಿ ಎಂಬಾತ ಇತ್ತಿಚೆಗೆ ಇದ್ರಿಸ್ ಪಾಶ ಎಂಬ ಅಮಾಯಕ ವ್ಯಾಪಾರಿಯ ಕೊಲೆ ನಡೆಸಿ ಜೈಲು ಸೇರಿದ್ದ. ಈತ ಜಾಮೀನಿನ ಮೇಲೆ ಹೊರ ಬಂದ ಬಳಿಕ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಬೆದರಿಕೆ ಒಡ್ಡಲು ಶುರು ಮಾಡಿದ. ಈ ಸಂದರ್ಭದಲ್ಲಿ ಈತನ ಇತಿಹಾಸ ಕೆದಕಿದಾಗ ಈತ ವೇಶ್ಯಾವಾಟಿಕೆಯನ್ನು ನಡೆಸುವ ಆರೋಪಿಯಾಗಿದ್ದು ಈತ ಮತ್ತು ಇತರರ ವಿರುದ್ದ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ 21.03.2013 ರಂದು IMMORAL TRAFFIC PREVENTION ಸೆಕ್ಷನ್ 3, 4, 5, 6, 9 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಈತನಿಂದ ನಿರೋದ್ ಪ್ಯಾಕೇಟ್ ಗಳನ್ನು ವಶಕ್ಕೆ ತೆಗೆದುಕೊಂಡು, ಸಂತ್ರಸ್ತ ಮಹಿಳೆಯರ ವೈದ್ಯಕೀಯ ವರದಿಯನ್ನೂ ತರಿಸಿಕೊಂಡು ಡಿಜೆ ಹಳ್ಳಿ ಪೊಲೀಸರು ಆ ಬಳಿಕ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್‌‌ನಲ್ಲಿ ಪುನೀತ್ ಕೆರೆಹಳ್ಳಿ ಸೇರಿದಂತೆ ಇನ್ನಿತರರು ಹಣಗಳಿಕೆ ಉದ್ದೇಶಕ್ಕಾಗಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಡಿ ಜೆ ಹಳ್ಳಿ ಪೊಲೀಸ್ ನಿರೀಕ್ಷಕರು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿತ್ತು. ಈ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಯ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಲಿ ಎಂಬ ಸಾಮಾಜಿಕ ಕಳಕಳಿಯಿಂದ ಮಾಧ್ಯಮದ ವರದಿಯನ್ನು ನನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದೆ. ಪುನೀತ್ ಕೆರೆಹಳ್ಳಿಯು ಅಕ್ಟೋಬರ್ 17 ರಂದು ಆತನ ಫೇಸ್ ಬುಕ್ ನಲ್ಲಿ ನನ್ನ ಮತ್ತು ನನ್ನ ಮಕ್ಕಳ ಘನತೆಗೆ ಧಕ್ಕೆ ಬರುವಂತೆ ಬರೆದಿದ್ದಾನೆ.

