ಮನೆಯೊಂದರ ಮೇಲೆ ಮರಬಿದ್ದು ಮನೆಗೆ ಸ್ವಲ್ಪಮಟ್ಟಿನ ಹಾನಿಯಾಗಿ, ಮನೆ ಮಂದಿ ಸದ್ಯ ಅಪಾಯದಿಂದ ಪಾರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಪುಳಿತ್ತಡಿಯ ಕೋಡಿಯಲ್ಲಿ ಸೋಮವಾರ ಘಟನೆ ನಡೆದಿದೆ.
ಶಿವಪ್ಪಗೌಡ ಎಂಬುವವರ ಮನೆ ಮೇಲೆ ಮರ ಬಿದ್ದಿದ್ದು, ಮನೆಯ ಹಿಂಭಾಗದ ಸಿಮೆಂಟ್ ಶೀಟ್‍ನ ಛಾವಣಿಗೆ ಹಾನಿಯಾಗಿದೆ. ಮರವು ವಿದ್ಯುತ್ ತಂತಿಗಳ ಮೇಲೆಯೂ ಬಿದ್ದಿದ್ದು, ತಂತಿಗಳು ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದವು. ಸ್ಥಳೀಯ ನಿವಾಸಿ ಸ್ನೇಕ್ ಝಕರಿಯಾ ಅವರು ಇದನ್ನು ಗಮನಿಸಿದ್ದು, ಮೆಸ್ಕಾಂನವರಿಗೆ ಕರೆ ಮಾಡಿ ಮಾಹಿತಿ ನೀಡಿ ವಿದ್ಯುತ್ ಸ್ಥಗಿತಗೊಳಿಸಿಸುವಂತೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ.ಕಾಮ್ ಇಂಪ್ಯಾಕ್ಟ್ | ಬಾಬು ಲೇಔಟ್‌ಗೆ ಮೂಲಸೌಕರ್ಯ ಪೂರೈಕೆ; ಅಧಿಕಾರಿಗಳ ಭರವಸೆ
“ಶಿವಪ್ಪಗೌಡ ಅವರ ಮನೆ ಸಮೀಪ ಇರುವ ಜಾಗದಲ್ಲಿ ಬೃಹತ್ ಗಾತ್ರದ ಹಲವು ಅಪಾಯಕಾರಿ ಮರಗಳಿದ್ದು, ಶಿವಪ್ಪನವರ ಮನೆಗೆ ಮೇಲೇ ಇದಕ್ಕೆ ಮೂರನೇ ಬಾರಿ ಮರಗಳು ಬಿದ್ದಿವೆ. ಈ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿಗೂ ಮನವಿ ನೀಡಿದ್ದೇವೆ. ಆದರೆ ಇದಕ್ಕೆ ಯಾವುದೇ ಸ್ಪಂದನೆ ದೊರೆತ್ತಿಲ್ಲ” ಎಂದು ಸ್ನೇಕ್ ಝಕರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.