ಅಕ್ಟೋಬರ್ 2022 ಮತ್ತು ಸೆಪ್ಟೆಂಬರ್ 2023 ರ ನಡುವೆ ಅಮೆರಿಕ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಸುಮಾರು 96,917 ಭಾರತೀಯರನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಇತ್ತೀಚಿನ ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣಾ ವಿಭಾಗ ತನ್ನ ಅಂಕಿಅಂಶ ಬಹಿರಂಗಪಡಿಸಿದೆ.
ಕಾನೂನುಬಾಹಿರವಾಗಿ ಅಮೆರಿಕ ಗಡಿಯನ್ನು ಪ್ರವೇಶಿಸುತ್ತಿದ್ದಾಗ ಬಂಧಿತರಾದ ಭಾರತೀಯರು ಕಳೆದ ವರ್ಷಗಳಲ್ಲಿ ಐದು ಪಟ್ಟು ಹೆಚ್ಚಳವನ್ನು ಕಂಡಿದ್ದಾರೆ ಎಂದು ಅಂಕಿಅಂಶಗಳಲ್ಲಿ ವರದಿಯಾಗಿದೆ.
2019-20ರಲ್ಲಿ 19,883, 2020-21ರಲ್ಲಿ 30,662, 2021-22ರಲ್ಲಿ ಈ ಸಂಖ್ಯೆ 63,927 ಏರಿಕೆಯಾಗಿತ್ತು ಎಂದು ಅಂಕಿಅಂಶಗಳು ತಿಳಿಸಿವೆ.
ಅಕ್ಟೋಬರ್ 2022 ಮತ್ತು ಸೆಪ್ಟೆಂಬರ್ ನಡುವೆ ಬಂಧಿಸಲಾದ 96,917 ಭಾರತೀಯರಲ್ಲಿ 30,010 ಕೆನಡಾದ ಗಡಿಯಲ್ಲಿ ಮತ್ತು 41,770 ಮೆಕ್ಸಿಕೊ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಬಂಧಿತರನ್ನು ಅಪ್ರಾಪ್ತ ವಯಸ್ಕರು, ಕುಟುಂಬ ಹೊಂದಿರುವ ವಯಸ್ಕರು, ಒಂಟಿಯಾಗಿರುವ ವಯಸ್ಕರು ಮತ್ತು ಮಕ್ಕಳು ಹೊಂದಿಲ್ಲದ ವಯಸ್ಕರು ಎಂದು ನಾಲ್ಕು ವರ್ಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.
ಒಂಟಿಯಾಗಿರುವ ವಯಸ್ಕರು ದೊಡ್ಡ ವರ್ಗದಲ್ಲಿದ್ದಾರೆ. 2023 ರ ಆರ್ಥಿಕ ವರ್ಷದಲ್ಲಿ, 84,000 ಭಾರತೀಯ ವಯಸ್ಕರು ಅಕ್ರಮವಾಗಿ ಅಮೆರಿಕವನ್ನು ದಾಟಿದ್ದಾರೆ.
ಬಂಧಿತರಲ್ಲಿ 730 ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಅಮೆರಿಕ ಫೆಡರಲ್ ಸರ್ಕಾರದ ಹಣಕಾಸಿನ ವರ್ಷವು ಅಕ್ಟೋಬರ್ 1 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯುತ್ತದೆ.
ಈ ಸುದ್ದಿ ಓದಿದ್ದೀರಾ? ಕೇರಳ ಸಿಎಂಗೆ ಜೀವ ಬೆದರಿಕೆಯೊಡ್ಡಿದ 12 ವರ್ಷ ಬಾಲಕನ ಪೋಷಕರು ಹೇಳಿದ್ದೇನು ಗೊತ್ತೆ?
ಸೆನೆಟರ್ ಜೇಮ್ಸ್ ಲ್ಯಾಂಕ್‌ಫೋರ್ಡ್ ಗುರುವಾರ ಸೆನೆಟ್‌ನಲ್ಲಿ ಮಾತನಾಡಿ, ಈ ಜನರು ಹತ್ತಿರದ ವಿಮಾನ ನಿಲ್ದಾಣದ ಮೂಲಕ ಮೆಕ್ಸಿಕೊಕ್ಕೆ ತೆರಳಲು ಫ್ರಾನ್ಸ್‌ನಂತಹ ದೇಶಗಳಿಗೆ ಹೋಗುವುದಾಗಿ ಹೇಳಿ ಸುಮಾರು ನಾಲ್ಕು ವಿಮಾನಗಳನ್ನು ತೆಗೆದುಕೊಳ್ಳುತ್ತಾರೆ. ನಂತರ ಗಡಿಯವರೆಗೆ ಬಾಡಿಗೆಗೆ ಪಡೆದ ಬಸ್ ಅನ್ನು ಪಡೆದು ಅಂತಿಮ ಪ್ರದೇಶದವರೆಗೂ ಪ್ರಯಾಣಿಸುತ್ತಾರೆ.
“ಅವರು ಸಿಕ್ಕಿಬಿದ್ದಾಗ ಹೇಳುವ ಮಾತು ನನ್ನ ದೇಶದಲ್ಲಿ ನನಗೆ ಭಯವಿದೆ” ಎಂದು ಲ್ಯಾಂಕ್‌ಫೋರ್ಡ್ ಹೇಳಿದರು.
“ಈ ವರ್ಷ ಇಲ್ಲಿಯವರೆಗೆ ಭಾರತದಿಂದ 45,000 ಜನರು ನಮ್ಮ ದಕ್ಷಿಣದ ಗಡಿಯ ಮೂಲಕ ಭದ್ರತಾ ಅಧಿಕಾರಿಗಳಿಗೆ ಹಣವನ್ನು ನೀಡಿ ದಾಟಿದ್ದಾರೆ. ಅವರು ಸಿಕ್ಕಿಬಿದ್ದಾಗ ಭಾರತದಿಂದ ತಮಗೆ ಭಯವಿದೆ ಎಂದು ಹೇಳಿದರು” ಎಂದು ಲ್ಯಾಂಕ್‌ಫೋರ್ಡ್ ತಿಳಿಸಿದ್ದಾರೆ.
“ನಾವು ಪ್ರಪಂಚದಾದ್ಯಂತದ ಆಗಮಿಸುವ ನಿರಾಶ್ರಿತರನ್ನು ಮೆಕ್ಸಿಕೊ ಗಡಿಯಿಂದ ಕರೆದೊಯ್ಯುತ್ತೇವೆ. ಆಶ್ರಯ ಪಡೆಯುವವರು ತಾವು ನಿರಾಶ್ರಿತರು ಎಂಬ ಮಾನದಂಡ ಹೊಂದಿರುತ್ತಾರೆ. ಅವರು ಮುಂದಿನ ಸುರಕ್ಷಿತ ಸ್ಥಳಕ್ಕೆ ಹೋಗಬೇಕು, ಅಲ್ಲಿಗೆ ಹೋಗಿ ಆಶ್ರಯವನ್ನು ಪಡೆದುಕೊಳ್ಳಬೇಕು. ಇದು ಅಂತಾರಾಷ್ಟ್ರೀಯ ಮಾನದಂಡವಾಗಿದೆ” ಎಂದು ಲ್ಯಾಂಕ್‌ಫೋರ್ಡ್ ಹೇಳಿದರು.