ಬೀದರ್ ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಡಿಸೆಂಬರ್ 24 ರಂದು ‘ಶಾಹೀನ್ ಪ್ರತಿಭಾ ಅನ್ವೇಷಣೆ ಪರೀಕ್ಷೆ’ (ಎಸ್‍ಟಿಎಸ್‍ಇ) ಹಮ್ಮಿಕೊಂಡಿದೆ.
ಸದ್ಯ 8ನೇ ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಿದೆ.
6, 7 ಮತ್ತು 8ನೇ ತರಗತಿಯ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ (ಎನ್‍ಸಿಇಆರ್ ಟಿ) ವಿಷಯದ ಪುಸ್ತಕಗಳು 8ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯ ಪಠ್ಯಕ್ರಮ ಆಗಿರಲಿವೆ. 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಪಠ್ಯಕ್ರಮವು 8, 9 ಮತ್ತು 10ನೇ ತರಗತಿಯ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ (ಎನ್‍ಸಿಇಆರ್ ಟಿ) ಪುಸ್ತಕ ಮತ್ತು ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
“ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸುವ 8ನೇ ತರಗತಿ ವಿದ್ಯಾರ್ಥಿಗಳಿಗೆ ರೂ. 1.40 ಲಕ್ಷ ವಿದ್ಯಾರ್ಥಿ ವೇತನದ ರೂಪದಲ್ಲಿ 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಉಚಿತ ವಸತಿ, ಊಟ ಸಹಿತ ಶಿಕ್ಷಣ, ನೀಟ್/ಜೆಇಇ ತರಬೇತಿ ಕೊಡಲಾಗುವುದು. ಟಾಪರ್ ಗಳಿಗೆ ರೂ. 70 ಸಾವಿರದ ಟ್ಯೂಷನ್ ಶುಲ್ಕ, ವಿಜೇತರಿಗೆ ರೂ. 35 ಸಾವಿರದ ಟ್ಯೂಷನ್ ಶುಲ್ಕ ಹಾಗೂ ಕನಿಷ್ಠ ಅಂಕ ಪಡೆದು ತೇರ್ಗಡೆಯಾಗುವ ಪ್ರತಿ ಸಾಧಕರಿಗೂ ರೂ. 7 ಸಾವಿರದ ಟ್ಯೂಷನ್ ಶುಲ್ಕ ಕೊಡಲಾಗುವುದು” ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
“ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯುವ 10ನೇ ತರಗತಿ ವಿದ್ಯಾರ್ಥಿಗಳಿಗೆ ರೂ. 1.40 ಲಕ್ಷ ವಿದ್ಯಾರ್ಥಿ ವೇತನದ ರೂಪದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಉಚಿತ ವಸತಿ, ಊಟ ಸಹಿತ ಶಿಕ್ಷಣ, ನೀಟ್/ಜೆಇಇ ತರಬೇತಿ ನೀಡಲಾಗುವುದು. ಟಾಪರ್ ಗಳಿಗೆ ರೂ. 70 ಸಾವಿರದ ಟ್ಯೂಷನ್ ಶುಲ್ಕ, ವಿಜೇತರಿಗೆ ರೂ.35 ಸಾವಿರದ ಟ್ಯೂಷನ್ ಶುಲ್ಕ ಹಾಗೂ ಕನಿಷ್ಠ ಅಂಕ ಪಡೆದು ತೇರ್ಗಡೆಯಾಗುವ ಪ್ರತಿ ಸಾಧಕರಿಗೂ ರೂ. 7 ಸಾವಿರದ ಟ್ಯೂಷನ್ ಶುಲ್ಕ ಕೊಡಲಾಗುವುದು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಮಾಸ್ ನೆಪ ಮಾತ್ರವಷ್ಟೇ, ಪ್ಯಾಲೆಸ್ತೀನ್ ಇಲ್ಲವಾಗಿಸುವುದು ಇಸ್ರೇಲ್ ಗುರಿ: ಚಿಂತಕ ಶಿವ ಸುಂದರ್
ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಪ್ರತಿ ವರ್ಷ ವಿದ್ಯಾರ್ಥಿ ವೇತನ ಕೊಡುತ್ತಿದೆ. ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು. ವಿದ್ಯಾರ್ಥಿಗಳು ಹೆಸರು ನೋಂದಣಿಗೆ https://shaheengroup.org/stse-shaheen-talent-search-exam-2023, ಹೆಚ್ಚಿನ ಮಾಹಿತಿಗೆ ಸಮೂಹದ ವೆಬ್‍ಸೈಟ್ www.shaheengroup.org ಗೆ ಭೇಟಿ ನೀಡಬಹುದು ಅಥವಾ 18001216235 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.