ಬೆಳಗಾವಿ ಜಿಲ್ಲೆ ಚಿಕ್ಕೊಡಿ ತಾಲೂಕಿನ ಚಿಂಚಣಿಯ ಸಿದ್ಧಪ್ರಭು ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮಿಜಿ ನಿಧನರಾಗಿದ್ದಾರೆ.
ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು ಸ್ವಾಮೀಜಿ ಬೆಳಗಾವಿಯ ಖಾಸಗಿ ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಇಹಲೋಕ ತ್ಯಾಜಿಸಿದ್ದಾರೆ.
ಕನ್ನಡದ ಸ್ವಾಮೀಜಿ ಎಂದೇ ಪ್ರಸಿದ್ದಿ ಪಡೆದಿದ್ದ ಅಲ್ಲಮಪ್ರಭು ಸ್ವಾಮಿಗಳು ಹಲವಾರು ದಶಕಗಳಿಂದ ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿದವರಲ್ಲಿ ಪ್ರಮುಖರಾಗಿದ್ದರು. ಗಡಿ ಭಾಗದ ಕನ್ನಡ ಮಠವಾಗಿ ಗುರುತಿಸಿಕೊಂಡ ಚಿಂಚಣಿ ಮಠದಲ್ಲಿ ಸಿದ್ಧಪ್ರಭು ಸ್ವಾಮೀಜಿ ಕನ್ನಡ ಚಟುವಟಿಕೆಗಳು ಆಯೋಜಿಸಿ ನಾಡು-ನುಡಿಯ ಪ್ರಸಾರ ಕೈಗೊಂಡಿದ್ದರು.