ಪುನೀತ್ ಕೆರೆಹಳ್ಳಿಯ ಬರಹ ಮೂಲಕ ನಡೆಸಿದ ಅಪರಾಧ ಈ ರೀತಿ ಇದೆ: “ಮೊನ್ನೆ  ಭೈರಪ್ಪ ಹರೀಶ್ ಕುಮಾರ್ ಮತ್ತು Surya Mukundaraj ಅವರಿಗೆ ನೀವು ಒಬ್ಬ ಅಪ್ಪನಿಗೆ ಜನಿಸಿದ್ದರೆ ಹಾಗೂ ನಿಮ್ಮ ಮಕ್ಕಳು ನಿಮಗೆ ಜನಿಸಿದ್ದರೆ! ನನ್ನ ಮೇಲೆ ನೀವು ಮಾಡಿರುವ ಆರೋಪಕ್ಕೆ ದಾಖಲೆ ತೆಗೆದುಕೊಂಡು ಬಹಿರಂಗವಾಗಿ ನೇರ ಚರ್ಚೆಗೆ ಬನ್ನಿ ಎಂದ ತಕ್ಷಣ! ಕಕ್ಕಾಬಿಕ್ಕಿ! ಆದ ಈ ನಪುಂಸಕರು ತಮ್ಮ ಮಕ್ಕಳ ಅಪ್ಪ ನಾವೇ ಎಂದು ಹೇಗಾದರೂ ಸಾಬೀತು ಮಾಡಲೇ ಬೇಕು ಎಂದು ತಲೆ ಕೆಡಿಸಿಕೊಂಡು, ಪೊಲೀಸರು ಪುನೀತ್ ಕೆರೆಹಳ್ಳಿಯವರ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸುವ ದೋಷಾರೋಪಣ ಪಟ್ಟಿಯಲ್ಲಿ ಏನಾದರೂ ಸಾಕ್ಷಿ ಸಿಗಬಹುದೇನೋ ಎಂದು ಹುಡುಕಲು ನಪುಂಸಕ ನವೀನ್ ಸೂರಿಂಜೆಗೆ ಹೇಳಿದರಂತೆ, ಪಾಪ ಆ ಗುಲಾಮ ರಾತ್ರಿ ಎಲ್ಲಾ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಇವರಿಬ್ಬರ ಗಂಡಸ್ತನ ಕಾಪಾಡಲು️ ತುಂಬಾ ಕಸರತ್ತು ನೆಡೆಸಿದನಂತೆ, ಸಂಪೂರ್ಣ ದೋಷಾರೋಪಣ ಪಟ್ಟಿ ಓದಿದ ಮೇಲೆ ಸ್ವತಃ ಪೊಲೀಸ್ ತನಿಖಾಧಿಕಾರಿಗಳೆ ಪುನೀತ್ ಕೆರೆಹಳ್ಳಿಯವರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ ಹಾಗೂ ಆ ದೋಷಾರೋಪಣ ಪಟ್ಟಿಯಲ್ಲಿ ಪುನೀತ್ ಕೆರೆಹಳ್ಳಿಯವರ ವಿರುದ್ಧ ತೋರಿಸಲು ಯಾವುದೆ ಸಾಕ್ಷಿ ಇಲ್ಲ ಎನ್ನುವ ಸತ್ಯ ತಿಳಿದು ನಂತರ ಇವರಿಬ್ಬರಿಗೂ ಕರೆ ಮಾಡಿ ನಿಮ್ಮ ಮನೆಯವರ ಶೀಲ ಉಳಿಸಿಕೊಳ್ಳುವುದು ಕಷ್ಟವಿದೆ! ಯಾವುದೇ ಕಾರಣಕ್ಕೂ ಬಹಿರಂಗ ಚೆರ್ಚೆಗೆ ಮಾತ್ರ ಹೋಗಬೇಡಿ ಎಂದನಂತೆ, ನಂತರ ಇವರಿಬ್ಬರೂ ಅವನ ಕಾಲು ಹಿಡಿದು ನೀನೆ ನಮ್ಮ ಮನೆಯವರ ಶೀಲ ಕಾಪಾಡಬೇಕು ಎಂದರಂತೆ, ಅದಕ್ಕೆ ಅವನು ಪೊಲೀಸರೆ ತಪ್ಪು ಮಾಡಿದ್ದಾರೆ ಎಂದು ಒಂದು ಆರ್ಟಿಕಲ್ ಬರೆಯುತ್ತೇನೆ ಎಂದು ಒಂದು ಸುಳ್ಳು ಕಥೆ ಬರೆದನಂತೆ. ಕಥೆ ಹೇಗಿದೆ?” ಎಂದು ಪೋಸ್ಟ್ ಹಾಕಲಾಗಿದೆ.

