ಅಮಾಯಕ ಕಂದಮ್ಮಗಳು ಸಾಯುತ್ತಿವೆ, ಜಗತ್ತು ಮೌನವಾಗಿದೆ: ಕ್ರಿಕೆಟಿಗ ಇರ್ಫಾನ್ ಪಠಾಣ್ ನೋವಿನ ನುಡಿ

Date:

ಇಸ್ರೇಲ್ – ಹಮಾಸ್ ಹೋರಾಟಗಾರರ ಯುದ್ಧದಲ್ಲಿ ಅಮಾಯಕರು ಮೃತಪಡುತ್ತಿದ್ದಾರೆ. ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಪ್ರಪಂಚದಾದ್ಯಂತದ ಕೆಲವು ಕ್ರೀಡಾಪಟುಗಳು ಈ ಇಸ್ರೇಲ್‌, ಗಾಝಾ ಪಟ್ಟಣದಲ್ಲಿ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ನಡುವೆ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ ಗಾಝಾ ದುರಂತದಲ್ಲಿ ದಿನನಿತ್ಯವು ಅಮಾಯಕರು ಮೃತಪಡುತ್ತಿರುವ ಬಗ್ಗೆ ನೋವನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಇರ್ಫಾನ್ ಪಠಾಣ್ ಅವರು, ‘ಗಾಝಾದಲ್ಲಿ 0-10 ವರ್ಷ ವಯಸ್ಸಿನ ಮುಗ್ಧ ಮಕ್ಕಳ ಹತ್ಯೆಯಾಗುತ್ತಿದೆ. ಇಷ್ಟೆಲ್ಲಾ ಆದರೂ ಜಗತ್ತು ಮೌನವಾಗಿದೆ. ಒಬ್ಬ ಕ್ರೀಡಾಪಟುವಾಗಿ ನನಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಮಾತ್ರ ಸಾಧ್ಯ. ಆದರೆ ವಿಶ್ವ ನಾಯಕರು ಒಂದಾಗಲು ಮತ್ತು ಈ ಪ್ರಜ್ಞಾಶೂನ್ಯ ಹತ್ಯೆಯನ್ನು ಕೊನೆಗೊಳಿಸಲು ಇದು ಉತ್ತಮ ಸಮಯ. ಗಾಝಾದಲ್ಲಿ ಮಕ್ಕಳ ಹತ್ಯೆಯನ್ನು ನಿಲ್ಲಿಸಿ” ಎಂದು ವಿಶ್ವಸಂಸ್ಥೆಗೆ ಟ್ಯಾಗ್‌ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ತೆಲಂಗಾಣ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಕಾಂಗ್ರೆಸ್‌ಗೆ ಬೆಂಬಲ ಎಂದ ವೈ ಎಸ್ ಶರ್ಮಿಳಾ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇತ್ತೀಚಿಗೆ ಇಸ್ರೇಲ್ ಗಾಝಾದ ಉತ್ತರದಲ್ಲಿರುವ ನಿರಾಶ್ರಿತರ ಶಿಬಿರವನ್ನು ನಾಶ ಮಾಡಿದೆ. ಹಮಾಸ್ ಇರುವ ಭೂಪ್ರದೇಶದಲ್ಲಿ ನೂರಾರು ಪ್ಯಾಲೇಸ್ತೀನ್‌ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್‌ ನಡೆಸುತ್ತಿರುವ ದಿನನಿತ್ಯದ ವೈಮಾನಿಕ ದಾಳಿಯಿಂದ ಪ್ಯಾಲಿಸ್ತೀನಿ ಸೇನೆಯ ಜೊತೆ ಸಾವಿರಾರು ಅಮಾಯಕರು ಹತರಾಗಿದ್ದಾರೆ. ಇತ್ತೀಚಿನ ವರದಿಗಳಂತೆ 10 ಸಾವಿಕ್ಕೂ ಹೆಚ್ಚು ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಅಸುನೀಗಿದವರಲ್ಲಿ ಬಹುತೇಕರು ಮಕ್ಕಳು, ಮಹಿಳೆಯರೆ ಇದ್ದಾರೆ. ಅಮೆರಿಕ ಸೇರಿದಂತೆ ಯೂರೋಪಿನ ಕೆಲವು ರಾಷ್ಟ್ರಗಳು ಇಸ್ರೇಲ್‌ ನಡೆಸುತ್ತಿರುವ ನರಹತ್ಯೆಗೆ ನೇರವಾಗಿ ಬೆಂಬಲ ನೀಡುತ್ತಿರುವುದು ಬಹುತೇಕರಲ್ಲಿ ಬೇಸರ ತಂದಿದೆ.

ಸ್ವತಃ ವಿಶ್ವಸಂಸ್ಥೆ ಕದನ ವಿರಾಮಕ್ಕೆ ಮನವಿ ಮಾಡಿಕೊಂಡರೂ ರಕ್ತ ಪಿಪಾಸು ಇಸ್ರೇಲ್ ಒಪ್ಪುತ್ತಿಲ್ಲ. ಮಸೀದಿ, ಚರ್ಚ್‌ಗಳ ಜೊತೆಗೆ ನಿರಾಶ್ರಿತರ ಶಿಬಿರಗಳ ಮೇಲೆ ನಿತ್ಯವೂ ದಾಳಿಗಳು ನಡೆಯುತ್ತಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಸ್ತ್ರಚಿಕಿತ್ಸೆಗಾಗಿ ಯುಕೆಯಲ್ಲಿರುವ ರಾಘವ್ ಚಡ್ಡಾ, ದೃಷ್ಟಿ ಕಳೆದುಕೊಳ್ಳುವ ಗಂಭೀರ ಸ್ಥಿತಿಯಿತ್ತು: ದೆಹಲಿ ಸಚಿವ

ಎಎಪಿ ಸಂಸದ ರಾಘವ್ ಚಡ್ಡಾ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಯುಕೆಗೆ ತೆರಳಿದ್ದಾರೆ....

ಎಟಿಎಂ ಕಾರ್ಡ್‌ನ ಹಣ ದೋಚಲು ಹೊಸ ರೀತಿಯ ವಂಚಕರ ಪ್ರವೇಶ

ಒಂದು ವಾರದ ಹಿಂದಷ್ಟೆ ಎಟಿಎಂ ಯಂತ್ರವನ್ನು ಹಾಳುಗೆಡವಿ ಜನರಿಗೆ ಮೋಸ ಮಾಡಿದ್ದ...

ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದೆಂದು ಒಪ್ಪಿಕೊಂಡ ಅಸ್ಟ್ರಾಜೆನೆಕಾ

ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರ್ಯಾಂಡ್ ಹೆಸರುಗಳ ಅಡಿಯಲ್ಲಿ ಜಾಗತಿಕವಾಗಿ ಮಾರಾಟವಾದ...

ದೆಹಲಿ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ದೇವೇಂದರ್ ಯಾದವ್ ನೇಮಕ

ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಮಧ್ಯಂತರ ಅಧ್ಯಕ್ಷರಾಗಿ ದೇವೇಂದರ್ ಯಾದವ್‌ ಅವರನ್ನು...