ನ್ಯೂಜಿಲ್ಯಾಂಡ್ ವಿರುದ್ಧ ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ 70 ರನ್‌ಗಳ ಅಮೋಘ ಗೆಲುವು ದಾಖಲಿಸಿದೆ. ಆ ಮೂಲಕ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದೆ.
ಟೀಮ್ ಇಂಡಿಯಾ ಪರ ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಮಿಂಚಿದ್ದರೆ, ಬೌಲಿಂಗ್‌ನಲ್ಲಿ ಮಿಂಚಿದ ಮೊಹಮ್ಮದ್ ಶಮಿ 9.5 ಓವರ್‌ಗಳನ್ನು ಎಸೆದು 57 ರನ್ ನೀಡಿ 7 ವಿಕೆಟ್ ಗಳಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
A milestone-filled evening for Mohd. Shami 👏👏
Drop a ❤️ for #TeamIndia‘s leading wicket-taker in #CWC23 💪#MenInBlue | #INDvNZ pic.twitter.com/JkIigjhgVA
— BCCI (@BCCI) November 15, 2023
ನಿನ್ನೆಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಡ್ಯಾರೆಲ್ ಮಿಚೆಲ್ ಹಾಗೂ ವಿಲಿಯಮ್ಸನ್ 181 ರನ್ ಜೊತೆಯಾಟ ನಡೆಸಿ ಮುಂದುವರಿಯುತ್ತಿದ್ದುದರಿಂದ ಭಾರತದ ಆತಂಕ ಹೆಚ್ಚಿಸಿತ್ತು. ಬೌಲಿಂಗ್‌ನಲ್ಲಿ ವಿಫಲಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ, ಬ್ಯಾಟಿಂಗ್‌ನಲ್ಲಿ ಭರ್ಜರಿ ಬೌಂಡರಿ ಸಿಕ್ಸರ್ ಮೂಲಕ ದಿಟ್ಟ ಹೋರಾಟ ನೀಡಿತು. ಈ ಆತಂಕಕ್ಕೆ ಇಡೀ ವಾಂಖೆಡೆ ಸ್ಟೇಡಿಯಂನಲ್ಲಿ ಕುಳಿತಿದ್ದ ಟೀಮ್ ಇಂಡಿಯಾದ ಅಭಿಮಾನಿಗಳ ಮೌನವೇ ಸಾಕ್ಷಿಯಾಗಿತ್ತು.
ಒಂದು ಹಂತದಲ್ಲಿ ಟೀಮ್ ಇಂಡಿಯಾ ಸೋಲಬಹುದೇ, 2019ರ ಸೋಲಿನಂತೆಯೇ ಕೋಟ್ಯಂತರ ಭಾರತೀಯರ ಕನಸು ನನಸಾಗಲು ನ್ಯೂಜಿಲ್ಯಾಂಡ್ ಮತ್ತೆ ಅಡ್ಡಿಯಾಗಬಹುದೇ ಎಂದು ಆತಂಕಿತರಾಗಿದ್ದರು.

ಈ ವೇಳೆ ತಂತ್ರ ಬದಲಿಸಿದ ನಾಯಕ ರೋಹಿತ್ ಶರ್ಮಾ, ಮತ್ತೆ ಮೊಹಮ್ಮದ್ ಶಮಿಗೆ ಅವಕಾಶ ಕಲ್ಪಿಸಿಕೊಟ್ಟರು. ಆರಂಭಿಕ ಹಂತದಲ್ಲಿ ಪ್ರಮುಖ ಎರಡು ವಿಕೆಟ್ ಕಬಳಿಸಿ ಭಾರತಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟಿದ್ದ ಮೊಹಮ್ಮದ್ ಶಮಿ, ಮತ್ತೆ ನ್ಯೂಜಿಲ್ಯಾಂಡ್‌ನ ತಂಡದ ಬೃಹತ್ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.
Agony for some, ecstasy for others. (📷 – Reuters).
