ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್‌ ಶುಲ್ಕ ವಸೂಲಿಗೆ ಆಕ್ರೋಶ: ಸಿಎಂ ಕಚೇರಿಗೆ ದೂರು

Date:

ನಗರದ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ವಾಹನ ಸವಾರರಿಂದ ಹೆಚ್ಚುವರಿ ಪಾರ್ಕಿಂಗ್‌ ಶುಲ್ಕ ವಸೂಲು ಮಾಡಲಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಸಿಎಂ ಕಚೇರಿಗೆ ಪ್ರಯಾಣಿಕರೊಬ್ಬರು ದೂರು ನೀಡಿದ್ದಾರೆ.

ಈ ಸಂಬಂಧ ಮೆಟ್ರೋ ಪ್ರಯಾಣಿಕ ಸುಜಯ್‌ ಸುರೇಶ್‌ ಸೇಠ್‌ ಎಂಬುವವರು ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕೊಂದು ಕೊರತೆ ವಿಭಾಗಕ್ಕೆ ದೂರು ನೀಡಿದ್ದಾರೆ.

ನವೆಂಬರ್‌ 1 ರಂದು ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ನಲ್ಲಿ ನಾನು 5 ಗಂಟೆ ಕಾರು ನಿಲ್ಲಿಸಿದ್ದೆ. ಅಲ್ಲಿ ಪಾರ್ಕಿಂಗ್‌ ಶುಲ್ಕ ವಸೂಲು ಮಾಡುತ್ತಿದ್ದ ವ್ಯಕ್ತಿ, 40 ರೂ. ಬದಲಾಗಿ 150 ರೂ. ನೀಡುವಂತೆ ಒತ್ತಾಯಿಸಿ ಪಡೆದ. ಇಂತಹವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿಆಗ್ರಹಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಳಾಗಲು ಜಯ್ ಶಾ ಕಾರಣ:ಅರ್ಜುನ್ ರಣತುಂಗ

ಕೆಲ ದಿನಗಳ ಹಿಂದೆ ಪ್ರಯಾಣಿಕರೊಬ್ಬರು ಕೆಂಪೇಗೌಡ ಇಂಟರ್‌ ಜೇಂಜ್‌ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ನಲ್ಲಿ ಬೈಕ್‌ ನಿಲ್ಲಿಸಿದ್ದು, ವಾಪಸ್‌ ತೆಗೆದುಕೊಳ್ಳಲು ಹೋದಾಗ ಶುಲ್ಕ ಸಂಗ್ರಹಕಾರ 20 ರೂ. ನೀಡುವಂತೆ ಕೇಳಿದ್ದಾರೆ. ಅದಕ್ಕೆ ಬೈಕ್‌ ಮಾಲೀಕರು, ”ಎರಡು ಗಂಟೆಗಳ ಬೈಕ್‌ ನಿಲುಗಡೆ 20 ರೂ. ಹೇಗಾಗುತ್ತದೆ,” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಬ್ಬಂದಿ ಎರಡು ಗಂಟೆಗೆ 20 ರೂ, ನಂತರದ ಪ್ರತಿ ಗಂಟೆಗೆ ಹೆಚ್ಚುವರಿ ಶುಲ್ಕ ಇರುತ್ತದೆ,” ಎಂದು ಉತ್ತರಿಸಿದ್ದಾನೆ.

ನಿಗದಿತ ಪಾರ್ಕಿಂಗ್‌ ಶುಲ್ಕ ಎಷ್ಟು?

