ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಬುಧವಾರ ಪದಗ್ರಹಣ ಮಾಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಬೀರೂರು ಬಿಜೆಪಿ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಮಹಾತ್ಮಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಎಪಿಎಂಸಿ ಮಾಜಿ ನಿರ್ದೇಶಕ ಮಾರ್ಗದ ಮಧು ಮಾತನಾಡಿ, “ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಸಲು ಪಕ್ಷವು ಯುವ ಮುಖಂಡ ಬಿ ವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ” ಎಂದರು.
“ದೀಪಗಳ ಹಬ್ಬದ ಸಂಭ್ರಮದ ನಡುವೆಯೇ ಅವರು ಅಧ್ಯಕ್ಷ ಸ್ಥಾನ ಸ್ವೀಕರಿಸಿರುವುದು ಇಡೀ ರಾಜ್ಯ ಘಟಕಕ್ಕೆ ಹುಮ್ಮಸ್ಸು ತಂದಿದೆ. ಸದ್ಯದಲ್ಲೇ ನಡೆಯಬಹುದಾದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾರ್ಯಕರ್ತರು ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಬಲ ಪ್ರದರ್ಶಿಸಲಿದ್ದಾರೆ. ಅವರ ಸಾರಥ್ಯದಲ್ಲಿ ಬಿಜೆಪಿ ಯಶಸ್ವಿಯಾಗಿ 28 ಕ್ಷೇತ್ರಗಳಲ್ಲೂ ತನ್ನ ಸಾಮರ್ಥ್ಯ ಸಾಬೀತು ಪಡಿಸುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬದಲಾವಣೆಗೆ ಸಾಮಾಜಿಕ ಮಾಧ್ಯಮಗಳ ಪರಿಣಾಮಕಾರಿ ಬಳಕೆ ಅಗತ್ಯ: ಎ ನರಸಿಂಹಮೂರ್ತಿ
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಸವಿತಾ ರಮೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ ಪಿ ಸುದರ್ಶನ್, ಬೀರೂರು ಬಿಜೆಪಿ ಘಟಕದ ಅಧ್ಯಕ್ಷ ವಿಕ್ರಂ, ಪುರಸಭೆ ಸದಸ್ಯ ಎನ್ ಎಂ ನಾಗರಾಜ್, ಜಿ ಲಕ್ಷ್ಮಣ್, ಮಾನಿಕ್ ಬಾಷಾ, ಹುಲ್ಲೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣ್, ಕಾರ್ಯಕರ್ತರುಗಳಾದ ಶ್ರೀಧರ್, ಎಸ್ ಎಸ್ ದೇವರಾಜ್, ಹರಿಪ್ರಸಾದ್, ಸುಪ್ರೀತ್, ಬಿ ಎಂ ರುದ್ರಪ್ಪ, ಶಬರೀಶ, ಬಿ ಆರ್ ಶಿವಮೂರ್ತಿ, ರವಿಕುಮಾರ್, ಪ್ರಕಾಶ್ ಇದ್ದರು.