ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಸೂಗೂರು ಗ್ರಾಮದ ಸರ್ಕಾರಿ ಗೈರಾಣಿ ಭೂಮಿಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಸಾಗುವಳಿ ಮಾಡಲಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಈ ಜಾಗವನ್ನು ವಶಕ್ಕೆ ಪಡೆಯಬೇಕೆಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ ಮುದ್ನಾಳ್ ಒತ್ತಾಯಿಸಿದ್ದಾರೆ.
ಉಮೇಶ್ ಮುದ್ನಾಳ ಮತ್ತು ಸಂಘಟನೆಯ ಹಲವಾರು ಕಾರ್ಯಕರ್ತರು ಯಾದಗಿರಿ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಸೂಗೂರು ಗ್ರಾಮದ ಸರ್ಕಾರಿ ಸರ್ವೆ ನಂ.7 ರಲ್ಲಿ 9 ಎಕರೆ ಮತ್ತು ನಂ.12 ರಲ್ಲಿ 38 ಎಕರೆ 5 ಗುಂಟೆ ಭೂಮಿಯಿದೆ. ಈ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಕೆಲವು ಪಟ್ಟಭದ್ರ ಹಿತಾಶಕ್ತಿಗಳಿಂದ ಒತ್ತುವರಿ ಮಾಡಿ ಸುಮಾರು ಸಾಗುವಳಿ ಮಾಡುತ್ತಿದ್ದು, ಜಮೀನಿನಲ್ಲಿ ಗ್ರಾಮಸ್ಥರು ದನಕರು, ಕುರಿ-ಮೇಕೆ ಮೆಯಿಸಲು ಹೋದವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸರ್ಕಾರಿ ಭೂಮಿಯಲ್ಲಿ ದನಕರುಗಳಿಗೆ ಮೆಯಿಸಲು ಬಿಡದ ಪರಿಣಾಮ ಗ್ರಾಮಸ್ಥರು ಮನೆಯಲ್ಲೇ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ದೂರಿದರು.
ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ ಮುದ್ನಾಳ್ ಮಾತನಾಡಿ, “ಅನಧಿಕೃತವಾಗಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು, ಜನರ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ತಪ್ಪಿಸ್ಥರಿಗೆ ವಶಕ್ಕೆ ಪಡೆಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಡವರ ಮಕ್ಕಳನ್ನು ಬೀದಿಯಲ್ಲಿ ಧರ್ಮ ರಕ್ಷಣೆಗೆ ಪ್ರೇರೇಪಿಸಲಾಗುತ್ತಿದೆ: ಸಚಿವ ಪ್ರಿಯಾಂಕ್ ಖರ್ಗೆ
ಈ ವೇಳೆ ಸಮಾಜದ ಪ್ರಮುಖರಾದ ಬಸವರಾಜ ಇಟಗಿ, ಆಂಜನೇಯ ನಾಯ್ಕೋಡಿ,ಬಸವರಾಜ, ರವಿಕುಮಾರ್, ಮರೆಪ್ಪ, ಮಲ್ಲಿಕಾರ್ಜುನ್ ಮಲ್ಲಿಕಾರ್ಜುನ, ಶರಣಪ್ಪ, ಬಸವರಾಜ್, ಮಾದೇವ್, ತಾಯಪ್ಪ, ಹನುಮೇಶ್, ಬಸವರಾಜ್ ಬೂದುರ, ತಾಯಪ್ಪ ಮುನ್ಗಲ್, ಚಂದ್ರಯ್ಯ, ತಿಮ್ಮಪ್ಪ, ಸಾಬಯ್ಯ,ಬಸವರಾಜ, ರವಿಕುಮಾರ್, ಮರೆಪ್ಪ, ಮಲ್ಲಿಕಾರ್ಜುನ್ , ಶರಣಪ್ಪ, ಬಸವರಾಜ್, ಮಾದೇವ್, ತಾಯಪ್ಪ, ಹನುಮೇಶ್, ಬಸವರಾಜ್ ಬೂದುರ, ತಾಯಪ್ಪ ಮುನ್ಗಲ್, ಚಂದ್ರಯ್ಯ, ತಿಮ್ಮಪ್ಪ ಇದ್ದರು..