ಭಾರತದ ಅಪರೂಪದ ದೇಶಪ್ರೇಮಿ, ನಾಡು ಕಂಡ ಧೀರ ಟಿಪ್ಪು ಸುಲ್ತಾನ್ ಜಯಂತಿಯನ್ನು ಕರ್ನಾಟಕದ ಜನತೆ ಹಬ್ಬದ ರೀತಿಯಲ್ಲಿ ಆಚರಿಸಬೇಕೆಂದು ಶೋಷಿತ ಸಮಾಜ ವೇದಿಕೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ನೆಲೋಗಿ ಹೇಳಿದರು.
ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶೋಷಿತ ಸಮಾಜ ವೇದಿಕೆ ವತಿಯಿಂದ ಆಯೋಜಿಸಿದ ಟಿಪ್ಪು ಸುಲ್ತಾನ್ ರವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದ ಅವರು, ಟಿಪ್ಪು ಒಬ್ಬ ಮಹಾನ್ ವೀರ, ದೇಶಕ್ಕಾಗಿ ತನ್ನ ಎರಡು ಮಕ್ಕಳನ್ನು ಒತ್ತಿಯಿಟ್ಟ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆಯಾಗಿದ್ದಾನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಣ್ಣಿನ ಹಣತೆಗೆ ಬೇಡಿಕೆ ಕುಸಿತ : ದೀಪದ ಕೆಳಗಿನ ಕತ್ತಲು ʼಕುಂಬಾರರ ಬದುಕುʼ
ಈ ಸಂದರ್ಭದಲ್ಲಿ, ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೋಹೇಬ್ ಗಿರಣಿ, ರೈತ ಸಂಘಟನೆ ನಗರ ಕಾರ್ಯದರ್ಶಿ ದಾವೂದ್ ಹರನೂರ್, ಭೀಮ್ ಆರ್ಮಿ ತಾಲೂಕ ಉಪಾಧ್ಯಕ್ಷ ವಿಶ್ವರಾಧ್ಯ, ಗೂಪಾಲಕರ್, ನಗರ ಘಟಕ ಅಧ್ಯಕ್ಷ ಬಸವರಾಜ್ ಇಂಗಳಗಿ, ಸಿದ್ದು ಹುಲ್ಲೂರ್ ಸೇರಿದಂತೆ ಪ್ರಮುಖರಾದ ಹರೀಶ್ ಗುಡುರ್, ಮೌನೇಶ್ ಗೊಲಾ ಆದೋಲ್, ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ: ಸಿಟಿಜನ್ ಜರ್ನಲಿಸ್ಟ್, ಮಿಲಿಂದ್ ಸಾಗರ