ಗಾಜಾದಲ್ಲಿ 10 ಸಾವಿರಕ್ಕೂ ಹೆಚ್ಚು ಅಮಾಯಕರ ಹತ್ಯೆಯ ಬಗ್ಗೆ ದುಃಖ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಈ ವಿನಾಶವನ್ನು ಬೆಂಬಲಿಸುತ್ತಿರುವ ಸರ್ಕಾರಗಳಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ”ಎಂತಹ ಶೋಚನೀಯ ಮತ್ತು ಅವಮಾನಕರ ಘಟನೆ. ಗಾಜಾದಲ್ಲಿ ಕೊಲ್ಲಲ್ಪಟ್ಟ 10 ಸಾವಿರ ಮಂದಿಯಲ್ಲಿ ಅರ್ಧದಷ್ಟು ಮಂದಿ ಮಕ್ಕಳಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ಪ್ರತಿ ಹತ್ತು ನಿಮಿಷಕ್ಕೆ ಒಂದು ಮಗುವನ್ನು ಸಾಯಿಸಲಾಗಿದೆ. ಇನ್ನು ಆಮ್ಲಜನಕದ ಕೊರತೆಯಿಂದ ಇನ್ಕ್ಯುಬೇಟರ್‌ಗಳಿಂದ ತೆಗೆದುಹಾಕಿ ಸಾಯಲು ಬಿಡಲಾಗಿದೆ. ಈ ನರಹತ್ಯೆಯನ್ನು ಬೆಂಬಲಿಸುವವರಿಗೆ ಆಘಾತವಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ಯುದ್ಧ ವಿರಾಮವಿಲ್ಲ, ಬಾಂಬುಗಳನ್ನು ಸುರಿಯಲಾಗುತ್ತಿದೆ. ಹೆಚ್ಚು ಹಿಂಸಾಚಾರ, ಹೆಚ್ಚು ಕೊಲೆ, ಹೆಚ್ಚೆಚ್ಚು ನೋವು. ಈ ವಿನಾಶವನ್ನು ಬೆಂಬಲಿಸುವ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಈ ಹಿಂಸೆ ಯಾವಾಗ ಕೊನೆಗೊಳ್ಳುತ್ತದೆ” ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಯವಿಟ್ಟು ಬಿಟ್ಟುಬಿಡಿ, ನನಗೆ ನಾಲ್ಕು ಹೆಣ್ಣುಮಕ್ಕಳಿದ್ದಾರೆ ಎಂದು ಅಂಗಲಾಚಿದರೂ ಅತ್ಯಾಚಾರವೆಸಗಿದ ರಾಕ್ಷಸರು
ಹಮಾಸ್ ಹೋರಾಟಗಾರರು ಇಸ್ರೇಲಿ ಗಡಿ ಮೇಲೆ ಹಠಾತ್ ದಾಳಿ ನಡೆಸಿದಾಗ 1,200 ಕ್ಕೂ ಹೆಚ್ಚು ಇಸ್ರೇಲಿಗಳು ಕೊಲ್ಲಲ್ಪಟ್ಟರು. ಇದರಿಂದ ಪ್ರತಿದಾಳಿ ನಡೆಸಿದ ಇಸ್ರೇಲ್ ಪಡೆ ಅಮಾಯಕರನ್ನು ಲೆಕ್ಕಿಸದೆ ಸಾಮಾನ್ಯ ನಾಗರಿಕರನ್ನು ಹತ್ಯೆ ಮಾಡಿದೆ.
ಗಾಜಾದಲ್ಲಿ ಹಮಾಸ್ ಕೇಂದ್ರಿತ ಆರೋಗ್ಯ ಸಚಿವಾಲಯದ ಪ್ರಕಾರ ಇಸ್ರೇಲ್ ದಾಳಿಯಲ್ಲಿ 11 ಸಾವಿರಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿದೆ. ಸತ್ತವರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಇದ್ದಾರೆ ಎಂದು ಅಮೆರಿಕದ ವರದಿಗಳು ತಿಳಿಸಿವೆ.
What a deplorable and disgraceful milestone…over 10,000 people killed in Gaza of which almost half are children. One child is being killed every ten minutes according to the WHO, and now tiny babies had to be removed from their incubators due to lack of oxygen and were left to…
— Priyanka Gandhi Vadra (@priyankagandhi) November 13, 2023