ಕಲಬುರಗಿ | ಕ್ರೀಡೆಗೆ ಶಕ್ತಿಯ ಜತೆಗೆ ಯುಕ್ತಿಯೂ ಮುಖ್ಯ: ಭೀಮರಾಯ ನಗನೂರ

Date:

Advertisements

ಕ್ರೀಡೆಯು ಮನುಷ್ಯನಿಗೆ ಬಹಳ ಮುಖ್ಯ. ಕ್ರೀಡೆಯಲ್ಲಿ ಕೇವಲ ದೈಹಿಕವಾಗಿ ಬಲಿಷ್ಟರಾಗಿದ್ದರೆ ಮಾತ್ರ ಸಾಲದು, ಯುಕ್ತಿಯಿಂದಲೂ ಬಲಿಷ್ಟನಾಗಿರಬೇಕು. ಆಗ ಮಾತ್ರ ಕ್ರೀಡೆಯಲ್ಲಿ ಜಯ ಸಾಧಿಸಬಹುದು ಎಂದು ಭೀಮರಾಯ ನಗನೂರ ಅಭಿಪ್ರಾಯಪಟ್ಟರು.

ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ 12ನೇ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಜೇವರ್ಗಿ ತಾಲೂಕಿನ ಹೆಮ್ಮೆಯ ಕ್ರೀಡಾಪಟುಗಳು ರಾಷ್ಟ ಮಟ್ಟದಲ್ಲಿ ಬಾಗವಹಿಸಿ ನಮ್ಮ ತಾಲೂಕಿಗೆ ಮಾತ್ರವಲ್ಲದೆ ನಮ್ಮ ಜಿಲ್ಲೆಗೂ ಹೆಸರು ತರುವಂತಹ ಕಾರ್ಯ ಮಾಡಿದ್ದಾರೆ. ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ನಡೆದ 12ನೇ ರಾಷ್ಟ್ರೀಯ ಚಾಂಪಿಯನ್ ಶಿಪ್ ಕಬ್ಬಡಿ ಆಟದಲ್ಲಿ ಭಾಗವಹಿಸಿ ಬಂಗಾದರ ಪದಕ ಗಳಿಸಿದ್ದಾರೆ. ಕ್ರೀಡೆಗೆ ಕೇವಲ ದೇಹವನ್ನು ಬೆಳೆಸಿಕೊಂಡರೆ ಸಾಲದು ಬಹು ಮುಖ್ಯವಾಗಿ ಯುಕ್ತಿಯನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಬಾಗವಹಿಸಿ ತಾಲೂಕಿನ ಕ್ರೀಡಾಪಟುಗಳಿಗೆ ಉತ್ಸಾಹ ತಂದಿದ್ದಾರೆ. ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಸಾದನೆ ಮಾಡಿ ನಮ್ಮ ತಾಲೂಕಿನ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಬೆಳಸಲಿ” ಎಂದು ಹಾರೈಸಿದರು.

Advertisements

ಅಬ್ದುಲ್ ಘನಿ ಮಾತನಾಡಿ, “ತಾಲೂಕು ಆಡಳಿತ ಇಂತಹ ಕ್ರೀಡಾಪಟುಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವಂತಹ ಕಾರ್ಯ ಮಾಡಬೇಕು. ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಬಂಗಾರದ ಪದಗ ಗೆದ್ದು ಬಂದಿದ್ದಾರೆ. ಇಂತಹ ಕ್ರೀಡಾ ಪಟುಗಳಿಗೆ ಸನ್ಮಾನಿಸಿ ಸರಿಯಾದ ಪ್ರೋತ್ಸಾಹವನ್ನು ಮಾಡಬೇಕು. ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನಿಂದ ಒಲಂಪಿಕ್ಸ್‌ಗೂ ಕೂಡ ಭಾಗಿಯಾಗುವಂತ ಕ್ರೀಡಾಪಟುಗಳು ಸಿಕ್ಕರೂ ಸಿಗಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಸೈಬರ್ ವಂಚನೆ | ಪಾರ್ಟ್‌ ಟೈಮ್‌ ಜಾಬ್‌ನಲ್ಲಿ ಹೂಡಿಕೆ ಮಾಡಿ ₹23 ಲಕ್ಷ ಕಳೆದುಕೊಂಡ ಟೆಕ್ಕಿ

ಬಂಗಾರದ ಪದಕ ಗೆದ್ದ ಆನಂದ್ ಸಾಗರ್ ಜೇವರ್ಗಿ ಹಾಗೂ ಚಂದಸಾಬ್ ಗಂವ್ಹಾರ ಅವರಿಗೆ ತಾಲೂಕಿನ ವಿವಿಧ ಸಂಘಟನೆಯ ಮುಖಂಡರು ಹಾಗೂ ಸಮಾಜ ಸೇವಕರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಾಹೇಬಗೌಡ ಕಡ್ಲಿ ಅವರಾದ, ದೇವೆಗೌಡ ಅವರಾದ, ಸಿದ್ದು ಪಾಟೀಲ್, ರವಿ ಕುಳಗೇರಿ, ಪ್ರಭಾಕರ ಸಾಗರ, ಮಹೇಶ ಕೋಕಿಲೆ, ಶ್ರೀಮಂತ ಹರನೂರ, ಮಲ್ಲು ನೇದಲಗಿ, ಅಬ್ದುಲ್ ಘನಿ ರಾವಣ, ವಿಶ್ವರಾಧ್ಯ ಗೋಪಾಲಕರ್, ಬಸವರಾಜ ಇಂಗಳಗಿ, ಅಫ್ಸರ್ ಪಟೇಲ್, ಹರಿಷ್ ಗೂಡುರು, ಸಿದ್ದು ಹೂಲ್ಲೂರ, ಪ್ರಸಾದ ಬಡಿಗೇರ, ಜೈಭೀಮ್ ಸಿಂಗೆ, ಗಣೇಶ, ಗಿರೀಶ ಕೊಡಚಿ, ಮಿಲಿಂದ ಸಾಗರ ದೇವು ಬಡಿಗೇರ, ವಿಶ್ವ ಆಲೂರ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X