ದೀಪಾವಳಿ ಹಬ್ಬ | ಬೆಂಗಳೂರು – ಭಗತ್ ಕಿ ಕೋಠಿ ನಡುವೆ ವಿಶೇಷ ರೈಲುಗಳ ಸಂಚಾರ

Date:

Advertisements

ದೀಪಾವಳಿ ಮತ್ತು ಛತ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಜೋಧಪುರದ ಭಗತ್-ಕಿ-ಕೋಠಿ ನಿಲ್ದಾಣಗಳ ನಡುವೆ ಮೂರು ಟ್ರಿಪ್‌ನ ಎರಡು ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ.

1. ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ ಮೂರು ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್ (06217/06218) ಬಳ್ಳಾರಿ ಕ್ಯಾಂಟ್ ಮತ್ತು ಹುಬ್ಬಳ್ಳಿ ಮಾರ್ಗದ ಮೂಲಕ ಸಂಚಾರ ನಡೆಸಲಿದೆ.

(ರೈಲು ಸಂಖ್ಯೆ 06217) ನವೆಂಬರ್ 9, 16 ಮತ್ತು 23ರಂದು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಭಗತ್ ಕಿ ಕೋಠಿ ವಿಶೇಷ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ನಿಲ್ದಾಣದಿಂದ ಸಂಜೆ 04:30 ಗಂಟೆಗೆ ಹೊರಟು ಮೂರನೇ ದಿನ (ಶನಿವಾರ) ಬೆಳಗ್ಗೆ 11 ಗಂಟೆಗೆ ಭಗತ್ ಕಿ ಕೋಠಿ ನಿಲ್ದಾಣವನ್ನು ತಲುಪಲಿದೆ.

Advertisements

(ರೈಲು ಸಂಖ್ಯೆ 06218) ಭಗತ್ ಕಿ ಕೋಠಿ – ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ನವೆಂಬರ್ 12, 19 ಮತ್ತು 26 ರಂದು (ಭಾನುವಾರ) ಬೆಳಗ್ಗೆ 06:30 ಗಂಟೆಗೆ ಭಗತ್ ಕಿ ಕೋಠಿ ನಿಲ್ದಾಣದಿಂದ ಹೊರಟು ಮೂರನೇ ದಿನ (ಮಂಗಳವಾರ) ಬೆಳಗ್ಗೆ 02:30 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲುಗಳು ಮಾರ್ಗದಲ್ಲಿ ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಎಸ್.ಎಸ್.ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ಅಹಮದಾಬಾದ್, ಮಹೇಸನಾ, ಪಾಲನಪುರ, ಅಬು ರೋಡ್, ಜವಾಯಿ ಬಂದ್, ಫಲ್ನಾ, ಮಾರ್ವಾರ್, ಪಾಲಿ ಮಾರ್ವಾರ್ ಮತ್ತು ಲುನಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ ಎಂದು ಇಲಾಖೆ ತಿಳಿಸಿದೆ.

ಈ ವಿಶೇಷ ರೈಲುಗಳಲ್ಲಿ 1-ಎಸಿ ಟು ಟೈಯರ್ ಬೋಗಿ, 13-ಎಸಿ ತ್ರಿ ಟೈಯರ್ ಬೋಗಿಗಳು ಮತ್ತು 2-ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳ ಸಂಯೋಜನೆ ಹೊಂದಿರುತ್ತದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪೇಂಟ್ ಮಿಕ್ಸರ್‌ಗೆ ಮಹಿಳೆ ಕೂದಲು ಸಿಲುಕಿ ಸಾವು

2. ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ನಿಲ್ದಾಣಗಳ ನಡುವೆ ಮೂರು ಟ್ರಿಪ್ಸ್ ವಿಶೇಷ ಎಕ್ಸ್‌ಪ್ರೆಸ್ (06219/06220) ಅರಸೀಕೆರೆ ಮತ್ತು ಹುಬ್ಬಳ್ಳಿ ಮಾರ್ಗದ ಮೂಲಕವೂ ಸಂಚಾರ ನಡೆಸಲಿದೆ.