ಪುನೀತ್ ಕೆರೆಹಳ್ಳಿಯ ಸದರಿ ಪೋಸ್ಟ್ ನಲ್ಲಿ ನನ್ನ ಪತ್ನಿಯ ಶೀಲದ ಬಗ್ಗೆ ಎರಡೆರಡು ಭಾರಿ ಉದ್ದೇಶಪೂರ್ವಕವಾಗಿ ಉಲ್ಲೇಖಿಸಲಾಗಿದೆ. ಇದು IPC ಸೆಕ್ಷನ್ 509 (word, gesture or act intended to insult the modesty of a woman) ಪ್ರಕಾರ ಅಪರಾಧವಾಗಿದೆ. ಇದೇ ಪೋಸ್ಟ್‌‌ನಲ್ಲಿ ನಿಮ್ಮ ಮಕ್ಕಳು ನಿಮಗೆ ಜನಿಸಿದ್ದರೆ, ತಮ್ಮ ಮಕ್ಕಳ ಅಪ್ಪ ನಾವೇ ಎಂದು ಮಕ್ಕಳ ಬಗ್ಗೆ ಅಶ್ಲೀಲವಾಗಿ ಬರೆದು, ಬೇರೆಯವರನ್ನೂ ಮಕ್ಕಳ ವಿರುದ್ದದ ಅಪರಾಧಕ್ಕೆ ಪ್ರಚೋದಿಸಿರುವುದು ಪೋಕ್ಸೋ  ಸೆಕ್ಷನ್‌ 11, 12, 16ರ ಪ್ರಕಾರ ಅಪರಾಧವಾಗುತ್ತದೆ.

ಇದೇ ಪೋಸ್ಟ್‌‌ನಲ್ಲಿ “ನಿಮ್ಮ ಮನೆಯವರ ಶೀಲ ಉಳಿಸಿಕೊಳ್ಳುವುದು ಕಷ್ಟವಾಗಲಿದೆ” ಎಂದು ಬರೆದು ಲೈಂಗಿಕ ದೌರ್ಜನ್ಯದ ಬೆದರಿಕೆ ಒಡ್ಡಲಾಗಿದೆ. ಇದು ಐಪಿಸಿ 354 (The law Section 354 IPC makes it a special crime to use force against a woman, or even threaten to use force, if the intention is to ‘outrage her modesty’. It treats it more seriously than normal and criminal force by allowing the police to make arrests for such crimes without a warrant) ಪ್ರಕಾರ ಸ್ಪಷ್ಟ ಅಪರಾಧವಾಗಿದೆ.

ಮುಂದುವರೆದು ಅದೇ ದಿನ ಅಂದರೆ ಅಕ್ಟೋಬರ್  17, 2023 ರಂದು ಪುನೀತ್ ಕೆರೆಹಳ್ಳಿಯು ಆತನ ಫೇಸ್ ಬುಕ್‌‌ನಲ್ಲಿ ಹೀಗೆ ಬರೆಯುತ್ತಾನೆ: “ಕೊನೆಗೂ ತಾನು ನಪುಂಸಕ ಎಂದು ಒಪ್ಪಿಕೊಂಡ ಇಷ್ಟು ದಿನ ಇವನೇ ನೋಡಿದ ಹಾಗೆ ಮಾತಾಡುತಿದ್ದ! ದಾಖಲೆ ಕೇಳಿದ ತಕ್ಷಣ ಪೊಲೀಸರ ಮೇಲೆ ಹೇಳುತಿದ್ದಾನೆ! ಲೇ ಷಂಡ ಭೈರಪ್ಪ ನೀನು ನಿಜವಾಗಿಯೂ ಅದೇ ಹಾಗಿದ್ದರೆ ಪೊಲೀಸರು ನನ್ನ ತಲೆಹಿಡುಕ ಎಂದು ಕರೆದಿರುವುದಕ್ಕೆ ದಾಖಲೆ ತೆಗೆದುಕೊಂಡು ಬಹಿರಂಗ ಚೆರ್ಚೆಗೆ ಬಾ! ಇಲ್ಲದಿದ್ದರೆ ಅನ್ಯಾಯವಾಗಿ ನಾಡಿನ ಜನರು ನಿನ್ನ ಮಕ್ಕಳ ಜನನದ ಬಗ್ಗೆ ಅನುಮಾನ ವ್ಯಕ್ತಪಡಿಸಬೇಕಾಗುತ್ತದೆ! ನಿನ್ನ ಮಕ್ಕಳು ಹಾಗೂ ಕುಟುಂಬ ತಲೆ ಎತ್ತಿ ತಿರುಗಾಡದಂತೆ ಹಾಗುತ್ತದೆ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಈ ಪೋಸ್ಟ್‌‌ನಲ್ಲಿ “ನಾಡಿನ ಜನರು ಅನ್ಯಾಯವಾಗಿ ನಿನ್ನ ಮಕ್ಕಳ ಜನನದ ಬಗ್ಗೆ ಅನುಮಾನ ವ್ಯಕ್ತಪಡಿಸಬೇಕಾಗುತ್ತದೆ: ನಿನ್ನ ಮಕ್ಕಳು ಹಾಗೂ ಕುಟುಂಬ ತಲೆ ಎತ್ತಿ ತಿರುಗಾಡದಂತೆ ಆಗುತ್ತದೆ” ಎಂದು ಪುನೀತ್ ಕೆರೆಹಳ್ಳಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಒಡ್ಡಿದ್ದಾನೆ. ನನ್ನ ಮಕ್ಕಳಿಬ್ಬರೂ ಅಪ್ರಾಪ್ತರಾಗಿದ್ದು, ಹೀಗೆ ಅಶ್ಲೀಲವಾಗಿ ಬೆದರಿಕೆ ಒಡ್ಡುವುದು, ಅಪ್ರಾಪ್ತ ಮಕ್ಕಳನ್ನು ತಲೆಎತ್ತಿ ತಿರುಗದಂತೆ ಮಾಡುತ್ತೇನೆ ಎನ್ನುವುದು ಮತ್ತು ಸಾರ್ವಜನಿಕರನ್ನೂ ಮಕ್ಕಳ ವಿರುದ್ದ ದೌರ್ಜನ್ಯಕ್ಕೆ ಪ್ರಚೋದಿಸುವುದು ಪೋಕ್ಸೋ ಸೆಕ್ಷನ್ 11, 12, 16ರ ಪ್ರಕಾರ ಅಪರಾಧವಾಗುತ್ತದೆ.

