ಬೆಳಗಾವಿ ಮಹಾನಗರ ಪಾಲಿಕೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ ಶುರುವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಜಗಳದಲ್ಲಿ ಪೌರ ಕಾರ್ಮಿಕರು ಬಡವಾಗಿದ್ದು, ಕಳೆದ ಒಂದು ವರ್ಷದಿಂದ ಸಂಬಳವಿಲ್ಲದೇ ಪರದಾಡುತ್ತಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯ 138 ಪೌರ ಕಾರ್ಮಿಕರಿಗೆ ಕಳೆದ ಒಂದು ವರ್ಷದಿಂದ ಸಂಭಳವೇ ನೀಡಿಲ್ಲ. ನೇಮಕಾತಿಗೆ ಅನುಮತಿ ಸಿಗುವ ಮುನ್ನವೇ 138 ಜನ ಪೌರಕಾರ್ಮಿಕರನ್ನು ನಿಯಮ ಉಲ್ಲಂಘಿಸಿ ನೇಮಕ ಮಾಡಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಆರೋಪ ಮಾಡಿದ್ದರು. ಇತ್ತ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ‘ನಾವು ಕಾನೂನುಬಾಹಿರವಾಗಿ ನೇಮಕ ಮಾಡಿಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಹೀಗೆ, ಕಾಂಗ್ರೆಸ್-ಬಿಜೆಪಿ ನಾಯಕರ ಕಿತ್ತಾಟದಿಂದಾಗಿ ಪೌರ ಕಾರ್ಮಿಕರು ಸಂಬಳ ಆಗಿಲ್ಲ. ವೇತನಕ್ಕಾಗಿ ಒತ್ತಾಯಿಸಿ ಕೆಲಸಕ್ಕೆ ಗೈರಾಗುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗಾಗಿ ದೀಪಾವಳಿ ಹಬ್ಬಕ್ಕೂ ದೀಪ ಬೆಳಗಿಸಲೂ ತಮಗೆ ಆರ್ಥಿಕ ಶಕ್ತಿ ಇಲ್ಲದಂತಾಗಿದೆ ಎಂದು ಪೌರಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ಬಿಜೆಪಿ 138ಪೌರ ಕಾರ್ಮಿಕರ ನೇಮಕಾತಿಯಲ್ಲಿ ಗೋಲ್ ನಡೆಸಿದೆ. ಪೌರಕಾರ್ಮಿಕರ ನೇಮಕಾತಿಯಲ್ಲಿ ಪೌರ ಕಾರ್ಮಿಕರಿಂದ ದುಡ್ಡು ವಸೂಲಿ ಮಾಡಿದವರು ಯಾರು? ನಗರವನ್ನು ಸ್ವಚ್ಛ ಮಾಡುವ ಶ್ರಮಿಕಲನ್ನು ಇಕ್ಕಟ್ಟಿಗೆ ಸಿಲುಕಿಸಿದವರು ಯಾರು? ಅವರ ವಿರುದ್ಧ ಬಿಜೆಪಿ ನಾಯಕರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಸಚಿವ ಹಾಗೂ ಪೌರಾಡಳಿತ ಸಚಿವರು ಇತ್ತೀಚಿಗೆ ಬೆಳಗಾವಿಗೆ ಬಂದು ಪಾಲಿಕೆ ಅಧಿಕಾರಿಗಳ ಜೊತೆ ಸಭೆ ಮಾಡಿ, ಪಾಲಿಕೆಯಲ್ಲಿ ನಡೆದಿರುವ ಪುಮಾದಗಳ ಬಗ್ಗೆ ಪಟ್ಟಿ ಮಾಡಿಕೊಂಡು ಹೋಗಿದ್ದು, 138 ಪೌರ ಕಾರ್ಮಿಕರ ನೇಮಕಾತಿ ವಿಚಾರ ಈಗ ಬಿಜೆಪಿಯನ್ನು ಇಟ್ಟಿಗೆ ಸಿಲುಕಿಸಿದೆ