– The greatest cricketing picture…!!! pic.twitter.com/xoVNE1V0t3
— Mufaddal Vohra (@mufaddal_vohra) November 16, 2023
69 ರನ್ ಸಿಡಿಸಿ ಮುನ್ನಡೆಯುತ್ತಿದ್ದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಶಮಿ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ, ಬೌಂಡರಿ ಲೈನ್ ಬಳಿ ಇದ್ದ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಕ್ರೀಸ್‌ಗೆ ಬಂದ ಟಾಮ್ ಲಾಥಮ್ ಅವರನ್ನು ಎಲ್‌ಬಿಡಬ್ದಲ್ಯೂ ಬಲೆಗೆ ಬೀಳಿಸುವ ಮೂಲಕ ಖಾತೆ ತೆರೆಯಲು ಶಮಿ ಅವಕಾಶವೇ ನೀಡಲಿಲ್ಲ. ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ, ಮೌನಕ್ಕೆ ಶರಣಾಗಿದ್ದ ಅಭಿಮಾನಿಗಳು ಮತ್ತೆ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಈ ನಡುವೆ ಕ್ರೀಸ್‌ನಲ್ಲಿದ್ದ ಮಿಚೆಲ್ ಸೆಂಚುರಿ ಸಂಭ್ರಮ ಆಚರಿಸಿದರು.
ಈ ಪಂದ್ಯದ ಮೂಲಕ ಮೊಹಮ್ಮದ್ ಶಮಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ವಿರಾಟ್, ಅಯ್ಯರ್ ಹೆಸರು ಉಲ್ಲೇಖಿಸಿ ಶಮಿ ಹೆಸರು ಕಡೆಗಣಿಸಿದ ಪ್ರಲ್ಹಾದ್ ಜೋಶಿ; ಭಾರೀ ವಿರೋಧ
ಸಾಧನೆಗಳ ವಿವರ ಹೀಗಿದೆ:
ಸೆಮಿಫೈನಲ್ ಪಂದ್ಯದಲ್ಲಿ 7 ವಿಕೆಟ್ ಪಡೆದು ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ 4ನೇ ಬಾರಿ 5 ವಿಕೆಟ್ ಸಾಧನೆ ಮೆರೆದು ಆಸ್ಟ್ರೇಲಿಯಾ ಮಾಜಿ ವೇಗಿ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದ್ದ 3 ಬಾರಿ 5 ವಿಕೆಟ್ ಸಾಧನೆಯನ್ನು ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಮುರಿದಿದ್ದಾರೆ.
2003ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 23 ರನ್ ನೀಡಿ 6 ವಿಕೆಟ್ ಪಡೆದಿದ್ದ ಆಶಿಶ್ ನೆಹ್ರಾ ಅವರ ಸ್ಪೆಲ್ ಟೀಮ್ ಇಂಡಿಯಾ ಪರ ಅತ್ಯುತ್ತಮವಾಗಿತ್ತು. ಇದೀಗ ಶಮಿ ಆ ದಾಖಲೆಯನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಯಾವುದೇ ಬೌಲರ್ 7 ವಿಕೆಟ್ ಪಡೆದಿರಲಿಲ್ಲ. ಸ್ಟುವರ್ಟ್ ಬಿನ್ನಿ ಬಾಂಗ್ಲಾದೇಶದ ವಿರುದ್ಧ 4 ರನ್ ನೀಡಿ 7 ವಿಕೆಟ್ ಪಡೆದಿದ್ದದ್ದು ಇಲ್ಲಿಯವರೆಗೆ ದಾಖಲೆಯಾಗಿತ್ತು.
