ಲಿಂಗಸುಗೂರು ಪುರಸಭೆ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ ಹಿರಿಯ ಆರೋಗ್ಯ ನಿರೀಕ್ಷಕರ ಮೊಬೈಲ್ ಸಂಖ್ಯೆಯನ್ನು ತೆಗೆಯಲಾಗಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಕೂಡಲೇ ಈ ಸಮಸ್ಯೆ ಪರಿಹರಿಸಬೇಕು. ಸಂಪರ್ಕ ಸಂಖ್ಯೆಯನ್ನು ಅಳವಡಿಸಬೇಕು ಎಂದು ಡಿವೈಎಫ್ಐ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಲಿಂಗಸೂಗೂರು ಪುರಸಭೆ ವ್ಯವಸ್ಥಾಪಕ ಹನುಮಂತರಾಯ ಅವರಿಗೆ ಸಂಘಟನೆಗಳ ಕಾರ್ಯಕರ್ತರು ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದ್ದಾರೆ.
ಶಾನ್ವಾಜ್ ಇವರು ಪುರಸಭೆ ಕಚೇರಿಯಲ್ಲಿ ಸರಿಯಾಗಿ ಇರುವುದಿಲ್ಲ. ಕರೆ ಮಾಡಿದರೂ ಸಂಪರ್ಕಿಸಲು ಆಗುತ್ತಿಲ್ಲ. ಕೂಡಲೇ ಶಾನ್ವಾಜ್ ರವರ ಪ್ರಸ್ತುತ ಬಳಕೆ ಮಾಡುತ್ತಿರುವ ಮೊಬೈಲ್ ಸಂಖ್ಯೆಯನ್ನು ವೆಬ್ಸೈಟ್ ಗೆ ಅಪ್ಲೋಡ್ ಮಾಡಬೇಕು ಹಾಗೂ ವೆಬ್ ಸೈಟ್ ನಲ್ಲಿರುವ ಸಂಖ್ಯೆ ಸಾರ್ವಜನಿಕರ ಸಂಪರ್ಕಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಬೇಕು ಸಂಘಟಕರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈಲ್ವೆ ಮತ್ತು ವಿದ್ಯುತ್ ಖಾಸಗೀಕರಣ ನೀತಿ ಕೈಬಿಡಲು ಒತ್ತಾಯಿಸಿ ಪ್ರತಿಭಟನೆ
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಡಿವೈಎಫ್ಐ ಮುಖಂಡ ವಿಶ್ವ, ವಿವಿಧ ಸಂಘಟನೆಗಳ ಮುಖಂಡರಾದ ಬಾಬಾ ಜಾನಿ, ಮಲ್ಲೇಶ್ ಮ್ಯಾಗೇರಿ, ನಿಂಗಪ್ಪ ಎಂ, ಮಹಮದ್ ಅಲಿ, ಆಕಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.