(ರೈಲು ಸಂಖ್ಯೆ 06219) ನವೆಂಬರ್ 11, 18 ಮತ್ತು 25 (ಶನಿವಾರ) ರಂದು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಸಂಜೆ 04:30 ಗಂಟೆಗೆ ಹೊರಟು ಮೂರನೇ ದಿನ (ಸೋಮವಾರ) ಬೆಳಗ್ಗೆ 11:50 ಗಂಟೆಗೆ ಭಗತ್ ಕಿ ಕೋಠಿ ನಿಲ್ದಾಣವನ್ನು ತಲುಪಲಿದೆ.

(ರೈಲು ಸಂಖ್ಯೆ 06220) ಭಗತ್ ಕಿ ಕೋಠಿ – ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ನವೆಂಬರ್ 13, 20 ಮತ್ತು 27 ರಂದು (ಸೋಮವಾರ) ರಾತ್ರಿ 11 ಗಂಟೆಗೆ ಭಗತ್ ಕಿ ಕೋಠಿ ನಿಲ್ದಾಣದಿಂದ ಹೊರಟು ಮೂರನೇ ದಿನ (ಬುಧವಾರ) ಮಧ್ಯಾಹ್ನ 02:45 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲುಗಳು ಮಾರ್ಗದಲ್ಲಿ ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ರಾಣೆಬೆನ್ನೂರು, ಎಸ್.ಎಂ.ಎಂ ಹಾವೇರಿ, ಎಸ್.ಎಸ್.ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ಅಹಮದಾಬಾದ್, ಮಹೇಸನಾ, ಪಾಲನಪುರ, ಅಬು ರೋಡ್, ಜವಾಯಿ ಬಂದ್, ಫಲ್ನಾ, ಮಾರ್ವಾರ್, ಪಾಲಿ ಮಾರ್ವಾರ್ ಮತ್ತು ಲುನಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ ಎಂದು ಮಾಹಿತಿ ನೀಡಿದೆ.

ಈ ವಿಶೇಷ ರೈಲುಗಳಲ್ಲಿ 4-ಎಸಿ ಟು ಟೈಯರ್ ಬೋಗಿಗಳು, 14 ಎಸಿ ತ್ರಿ ಟೈಯರ್ ಎಕಾನಮಿ ಬೋಗಿಗಳು ಮತ್ತು 2-ಜನರೇಟರ್ ಕಾರ್ ಕಮ್ ಬ್ರೇಕ್ ವ್ಯಾನ್ ಬೋಗಿಗಳನ್ನು ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ತಮ್ಮ ಹತ್ತಿರದ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸಿ ಅಥವಾ ಅಧಿಕೃತ ಜಾಲತಾಣ https://enquiry.indianrail.gov.in ಭೇಟಿ ನೀಡಿ ಅಥವಾ 139 ಸಹಾಯವಾಣಿಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ.

ಈ ಮೇಲಿನ ವಿಶೇಷ ರೈಲುಗಳಲ್ಲಿ ಬೆಡ್ ಶೀಟು ಮತ್ತು ಹೊದಿಕೆಯ ಸೌಲಭ್ಯ ಒದಗಿಸಲಾಗುವುದಿಲ್ಲ. ಈ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಆರಾಮ ಮತ್ತು ಅನುಕೂಲಕ್ಕಾಗಿ ತಮ್ಮದೇ ಆದ ಲಿನೆನ್ ಮತ್ತು ಬೆಡ್‌ರೋಲ್ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಮಂಗಳೂರು | ಆ. 23: ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮಂಗಳೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಲ್ ವಫಾ ಚಾರಿಟೆಬಲ್ ಟ್ರಸ್ಟ್...

ಗುಬ್ಬಿ | ಎಂ.ಎನ್.ಕೋಟೆ ಗ್ರಾಪಂ ಉಪಾಧ್ಯಕ್ಷರಾಗಿ ಸಿದ್ದಗಂಗಮ್ಮ ಅವಿರೋಧ ಆಯ್ಕೆ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ...

Download Eedina App Android / iOS

X