ಇದನ್ನು ಓದಿದ್ದೀರಾ? ವಿಶ್ವಕಪ್ ಕ್ರಿಕೆಟ್ | ದಾಖಲೆಗಳ ಸರದಾರ ಮೊಹಮ್ಮದ್ ಶಮಿಗೊಂದು ಸಲಾಮ್
ಇನ್ನು ಶಮಿ ವಿಶ್ವಕಪ್‌ನಲ್ಲಿ 7 ವಿಕೆಟ್ ಪಡೆದ 5ನೇ ಬೌಲರ್ ಎನಿಸಿಕೊಂಡರು. ಈ ಹಿಂದೆ ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾತ್ (15ಕ್ಕೆ7), ಆಂಡ್ರ್ಯೂ ಬೈಕಲ್ 20ಕ್ಕೆ7), ಕಿವೀಸ್ನ ಟಿಮ್ ಸೌಥಿ (33ಕ್ಕೆ 7), ವಿಂಡೀಸ್ನ ವಿನ್ಸಂಟ್ ಡೇವಿಸ್ (51ಕ್ಕೆ7) ವಿಕೆಟ್ ಪಡೆದಿದ್ದರು.
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎನಿಸಿಕೊಂಡರು. ಶಮಿ ಒಟ್ಟು 4 ಬಾರಿ 5 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 3 ಬಾರಿ ಪಡೆದು 2ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಭಾರತದ ಪರ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
2023ರ ವಿಶ್ವಕಪ್‌ನ ಗರಿಷ್ಠ ವಿಕೆಟ್
ಮೊಹಮ್ಮದ್ ಶಮಿ: 6 ಪಂದ್ಯಗಳಲ್ಲಿ 23 ವಿಕೆಟ್
ಆಡಂ ಜಂಪಾ(ಆಸ್ಟ್ರೇಲಿಯಾ): 9 ಪಂದ್ಯಗಳಲ್ಲಿ 22 ವಿಕೆಟ್
ವಿಶ್ವಕಪ್‌ನ ಒಂದು ಸೀಸನ್‌ನಲ್ಲಿ ಗರಿಷ್ಟ ವಿಕೆಟ್ ಪಡೆದವರ ಸಾಲಿನಲ್ಲಿ 3ನೇ ಸ್ಥಾನ
ಮಿಚೆಲ್ ಸ್ಟಾರ್ಕ್ | 2019 | 10 ಪಂದ್ಯಗಳಲ್ಲಿ 27 ವಿಕೆಟ್
ಮೆಕ್‌ಗ್ರಾತ್ | 2007 | 11 ಪಂದ್ಯಗಳಲ್ಲಿ 26 ವಿಕೆಟ್
ಶಮಿ | 2023 | 6 ಪಂದ್ಯಗಳಲ್ಲಿ 23 ವಿಕೆಟ್
ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನ
• ಮೆಕ್‌ಗ್ರಾತ್ | 39 ಪಂದ್ಯಗಳಲ್ಲಿ 71 ವಿಕೆಟ್
• ಮುರಳೀಧರನ್ | 40 ಪಂದ್ಯಗಳಲ್ಲಿ 68 ವಿಕೆಟ್
• ಮಿಚೆಲ್ ಸ್ಟಾರ್ಕ್ | 26 ಪಂದ್ಯಗಳಲ್ಲಿ 59 ವಿಕೆಟ್
• ಲಸಿತ್ ಮಲಿಂಗ | 29 ಪಂದ್ಯಗಳಲ್ಲಿ 56 ವಿಕೆಟ್
• ವಾಸಿಂ ಅಕ್ರಮ್ | 38 ಪಂದ್ಯಗಳಲ್ಲಿ 55 ವಿಕೆಟ್
• ಮೊಹಮ್ಮದ್ ಶಮಿ | 17 ಪಂದ್ಯಗಳಲ್ಲಿ 54 ವಿಕೆಟ್
Mohammed Shami has taken 54 wickets from just 17 innings with 4 five wicket hauls in the World Cup history.
– The greatest ever to perform in World Cups…!!! pic.twitter.com/789lRwuKmM
— Mufaddal Vohra (@mufaddal_vohra) November 16, 2023
ವಿಶ್ವಕಪ್‌ನ ಒಂದು ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದ ಕೇವಲ 5ನೇ ಬೌಲರ್
• ಮೆಕ್‌ಗ್ರಾತ್ | 15 ರನ್‌ಗೆ 7 ವಿಕೆಟ್
• ಮಿಚೆಲ್ | 20 ರನ್‌ಗೆ 7 ವಿಕೆಟ್
• ಸೌಥಿ | 33 ರನ್‌ಗೆ 7 ವಿಕೆಟ್
• ಡೇವಿಸ್ | 51 ರನ್‌ಗೆ 7 ವಿಕೆಟ್
• ಶಮಿ | 57 ರನ್‌ಗೆ 7 ವಿಕೆಟ್
ವಿಶ್ವಕಪ್‌ನಲ್ಲಿ 4 ಬಾರಿ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎನಿಸಿದ ಶಮಿ (ಹಿಂದಿನ ದಾಖಲೆ – ಮಿಚೆಲ್ ಸ್ಟಾರ್ಕ್ – 3 ಬಾರಿ)
ಏಕದಿನ ವಿಶ್ವಕಪ್ ನಲ್ಲಿ ಕಡಿಮೆ ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿ (ಹಿಂದಿನ ದಾಖಲೆ – ಮಿಚೆಲ್ ಸ್ಟಾರ್ಕ್)
ಏಕದಿನ ಕ್ರಿಕೆಟ್‌ನಲ್ಲಿ ಭಾರತೀಯ ಬೌಲರ್‌ನ ಅತ್ಯುತ್ತಮ ಪ್ರದರ್ಶನ – 57/7 (ಹಿಂದಿನ ದಾಖಲೆ-ಸ್ಟುವರ್ಟ್ ಬಿನ್ನಿ – 4/6)
ವಿಶ್ವಕಪ್ ನಾಕೌಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ(ಹಿಂದಿನ ದಾಖಲೆ- ಗ್ಯಾರಿ ಗಿಲ್ಮೋರ್ – 14/6)
ಮೊಹಮ್ಮದ್ ಶಮಿ ವಿಶ್ವಕಪ್ ಪಂದ್ಯದಲ್ಲಿ ಪಡೆದ ವಿಕೆಟ್‌ಗಳು:
2015ರಲ್ಲಿ – 7 ಪಂದ್ಯ- 17 ವಿಕೆಟ್
2019ರಲ್ಲಿ – 4 ಪಂದ್ಯ- 14 ವಿಕೆಟ್
2023ರಲ್ಲಿ – 6 ಪಂದ್ಯ- 23 ವಿಕೆಟ್
ಆಡಿದ ಆರು ಪಂದ್ಯದಲ್ಲಿ ಮೂರು ‘ಮ್ಯಾನ್ ಆಫ್ ದಿ ಮ್ಯಾಚ್’
ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಈವರೆಗೆ ಸೆಮಿಫೈನಲ್ ಸೇರಿದಂತೆ ಒಟ್ಟು 10 ಪಂದ್ಯಗಳನ್ನು ಆಡಿದೆ. ಆದರೆ ಶಮಿ ತಂಡಕ್ಕೆ ಬಂದದ್ದು ಹಾರ್ದಿಕ್ ಪಾಂಡ್ಯಾ ಗಾಯಾಳು ಆದ ನಂತರ. ಮೊಹಮ್ಮದ್ ಶಮಿ ಈವರೆಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಆಡಿದ ಆರು ಪಂದ್ಯದಲ್ಲಿ ಮೂರು ‘ಮ್ಯಾನ್ ಆಫ್ ದಿ ಮ್ಯಾಚ್’ ಪಡೆದಿದ್ದಾರೆ.
ಟೀಮ್ ಇಂಡಿಯಾ ಆಡಿದ 5ನೇ ಪಂದ್ಯ(ನ್ಯೂಜಿಲ್ಯಾಂಡ್), ಏಳನೇ ಪಂದ್ಯ(ಶ್ರೀಲಂಕಾ) ಹಾಗೂ 10ನೇ ಪಂದ್ಯ ಅಂದರೆ ಸೆಮಿಫೈನಲ್( ನ್ಯೂಜಿಲ್ಯಾಂಡ್)ಪಂದ್ಯದಲ್ಲಿ ಶಮಿ ತಮ್ಮ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.