ಮುಂದುವರೆದು ಇದೇ ಪುನೀತ್ ಕೆರೆಹಳ್ಳಿ ಅಕ್ಟೋಬರ್ 18, 2023 ರಂದು ಆತನ ಫೇಸ್ ಬುಕ್‌‌ನಲ್ಲಿ ಪೋಸ್ಟ್ ಹಾಕಿದ್ದಾನೆ. ಸದರಿ ಪೋಸ್ಟ್ ಈ ರೀತಿ ಬರೆಯಲಾಗಿದೆ : “ಲೇ ನಪುಂಸಕ ಭೈರಪ್ಪ ಹರೀಶ್ ಕುಮಾರ್  ಯಾವನೋ ಸಂತೆಗೆ ಜನಿಸಿದವನು ಎಡಿಟ್  ಮಾಡಿರೋ audio ಕೇಳಿ social mediaದಲ್ಲಿ ಬಂದ ಸುದ್ದಿ ನೋಡಿ ನನ್ನ ಮೇಲೆ ಆರೋಪ ಮಾಡಿದ ಷಂಡ ನೀನು! ಕನ್ನಡ ಪರ ಹೋರಾಟಗಾರ ಅಂತ ಹೇಳಿಕೊಳ್ಳಲು ನಾಚಿಕೆ ಆಗುವುದಿಲ್ಲವಾ ನಿನಗೆ? ಒಬ್ಬ ಹೋರಾಟಗಾರನಾಗಿ ಯಾರಮೇಲಾದರೂ ವೈಯಕ್ತಿಕವಾಗಿ ಆರೋಪ ಮಾಡಬೇಕಾದರೆ ಸರಿಯಾಗಿ ಪರಿಶೀಲಿಸಿ ನಂತರ ಆರೋಪ ಮಾಡಬೇಕು ಕಣೋ ದರಿದ್ರದವನೆ! ಎಫ್‌ಐಆರ್‌ನಲ್ಲಿ ಹೆಸರು ಇದ್ದ ಮಾತ್ರಕ್ಕೆ ನಾನು ಆರೋಪಿ ಆಗಲ್ಲ ಕಣೋ ಕೊಡಂಗಿ! ಪೊಲೀಸರು ತನಿಖೆ ಮಾಡಿ ಆರೋಪ ಪಟ್ಟಿ ಸಲ್ಲಿಸಬೇಕು. ಪೊಲೀಸರು ನ್ಯಾಯಾಲಯಕ್ಕೆ ನನ್ನ ವಿರುದ್ಧ ಆರೋಪ ಮಾಡಿದ್ದಾರಾ? ಏನೆಂದು ಆರೋಪ ಮಾಡಿದ್ದಾರೆ? ಅದಕ್ಕೆ ಏನು ಸಾಕ್ಷಿ ತೋರಿಸಿದ್ದಾರೆ ಅಂತ ದಾಖಲೆ ತೆಗೆದುಕೊಂಡು ಬಹಿರಂಗ ಚೆರ್ಚೆಗೆ ಬಾರೋ ಸಂತೆಗೆ ಜನಿಸಿದವನೆ ಬಾ! ನೋಡೋಣ!” ಎಂದು ಬರೆದಿದ್ದಾನೆ.

