ನ್ಯೂಝಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ (673) ಅವರನ್ನು ಹಿಂದಿಕ್ಕಿ ಕೊಹ್ಲಿ (711) ಹೊಸ ದಾಖಲೆ ಬರೆದಿದ್ದಲ್ಲದೇ, ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಬಾರಿಸುವ ಮೂಲಕ ಸಚಿನ್ ಅವರ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಈ ಹಿಂದಿನ ಶತಕದ ಮೂಲಕ ಸಚಿನ್ ಅವರೊಂದಿಗೆ (49 ಶತಕ) ಸಮಬಲ ಸಾಧಿಸಿದ್ದರು.
ಕಿವೀಸ್ ವಿರುದ್ಧ 50ನೇ ಶತಕ ಪೂರ್ಣಗೊಳಿಸುವ ಮೂಲಕ ವಿರಾಟ್ ಕೊಹ್ಲಿ, ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇದಲ್ಲದೆ ವಿಶ್ವಕ್ರಿಕೆಟ್ನಲ್ಲಿ 50 ಏಕದಿನ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
113 ಎಸೆತದಲ್ಲಿ 2 ಸಿಕ್ಸ್ ಹಾಗೂ ಒಂಭತ್ತು ಬೌಂಡರಿಯ ನೆರವಿನಿಂದ 117 ರನ್ ಗಳಿಸಿ, ಟಿಮ್ ಸೌಥಿ ಎಸೆತದಲ್ಲಿ ಡೆವೊನ್ ಕಾನ್ವೆ ಅವರಿಗೆ ಕ್ಯಾಚಿತ್ತು ಔಟಾದರು.