ನಂಬರ್ ಒನ್ ಜನಪ್ರಿಯ ಮಾಧ್ಯಮ ವಾಟ್ಸಾಪ್ ಎರಡು ಅಕೌಂಟ್ ಬಳಸುವ ಆಯ್ಕೆಯನ್ನು ಪರಿಚಯಿಸಿದೆ. ಇನ್ನು ಮುಂದೆ ವಾಟ್ಸಾಪ್ ಬಳಕೆದಾರರು ತಮ್ಮ ಆ್ಯಪ್‌ನಲ್ಲಿ ಎರಡು ಅಕೌಂಟ್‌ಗಳನ್ನು ಬಳಸಬಹುದು.
ಈಗಾಗಲೇ ಈ ವಿನೂತನ ಫೀಚರ್ ಆಂಡ್ರಾಯ್ಡ್ ಹಾಗೂ ಐಫೋನ್‌ನಲ್ಲಿ ಲಭ್ಯವಿದೆ. ಈ ಮೊದಲು ಎರಡು ನಂಬರ್ ಅಕೌಂಟ್ ಬಳಸಬೇಕಾದರೆ ಎರಡು ಮೊಬೈಲ್‌ಗಳನ್ನು ಇಟ್ಟುಕೊಳ್ಳಬೇಕಿತ್ತು ಅಥವಾ ಇನ್ನೊಂದು ನಂಬರ್‌ಗೆ ಲಾಗೌಟ್ ಮಾಡಿ ಬದಲಿಸಿಕೊಳ್ಳಬೇಕಿತ್ತು.
ಕೆಲವು ದಿನಗಳ ಹಿಂದೆ ಮೆಟಾ ಸಿಇಓ ಮಾರ್ಕ್ ಜುಕರ್‌ಬರ್ಗ್, ”ವಾಟ್ಸ್ ಆ್ಯಪ್‌ನಲ್ಲಿ ಎರಡು ಅಕೌಂಟ್‌ಗಳ ನಡುವೆ ಬದಲಾಯಿಸಿಕೊಳ್ಳಿ. ಶೀಘ್ರದಲ್ಲೇ ನೀವು ಅಪ್ಲಿಕೇಶನ್‌ನಲ್ಲಿ ಒಂದು ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಹೊಂದಲು ಸಾಧ್ಯವಾಗುತ್ತದೆ” ಎಂದು ತಿಳಿಸಿದ್ದರು.
ಈ ವಿನೂತನ ಆಯ್ಕೆಯಿಂದ ಒಂದು ಮೊಬೈಲ್‌ನಲ್ಲಿ ಎರಡು ಸಿಮ್ ಹೊಂದಿರುವ ಸ್ಮಾರ್ಟ್ ಫೋನ್ ಬಳಕೆದಾರರು ಇನ್ನೊಂದು ವಾಟ್ಸಾಪ್ ಅಕೌಂಟ್ ಬಳಕೆಗೆ ಬೇರೆ ಫೋನ್ ಬಳಸುವ ಅಗತ್ಯವಿರುವುದಿಲ್ಲ.
ಎರಡು ಅಕೌಂಟ್ ಬಳಸುವುದು ಹೇಗೆ?
ವಾಟ್ಸಾಪ್ನಲ್ಲಿ ಏಕಕಾಲದಲ್ಲಿ ಎರಡು ಅಕೌಂಟ್‌ಗಳ ನಂಬರ್‌ಗಳನ್ನು ಹೊಂದುವುದು ಸರಳ ಪ್ರಕ್ರಿಯೆಯಾಗಿದೆ.
ಮೊದಲಿಗೆ, ‘ಸೆಟ್ಟಿಂಗ್ಸ್’ಗೆ ಹೋಗಬೇಕು. ‘ಸೆಟ್ಟಿಂಗ್‌ಗಳು’ ಅಡಿಯಲ್ಲಿ, ನಿಮ್ಮ ಹೆಸರಿನ ಮುಂದೆ ಸಣ್ಣ ಬಾಣದ ಗುರುತಿರುತ್ತದೆ. ಅದನ್ನು ಸ್ಪರ್ಶಿಸಿದರೆ ‘Add Account’ ಆಯ್ಕೆ ಬರುತ್ತದೆ. ನಂತರ, ‘Add Account’ನಲ್ಲಿ ನಿಮ್ಮ ಫೋನ್ ನಂಬರ್ ನಮೂದಿಸಿದರೆ ವೆರಿಫೈ ಕೋಡ್ ನಿಮ್ಮ ಸಂಖ್ಯೆಗೆ ಬರುತ್ತದೆ. ಅದನ್ನು ನಮೂದಿಸಿದ ನಂತರ ಎರಡೂ ನಂಬರ್ ಚಾಲ್ತಿಗೊಳ್ಳುತ್ತದೆ.
