ವೈಯಕ್ತಿಕ ದ್ವೇಷದಿಂದ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದ ನಾಲ್ವರು ಆರೋಪಿಗಳನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ. ಚಂದ್ರು ರಾಥೋಡ್, ಶಾಂತವ್ವ ಹಿರಿಹಾಳ್, ಪರಸಪ್ಪ ಮಾಗಿ, ತಿಪ್ಪಣ್ಣ ಕಿರೆಸೂರ ಬಂಧಿತರು.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಕೀಲರಾಗಿರುವ ಬಸವರಾಜ್ ತತಬೀರಿ ಅವರು, ಚಂದ್ರು ರಾಠೋಡ್‌ಗೆ ನೀಡಿದ್ದ ಕೈಗಡ ಮರಳಿ ಕೇಳಿದ್ದರಿಂದ ಜಾತಿನಿಂದನೆ ಹಾಗೂ ಕೊಲೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದಲ್ಲಿ ಬಸವರಾಜ್ ನಿರ್ದೋಷಿಯಾಗಿದ್ದರೂ ಅವರ ವಿರುದ್ಧ ರಾಠೋಡ್ ಎಂಬಾತ ಉಳಿದ ಆರೋಪಿಗಳೊಂದಿಗೆ ಸೇರಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದ. ಅತನಿಗೆ ಪರಸಪ್ಪ ಹಾಗೂ ತಿಪ್ಪಣ್ಣ ಸಹಕಾರ ನೀಡಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.