ದ್ವಿಚಕ್ರ ವಾಹನಗಳಿಗೆ ಮೊದಲ 4 ಗಂಟೆಗಳ ಅವಧಿಗೆ 15 ರೂ. ನಂತರ ಪ್ರತಿ ಗಂಟೆಗೆ ಹೆಚ್ಚುವರಿ 5 ರೂ.aನ್ನು ಪಾರ್ಕಿಂಗ್‌ಗೆ ಬಿಎಂಆರ್‌ಸಿಎಲ್‌ ನಿಗದಿ ಮಾಡಿದೆ. ಇಡೀ ದಿನ ದ್ವಿಚಕ್ರ ವಾಹನ ನಿಲುಗಡೆಗೆ ಗರಿಷ್ಠ 30ರೂ. ಸಂಗ್ರಹಿಸಬಹುದಾಗಿದೆ. ಕಾರುಗಳಿಗೆ ಮೊದಲ 4 ಗಂಟೆಗಳಿಗೆ 30 ರೂ. ಶುಲ್ಕ ಮತ್ತು ನಂತರದ ಪ್ರತಿ ಗಂಟೆಗೆ ಹೆಚ್ಚುವರಿ 10 ರೂ. ನಿಗದಿ ಮಾಡಿದ್ದು, ಇಡೀ ದಿನದ ನಿಲುಗಡೆಗೆ ಗರಿಷ್ಠ 60 ರೂ. ಆಗಬಹುದು. ಆದರೆ, ಪಾರ್ಕಿಂಗ್‌ ನಿರ್ವಾಹಕರು ಮತ್ತು ಸಿಬ್ಬಂದಿ ನಿಗದಿಗಿಂತ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ.

33 ನಿಲ್ದಾಣಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ

ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ ಪ್ರಕಾರ, ಕಾರ್ಯಾಚರಣೆಯಲ್ಲಿರುವ 66 ಮೆಟ್ರೋ ನಿಲ್ದಾಣಗಳ ಪೈಕಿ 33 ನಿಲ್ದಾಣಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದ್ದು, 11,496 ದ್ವಿಚಕ್ರವಾಹನ ಮತ್ತು 1724 ಕಾರುಗಳಿಗೆ ಪಾರ್ಕಿಂಗ್‌ ಸೇವೆ ಒದಗಿಸಲಾಗುತ್ತಿದೆ. ಇನ್ನು ಪಾರ್ಕಿಂಗ್‌ ಶುಲ್ಕದಿಂದ ಬಿಎಂಆರ್‌ಸಿಎಲ್‌ ಪ್ರತಿ ವರ್ಷ 6 ಕೋಟಿ ರೂ. ಆದಾಯ ಗಳಿಸುತ್ತಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಮೊದಲ ಹಂತದ ಮತದಾನ ದಿನ 2,172 ಪ್ರಕರಣ ದಾಖಲು

ಲೋಕಸಭಾ ಚುನಾವಣೆ ಹಿನ್ನೆಲೆ, ಏ.26 ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...

ಬೆಂಗಳೂರು | ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಿದ ತೇಜಸ್ವಿ ಸೂರ್ಯ: ಪ್ರಕರಣ ದಾಖಲು

ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಿದ ಆರೋಪದ ಮೇಲೆ ಬೆಂಗಳೂರು ದಕ್ಷಿಣ...

ಬೆಂಗಳೂರು | ಕೆಎಂಎಫ್ ಹೊಸ ದಾಖಲೆ​; ಒಂದೇ ದಿನ 51 ಲಕ್ಷ ಲೀಟರ್ ನಂದಿನಿ ಹಾಲು ಮಾರಾಟ

ವು(ಕೆಎಂಎಫ್‌) ನಂದಿನಿ ಬ್ರ್ಯಾಂಡ್​ ಉತ್ಪನ್ನಗಳ ಮಾರಾಟದಲ್ಲಿ ತನ್ನದೇ ದಾಖಲೆಯನ್ನು ಮುರಿದಿದೆ. ದಿನವೊಂದರಲ್ಲಿ...

ಬೆಂಗಳೂರು | ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ; ಮತದಾನ ಮಾಡಲು ಬಂದ ವೈದ್ಯನಿಂದ ಜೀವ ರಕ್ಷಣೆ

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಯಲ್ಲಿ ಮತದಾನ...