ಸದರಿ ಪೋಸ್ಟ್ ನಲ್ಲಿ ನನ್ನನ್ನು ಧರಿದ್ರದವನೇ ಎಂದಿರುವುದು ನಾನು ದಲಿತನಾಗಿರುವ ಕಾರಣಕ್ಕೇ ಆಗಿದೆ. ಇದಲ್ಲದೆ ನನ್ನನ್ನು ಸಂತೆಗೆ ಜನಿಸಿದವನು, ನಪುಂಸಕ, ಷಂಡ ಎಂದು ನಿಂದನೆ ಮಾಡಲಾಗಿದೆ. ನಾನು ಜಾತಿಯಿಂದ ದಲಿತನಾಗಿದ್ದು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989 u/s 3(1)(r), 3(1)(u), 3(1)(x)ನ ಪ್ರಕಾರ ಪುನೀತ್ ಕೆರೆಹಳ್ಳಿಯು ಅಪರಾಧ ಎಸಗಿದ್ದಾನೆ.

ಆದ್ದರಿಂದ , IPC 509, 354, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 67, ಪೋಕ್ಸೋ ಕಾಯ್ದೆ ಸೆಕ್ಷನ್ 11, 12, 16 ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ u/s 3(1)(r), 3(1)(u), 3(1)(x) ಅಡಿಯಲ್ಲಿ ಕೃತ್ಯ ಎಸಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು.

ಈ ಮೇಲಿನ ದೂರನ್ನು ಅನ್ವಯಿಸಿ ಪುನೀತ್ ಕೆರೆಹಳ್ಳಿ ವಿರುದ್ದ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ (U/s-3(1) (r)); ಮಾಹಿತಿ ತಂತ್ರಜ್ಞಾನ ಕಾಯ್ದೆಯ (U/s-67); ಐಪಿಸಿ ಸೆಕ್ಷನ್‌ U/s-504,506,509(a) ಅಡಿಯಲ್ಲಿ ಜಾಮೀನು ರಹಿತ ಎಫ್‌ಐಆರ್‌ ದಾಖಲಾಗಿದೆ. ಅರೆಸ್ಟ್ ಆಗುವ ಸಾಧ್ಯತೆ ಇದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಿಸಿಲಿನ ತಾಪಕ್ಕೆ ನಿರ್ಜಲೀಕರಣ; ಇಬ್ಬರು ಮಕ್ಕಳು ಸಾವು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಭೀಕರ ಬಿಸಿಲಿನ ತಾಪಕ್ಕೆ...

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ಕೆಲವೇ ಹೊತ್ತಲ್ಲಿ ಎಸ್‌ಐಟಿ ರಚನೆ: ಡಾ. ಜಿ ಪರಮೇಶ್ವರ್‌

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ...

ಬರ ಪರಿಹಾರ | ಬಾಕಿ ಮೊತ್ತ ತಕ್ಷಣ ಬಿಡುಗಡೆ ಮಾಡಲು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡುವ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯ...

‘ಪ್ರಧಾನಿ ಮೋದಿಗೆ ಗುಜರಾತ್‌ನಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಓಕೆ, ಇತರೆಡೆ ಮಾತ್ರ ಬೇಡ’

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ....