ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್ 2023ರ ಎರಡನೇ ಸೆಮಿಫೈನಲ್ ಪಂದ್ಯ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ.
ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ತೆಂಬಾ ಬವುಮಾ ಔಟಾಗಿದ್ದು, ಹರಿಣಗಳ ತಂಡ ಆರಂಭಿಕ ಆಘಾತ ಅನುಭವಿಸಿದೆ. ಇತ್ತೀಚಿನ ವರದಿಗಳಂತೆ ದಕ್ಷಿಣ ಆಫ್ರಿಕಾ 9 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿದೆ.
ಐದು ಬಾರಿಯ ಚಾಂಪಿಯನ್ ಆಸೀಸ್ ಹಾಗೂ ನಾಲ್ಕು ಬಾರಿ ಸೆಮಿಫೈನಲ್ ಪ್ರವೇಶಿಸಿ ಸೋಲು ಅನುಭವಿಸಿದ್ದ ಹರಿಣಗಳ ತಂಡ ಟೂರ್ನಿಯಲ್ಲಿ ಸಮಬಲ ಸಾಧಿಸಿವೆ. ಎರಡು ತಂಡಗಳು ಎರಡು ಬಾರಿ ಸೋಲು ಕಂಡಿವೆ.
ತೆಂಬಾ ಬವುಮಾ ನೇತೃತ್ವದ ಹರಿಣಗಳ ತಂಡ ಆಸ್ಟ್ರೇಲಿಯಾ ವಿರುದ್ಧ ರೌಂಡ್ ರಾಬಿನ್ ಲೀಗ್ ಹಂತದಲ್ಲಿ ಜಯಗಳಿಸಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ನ.19ರಂದು ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ ನಡೆಯುವ ಫೈನಲ್‌ನಲ್ಲಿ ಸೆಣಸಲಿದೆ.
ಈ ಸುದ್ದಿ ಓದಿದ್ದೀರಾ? ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಳಾಗಲು ಜಯ್ ಶಾ ಕಾರಣ: ಅರ್ಜುನ ರಣತುಂಗ ಸ್ಫೋಟಕ ಹೇಳಿಕೆ
16 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ತಂಡ ಏಕದಿನ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. 1999 ಮತ್ತು 2007ರಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾದ್ದವು. ಆ ಎರಡೂ ಸಂದರ್ಭಗಳಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಬಾರಿ ‘ಚೋಕರ್ಸ್’ ಪಟ್ಟ ಕಳಚುವ ಮತ್ತೊಂದು ಅವಕಾಶ ಬಂದಿದೆ. ಟೂರ್ನಿಯಲ್ಲಿ ಟೂರ್ನಿ ಎರಡೂ ತಂಡಗಳು ಪ್ರಬಲ ತಂಡಗಳಾಗಿ ಹೊರಹೊಮ್ಮಿವೆ.
ಇಲ್ಲಿಯವರೆಗೆ ಆಸ್ಟ್ರೇಲಿಯಾ ಮತ್ತು ಹರಿಣಗಳ ತಂಡಗಳು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಒಟ್ಟು 7 ಬಾರಿ ಮುಖಾಮುಖಿಯಾಗಿವೆ. ಇಲ್ಲಿ ತಂಡಗಳು ಸಮಬಲದ ಹೋರಾಟ ನಡೆಸಿವೆ. ಆಸ್ಟ್ರೇಲಿಯಾ 3 ಮತ್ತು ದಕ್ಷಿಣ ಆಫ್ರಿಕಾ ಕೂಡ 3 ಪಂದ್ಯ ಗೆದ್ದಿದೆ. ಒಂದು ಪಂದ್ಯ ಟೈ ಆಗಿತ್ತು.
HERE. WE. GO.
Our Aussie men take on South Africa for a spot in the #CWC23 Final, live from 7:30pm TONIGHT! 🇦🇺 pic.twitter.com/EaekJJd63S
— Cricket Australia (@CricketAus) November 16, 2023
ಕ್ವಿಂಟನ್ ಡಿ ಕಾಕ್, ಮ್ಯಾಕ್ಸ್‌ವೆಲ್ ಆಕರ್ಷಣೆ
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ನಾಲ್ಕು ಶತಕಗಳೊಂದಿಗೆ ಒಟ್ಟು 591 ರನ್ ಗಳಿಸಿದ್ದಾರೆ. ರೆಸಿ ವ್ಯಾನ್ ಡರ್ ಡಸೆ (442 ರನ್) ಮತ್ತು ಏಡನ್ ಮರ್ಕರಮ್ (396 ರನ್) ಅವರೂ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಆಸ್ಟ್ರೇಲಿಯಾ ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತದ ಎದುರು ಸೋತ ನಂತರ ಸತತ ಏಳು ಪಂದ್ಯಗಳನ್ನು ಗೆದ್ದಿದೆ. ಆಸೀಸ್ ಬ್ಯಾಟರ್‌ಗಳು ಅಮೋಘ ಲಯದಲ್ಲಿದ್ದಾರೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಮತ್ತು ದ್ವಿಶತಕ ಬಾರಿಸಿ ಗಮನ ಸೆಳೆದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ಹರಿಣಗಳ ತಂಡದ ಬೌಲರ್‌ಗಳಾದ ಲುಂಗಿ ಗಿಡಿ, ಮಾರ್ಕೊ ಯಾನ್ಸನ್, ಸ್ಪಿನ್ನರ್ ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ಅವರ ಮುಂದೆ ಮ್ಯಾಕ್ಸ್‌ವೆಲ್ ಅವರನ್ನು ಕಟ್ಟಿಹಾಕುವ ಪ್ರಮುಖ ಸವಾಲು ಇದೆ. ಆಸೀಸ್ ಪರ ಬೌಲಿಂಗ್‌ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಒಳಗೊಂಡು ಆಡಮ್ ಜಂಪಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಉತ್ತಮ ಲಯದಲ್ಲಿದ್ದಾರೆ.
11ರ ಬಳಗದ ಉಭಯ ತಂಡಗಳು
ದಕ್ಷಿಣಆಫ್ರಿಕಾ:
ತೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೋಜಿ, ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ರೀಜಾ ಹೆನ್ರಿಕ್ಸ್, ಮಾರ್ಕೊ ಯಾನ್ಸನ್, ಹೆನ್ರಿಚ್ ಕ್ಲಾಸನ್ (ವಿಕೆಟ್‌ಕೀಪರ್), ಆ್ಯಂಡಿಲೆ ಪಿಶುವಾಯೊ, ಕೇಶವ್ ಮಹಾರಾಜ್, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ರಸಿ ವ್ಯಾನ್ ಡೆರ್ ಡಸೆ, ಲಿಜಾದ್ ವಿಲಿಯಮ್ಸ್.
ಆಸ್ಟ್ರೇಲಿಯಾ:
ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಇಂಗ್ಲಿಷ್ (ವಿಕೆಟ್‌ಕೀಪರ್), ಸೀನ್ ಅಬಾಟ್, ಆ್ಯಷ್ಟನ್ ಆಗರ್, ಕ್ಯಾಮರಾನ್ ಗ್ರೀನ್ , ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ, ಮಿಚೆಲ್ ಸ್ಟಾರ್ಕ್.