ರೇವ್ ಪಾರ್ಟಿಗಾಗ ಹಾವಿನ ವಿಷ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಚಿಂತನೆ ಹರಡುತ್ತಿದ್ದ ಯೂಟ್ಯೂಬರ್, ಬಿಗ್ ಬಾಸ್ ಒಟಿಟಿ 2ರ ವಿಜೇತ ಎಲ್ವಿಶ್ ಯಾದವ್ ಮತ್ತು ಆತನ ಐವರು ಸಹಚರರ ವಿರುದ್ಧ ನೋಯ್ಡಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಹಾವು ಮತ್ತು ಅವುಗಳ ವಿಷವನ್ನು ಸರಬರಾಜು ಮಾಡುತ್ತಿದ್ದ ಎಲ್ವಿಶ್ ಯಾದವ್ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿನ ವಿವಿಧ ಫಾರ್ಮ್ ಹೌಸ್‌ಗಳಲ್ಲಿ ಹಾವುಗಳನ್ನು ಬಳಸಿಕೊಂಡು ಈ ರೇವ್ ಪಾರ್ಟಿಗಳನ್ನು ಆಯೋಜಿಸಲಾಗಿತ್ತು ಎಂದು ಐವರು ವ್ಯಕ್ತಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಎಲ್ವಿಶ್ ಯಾದವ್ ಅವರು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗಾಗಿ ವಿಡಿಯೊಗಳನ್ನು ಶೂಟ್ ಮಾಡಲು ಹಾವುಗಳನ್ನು ಬಳಸಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಬಂಧನದ ಬಳಿಕ ಅವರ ಬಳಿಯಿಂದ 20 ಮಿಲ್ಲಿ ವಿಷ, ರೇವ್ ಪಾರ್ಟಿಗಳ ಸಮಯದಲ್ಲಿ ಅವರು ಬಳಸಿದ 9 ವಿಷಕಾರಿ ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ. ನೋಯ್ಡಾ ಪೊಲೀಸ್ ಎಫ್‌ಐಆರ್ ಪ್ರಕಾರ, 5 ನಾಗರಹಾವು, 1 ಹೆಬ್ಬಾವು ಮತ್ತು 1 ಎರಡು ತಲೆಯ ಹಾವು, ಒಂದು ಕೇರೆ ಹಾವು ವಶಪಡಿಸಿಕೊಳ್ಳಲಾಗಿದೆ.
ಎಲ್ವಿಶ್ ಯಾದವ್ ವಿರುದ್ಧ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಎನ್‌ಜಿಒ, ಹಾವಿನ ವಿಷ ಬಳಕೆ ಮಾಡಿ ರೇವ್ ಪಾರ್ಟಿ ಮಾಡುತ್ತಿದ್ದ ವಿರುದ್ಧ ದೂರು ದಾಖಲಿಸಿತ್ತು.
रेव पार्टी,जिंदा कोबरा और विदेशी लड़कियां…नोएडा में एल्विश यादव के खिलाफ FIR दर्ज https://t.co/skXey5oNHz pic.twitter.com/sBGC4pfBgp
— Lavely Bakshi (@lavelybakshi) November 3, 2023
ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿಸಲ್ಪಟ್ಟ ಆಗ್ನೇಯ ದೆಹಲಿಯ ಬದರ್‌ಪುರದ ಮೊಹರ್‌ಬಂದ್ ಗ್ರಾಮದ ನಿವಾಸಿಗಳಾದ ರಾಹುಲ್(32), ತೀತುನಾಥ್ (45), ಜೈಕರನ್ (50), ನಾರಾಯಣ್ (50) ಮತ್ತು ರವಿನಾಥ್ (45) ಎಂದು ಗುರುತಿಸಲಾಗಿದೆ ಎಂದು ನೋಯ್ಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
ವಿದೇಶಿ ಪ್ರಜೆಗಳಿಗೂ ಆತಿಥ್ಯ ನೀಡಿದ್ದ ಈ ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷ ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಎಫ್‌ಐಆರ್‌ನಲ್ಲಿ ಎಲ್ವಿಶ್ ಯಾದವ್ ಸೇರಿದಂತೆ ಆರು ಮಂದಿಯ ಹೆಸರುಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Big Breaking : Exclusive visuals of the Cobra and snakes rescued from Elvish Yadav’s rave party.
6 arrested , Elvish Yadav reportedly absconding.
Manoharlal Khattar, Eknath Shinde and other prominent people who glamorised this guy should be ashamed today. pic.twitter.com/Ya7H9BVL0k
— Roshan Rai (@RoshanKrRaii) November 3, 2023
ಆರು ಆರೋಪಿಗಳ ಪೈಕಿ ಐವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆದರೆ ಎಲ್ವಿಶ್ ಯಾದವ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಅವರು ತಲೆಮರೆಸಿಕೊಂಡಿರುವುದಾಗಿ ವರದಿಯಾಗಿದೆ. ವಶಪಡಿಸಿಕೊಳ್ಳಲಾಗಿರುವ ಹಾವು ಹಾಗೂ ಹಾವಿನ ವಿಷವನ್ನು, ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
FIR against Youtuber #ElvishYadav and his 5 associates. Rahul, Titunath, Jayakaran, Narayan, Ravinath are currently in custody.
According to the FIR, 20 ml of Snake venom, 9 poisonous snakes were found from them ( 5 cobra, 1 python, 1 two-headed snake, 1 Rat Snake). According… pic.twitter.com/3ZQKtkEFpn— Mohammed Zubair (@zoo_bear) November 3, 2023
ಎಲ್ವಿಶ್ ಯಾದವ್ ಮತ್ತು ಆತನ ಸಹಚರರನ್ನು ಸ್ವಲ್ಪ ನಾಗರಹಾವಿನ ವಿಷವನ್ನು ನೀಡುವಂತೆ ಕೇಳಿ ತಮ್ಮ ಖೆಡ್ಡಾಕ್ಕೆ ಬೀಳಿಸಿದ ಬಗ್ಗೆಯೂ ಕೂಡ ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿವರಿಸಿದ್ದಾರೆ.
Statement by @Manekagandhibjp on Elvish Yadav. pic.twitter.com/5pwSmejGLX
— Mohammed Zubair (@zoo_bear) November 3, 2023
ಎಲ್ವಿಶ್ ಯಾದವ್ ಯೂಟ್ಯೂಬ್‌ನಲ್ಲಿ 7.51 ಮಿಲಿಯನ್ ಚಂದಾದಾರರನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 15.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಬಲಪಂಥೀಯ ಚಿಂತನೆಗಳನ್ನು ಹಾಗೂ ಬಿಜೆಪಿ ಪರ ಹೆಚ್ಚು ಪ್ರಚಾರ ಮಾಡುತ್ತಿದ್ದರು.
🙏🏻🙏🏻 pic.twitter.com/13WLDKJzYb
— Elvish Yadav (@ElvishYadav) November 3, 2023
ಎಲ್ವಿಶ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ವಿಡಿಯೋ ಹರಿಯ ಬಿಟ್ಟಿರುವ ಎಲ್ವಿಶ್ ಯಾದವ್, ತನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿಕೆ ನೀಡಿದ್ದಾನೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದು, ಎಲ್ವಿಶ್ ಯಾದವ್ ಅವರು ಹರ್ಯಾಣ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.