ಎರಡೂ ನಂಬರ್‌ಗಳಲ್ಲಿ ನಿಮಗೆ ಬೇಕಾದ ನಂಬರ್ ಅಕೌಂಟ್ ಆಯ್ಕೆ ಮಾಡಿಕೊಳ್ಳಲು ಕೆಳಗೆ ಎರಡು ನಂಬರ್‌ಗಳ ಆಯ್ಕೆಯಿರುತ್ತದೆ. ನಿಮಗೆ ಬೇಕಾದಾಗ ಯಾವುದು ಬೇಕೋ ಅದನ್ನು ಬಳಸಬಹುದು. ಈ ರೀತಿಯ ಸೌಲಭ್ಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಈಗಾಗಲೇ ಲಭ್ಯವಿದೆ.
ಈ ಸುದ್ದಿ ಓದಿದ್ದೀರಾ? ಅನ್‌ವೆರಿಫೈಡ್ ಟ್ವಿಟರ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಪೋಸ್ಟ್, ಲೈಕ್, ರೀಟ್ವಿಟ್ಗೂ ಇನ್ಮುಂದೆ ಹಣ ಪಾವತಿಸಬೇಕು !
ವಾಯ್ಸ್ ಚಾಟ್ ಪರಿಚಯ
ವಾಟ್ಸಾಪ್ ದೊಡ್ಡ ಗುಂಪುಗಳಿಗೆ ವಾಯ್ಸ್ ಚಾಟ್ ವೈಶಿಷ್ಟ್ಯವನ್ನು ಅಧಿಕೃತವಾಗಿ ಹೊರತರಲು ಪ್ರಾರಂಭಿಸಿದೆ. ಈ ಬಗ್ಗೆ ವಾಟ್ಸ್ ಆ್ಯಪ್ ಮಾಹಿತಿ ನೀಡಿದೆ. ಈ ಹಿಂದೆ ಬೀಟಾದಲ್ಲಿ ಗುರುತಿಸಲಾಗಿದ್ದ ಈ ವೈಶಿಷ್ಟ್ಯವು, ಈಗಾಗಲೇ ಲಭ್ಯವಿರುವ ಗ್ರೂಪ್ ಚಾಟ್ ವೈಶಿಷ್ಟ್ಯಕ್ಕಿಂತ ಬಹುವಿಧದಲ್ಲಿ ಭಿನ್ನವಾಗಿದೆ.
ಹೊಸ ಫೀಚರ್ ಬಳಸಬೇಕಾದರೆ ಬಳಕೆದಾರರು ಮೊದಲು ವಾಯ್ಸ್ ಚಾಟ್ ಪ್ರಾರಂಭಿಸಲು ಬಯಸುವ ಗ್ರೂಪ್ ಚಾಟ್ ತೆರೆಯಬೇಕು. ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ವೀವ್ ಐಕಾನ್ ಅನ್ನು ಸ್ಪರ್ಶಿಸಬೇಕು. ನಂತರ ವಾಯ್ಸ್ ಚಾಟ್ ಆರಂಭಿಸಿ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಬೇಕು.
ವಾಯ್ಸ್ ಚಾಟ್‌ನಿಂದ ಹೊರಬರಲು ಎಕ್ಸ್ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಇದರ ಜೊತೆಗೆ ವಾಟ್ಸ್ ಆ್ಯಪ್ 33 ರಿಂದ 128 ಸದಸ್ಯರು ಇರುವ ದೊಡ್ಡ ಗ್ರೂಪ್‌ಗಳಿಗೆ ಜಾಗತಿಕವಾಗಿ ವಾಯ್ಸ್ ಚಾಟ್‌ಗಳನ್ನು ಹೊರತರುತ್ತಿದೆ.