ತೆಲಂಗಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತೆರೆದ ವಾಹನದಲ್ಲಿ ನಿಝಾಮಾಬಾದ್ ಜಿಲ್ಲೆಯ ಆರ್ಮೂರ್‌ನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ವಾಹನ ತಕ್ಷಣ ಬ್ರೇಕ್ ಹಾಕಿದ ಪರಿಣಾಮ ತೆಲಂಗಾಣ ಸಚಿವ ಮತ್ತು ಬಿಆರ್‌ಎಸ್ ನಾಯಕ ಕೆಟಿಆರ್ ರಾವ್ ವಾಹನದಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.
ನಿಝಾಮಾಬಾದ್‌ನ ಆರ್ಮೂರಿನಲ್ಲಿ ಆಯೋಜಿಸಿದ್ದ ಬಿಆರ್‌ಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ವೇಳೆ ಈ ಘಟನೆ ಇಂದು ನಡೆದಿದೆ. ಬಿಆರ್‌ಎಸ್ ಅಭ್ಯರ್ಥಿ ಜೀವನ್ ರೆಡ್ಡಿ ನಾಮಪತ್ರ ಸಲ್ಲಿಕೆಯಲ್ಲಿ ಸಚಿವ ಕೆಟಿಆರ್ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು. ಇದಕ್ಕಾಗಿ ಪ್ರಚಾರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ, ವಾಹನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಕೆಟಿಆರ್, ಸಂಸದ ಸುರೇಶ್ ರೆಡ್ಡಿ ಹಾಗೂ ಅಭ್ಯರ್ಥಿ ಜೀವನ್ ರೆಡ್ಡಿ ವಾಹನದ ಮೇಲೆ ಅಳವಡಿಸಿದ್ದ ರೇಲಿಂಗ್‌ನಿಂದ ಕೆಳಕ್ಕೆ ಬಿದ್ದಿದ್ದಾರೆ.
బీఆర్ఎస్ వర్కింగ్ ప్రెసిడెంట్, మంత్రి కేటీఆర్ తృటిలో ప్రమాదంలో నుంచి బయటపడ్డారు. ఎన్నికల ప్రచారంలో భాగంగా ప్రచార రథ వాహనంపై నుంచి పడిపోయే పరిస్థితి తలెత్తింది. #KTR #BRS #TelanganaElections2023 pic.twitter.com/TpkgUao0V0
— Rajamoni Mahesh 🇮🇳 (@Rajamonimahesh) November 9, 2023
ದಿಢೀರ್ ಬ್ರೇಕ್ ಹಾಕಿದ್ದರಿಂದ ವಾಹನದ ರೈಲಿಂಗ್ ಮೇಲೆ ನಿಂತಿದ್ದ ಜನರ ಭಾರ ತಾಳಲಾರದೆ ಮುರಿದಿದ್ದರಿಂದ ಈ ಘಟನೆ ಸಂಭವಿಸಿದೆ. ತಕ್ಷಣ ಎಚ್ಚೆತ್ತ ಕೆಟಿಆರ್ ಭದ್ರತಾ ಸಿಬ್ಬಂದಿ, ಕೆಟಿಆರ್ ವಾಹನದಿಂದ ಕೆಳಕ್ಕೆ ಬೀಳದಂತೆ ಅವರನ್ನು ರಕ್ಷಣೆ ಮಾಡಿದ್ದಾರೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ಕೆಟಿಆರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆರ್ಮೂರ್ ಪಟ್ಟಣದ ಹಳೆ ಆಲೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೆಚ್ಚಿನ ಗಾಯಗಳಾಗದ ಕಾರಣ ಜೀವನ್ ರೆಡ್ಡಿ ಜತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
కొడంగల్ ఎమ్మేల్యే అభ్యర్ధి పట్నం నరేందర్ రెడ్డి నామినేషన్ ర్యాలీలో పాల్గొన్న @KTRBRS అన్న#TelanganaElections2023 pic.twitter.com/wTYoea0Cbd
— KTR News (@KTR_News) November 9, 2023
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೆಟಿಆರ್, ‘ಅದೃಷ್ಟವಶಾತ್ ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ. ನಾನು ಸುರಕ್ಷಿತವಾಗಿದ್ದೇನೆ’ ಎಂದು ಹೇಳಿ ಬಳಿಕ ಕೊಡಂಗಲ್ ರೋಡ್ ಶೋನಲ್ಲಿ ಭಾಗವಹಿಸಲು ತೆರಳಿದರು.
ಕಾಂಗ್ರೆಸ್-ಬಿಆರ್‌ಎಸ್ ಕಾರ್ಯಕರ್ತರ ನಡುವೆ ಘರ್ಷಣೆ
ಹೈದರಾಬಾದ್‌ನ ಇಬ್ರಾಹಿಂ ಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಂಗ್ರೆಸ್-ಬಿಆರ್‌ಎಸ್ ಪಕ್ಷಗಳ ಅಭ್ಯರ್ಥಿಗಳು ಒಂದೇ ಸಮಯದಲ್ಲಿ ನಾಮಪತ್ರ ಸಲ್ಲಿಸಲು ಹೊರಟಿದ್ದರಿಂದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಕಾರ್ಯಕರ್ತರ ನಡುವೆ ಕಲ್ಲು ತೂರಾಟ ಕೂಡ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಲಾಠಿ ಚಾರ್ಜ್ ನಡೆಸಿ, ಗುಂಪನ್ನು ಚದುರಿಸಿದ್ದರಿಂದ ಹೆಚ್ಚಿನ ಘರ್ಷಣೆ ನಡೆಯುವುದನ್ನು ತಪ್ಪಿಸಿದ್ದಾರೆ.
VIDEO | Clashes broke out between BRS and Congress workers at Ibrahimpatnam Police station in limits Hyderabad as candidates of both the parties were heading to file nominations at the same time. More details are awaited. pic.twitter.com/832SK8yX8p
— Press Trust of India (@PTI_News) November 9, 2023
ತೆಲಂಗಾಣದಲ್ಲಿ ನ.30 ರಂದು ಚುನಾವಣೆ ನಡೆಯಲಿದ್ದು, 119 ಸ್ಥಾನಗಳಿಗೆ ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯವು ಡಿಸೆಂಬರ್ 3ರಂದು ನಿರ್ಧಾರವಾಗಲಿದೆ. ಒಟ್ಟು ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯು ನಡೆಯಲಿದ್ದು, ಡಿ.3ರಂದೇ ಎಲ್ಲ ರಾಜ್ಯಗಳಿಗೆ ಮತ ಎಣಿಕೆ ನಡೆಯಲಿದೆ.