40 ವರ್ಷದ ದಲಿತ ಮಹಿಳೆಯೊಬ್ಬರನ್ನು ಅತ್ಯಾಚಾರವೆಸಗಿದ ನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಹತ್ಯೆಗೀಡಾದ ಮಹಿಳೆ ರಾಜ್‌ಕುಮಾರ್ ಶುಕ್ಲಾ ಎಂಬುವವರ ಮನೆಗೆ ಹಿಟ್ಟಿನ ಗಿರಣಿಯನ್ನು ಸ್ವಚ್ಛಗೊಳಿಸಲು ಹೋಗಿದ್ದರು. ಆಕೆಯ 20 ವರ್ಷದ ಮಗಳು ಶುಕ್ಲಾ ಮನೆಯ ಬಳಿ ತಲುಪಿದಾಗ ಒಳಗಿನಿಂದ ಚಿಲಕ ಹಾಕಿದ ಕೋಣೆಯಿಂದ ತಾಯಿಯ ಕಿರುಚಾಟ ಕೇಳಿದೆ ಎಂದು ಸ್ಟೇಷನ್ ಹೌಸ್ ಪೊಲೀಸ್ ಅಧಿಕಾರಿ ಸಂದೀಪ್ ತಿವಾರಿ ತಿಳಿಸಿದ್ದಾರೆ.
ಬಾಲಕಿಯು ಸ್ವಲ್ಪ ಸಮಯದ ನಂತರ ಕೋಣೆಯ ಬಾಗಿಲು ತೆರೆದಾಗ ತಾಯಿಯ ಶವ ಮೂರು ತುಂಡುಗಳಾಗಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಘಟನೆಯ ನಂತರ, ಮಾಲೀಕ ರಾಜ್‌ಕುಮಾರ್ ಶುಕ್ಲಾ, ಅವರ ಸಹೋದರ ಬೌವಾ ಶುಕ್ಲಾ ಮತ್ತು ರಾಮಕೃಷ್ಣ ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಮಾಯಕ ಕಂದಮ್ಮಗಳು ಸಾಯುತ್ತಿವೆ, ಜಗತ್ತು ಮೌನವಾಗಿದೆ: ಕ್ರಿಕೆಟಿಗ ಇರ್ಫಾನ್ ಪಠಾಣ್ ನೋವಿನ ನುಡಿ
ಅಮಾನುಷ ಘಟನೆಯ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಂದಾದಲ್ಲಿ ದಲಿತ ಮಹಿಳೆಯೊಬ್ಬರ ಅತ್ಯಾಚಾರ ಮತ್ತು ಭೀಕರ ಹತ್ಯೆಯ ಸುದ್ದಿ ಹೃದಯ ವಿದ್ರಾವಕವಾಗಿದೆ. ಉತ್ತರ ಪ್ರದೇಶದ ಮಹಿಳೆಯರು ಭಯಗೊಂಡಿದ್ದಾರೆ ಮತ್ತು ಕೋಪಗೊಂಡಿದ್ದಾರೆ ಎಂದು ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
बांदा में एक दलित के साथ बलात्कार व जघन्य हत्या की जो ख़बर आई है, वो दिल दहला देने वाली है। उप्र की महिलाएं डरी हुई हैं और अंदर-ही-अंदर आक्रोशित भी।
साथ ही आईआईटी बीएचयू की महिला छात्रा के साथ अभद्रता के बाद निर्वस्त्र कर वीडियो बनाने की घटना उप्र की क़ानून-व्यवस्था के मुँह पर… pic.twitter.com/g96iu9MFIK
— Akhilesh Yadav (@yadavakhilesh) November 2, 2023
ಇದರ ಜೊತೆಗೆ ಐಐಟಿ-ಬಿಎಚ್‌ಯು ವಿದ್ಯಾರ್ಥಿನಿಯೊಬ್ಬಳನ್ನು ವಿವಸ್ತ್ರಗೊಳಿಸಿ ಅಸಭ್ಯ ವಿಡಿಯೋಗಳನ್ನು ರೆಕಾರ್ಡ್ ಮಾಡಿದ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಉಲ್ಲೇಖಿಸಿದ್ದಾರೆ.
“ಐಐಟಿ-ಬಿಎಚ್‌ಯು ವಿದ್ಯಾರ್ಥಿನಿಯೊಬ್ಬಳನ್ನು ವಿವಸ್ತ್ರಗೊಳಿಸಿದ ನಂತರ ವಿಡಿಯೋ ಮಾಡಿದ ಘಟನೆಯು ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಮುಖದ ಮೇಲೆ ಕಪಾಳಮೋಕ್ಷವಾಗಿದೆ. ಈ ಘಟನೆಗಳು ಬಿಜೆಪಿಯ ಶೂನ್ಯ ಸಹಿಷ್ಣುತೆಯ ದೊಡ್ಡ ಸುಳ್ಳನ್ನು ಬಹಿರಂಗಪಡಿಸುತ್ತದೆ” ಎಂದು ಅಖಿಲೇಶ್ ಹೇಳಿದ್ದಾರೆ.