ಕಲಬುರಗಿ ಜಿಲ್ಲೆಯ ಪಟ್ಟಣ ಗ್ರಾಮದಲ್ಲಿ 1,600 ಮನೆಗಳಿದ್ದರೂ, ಸರ್ಕಾರದಿಂದ ಸ್ವಚ್ಛ ಭಾರತ್ ಅಡಿಯಲ್ಲಿ ಶಾಚಾಲಯ ವ್ಯವಸ್ಥೆಯನ್ನು ಒದಗಿಲಾಗಿಲ್ಲ. ಹೀಗಾಗಿ, ಈಗಲೂ ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಚೆಂಬು ಹಿಡಿದು ಬಯಲಿಗೆ ಹೋಗುವ ಪರಿಸ್ಥಿತಿ ಇದೆ. ಕೂಡಲೇ, ಶೌಚಾಲಯಗಳನ್ನು ಕಟ್ಟಿಸಿಕೊಡಬೇಕು ಎಂಧು ಗ್ರಾಮದ ಹೆಣ್ಣು ಮಕ್ಕಳು ಒತ್ತಾಯಿಸಿದ್ದಾರೆ.
ಗ್ರಾಮದ ನಿವಾಸಿ ಕಸ್ತೂರಿಬಾಯಿ ಮಾತನಾಡಿ, “ಶೌಚಾಲಯ ಇಲ್ಲದೆ ಇರುವ ಕಾರಣ ನಾವೆಲ್ಲ ಬಯಲು ಪ್ರದೇಶಕ್ಕೆ ಹೋಗಬೇಕಾಗಿದೆ. ಊರು ಆಗಸಿಯಲ್ಲಿ ಸುಮಾರು ಗಂಡಸರು ಕುತ್ತಿರುತ್ತಾರೆ ಹಾಗೆ ಅವರ ಮುಂದೆ ಚಂಬು ಹಿಡಿದುಕೊಂಡು ಹೋಗಬೇಕು. ನಾವು ಹಿರಿಯರು ವಯಸ್ಸಾದವರು ಹೇಗೊ ಹೋಗತ್ತೀವಿ. ಸಣ್ಣ ಸಣ್ಣ ಹೆಣ್ಣುಮಕ್ಕಳು ಪರಿಸ್ಥಿತಿ ಏನು? ನಮಗೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡಬೇಕು” ಎಂದು ಅಗ್ರಹಿಸಿದರು.
ಕಮಲಬಾಯಿ ಪಟ್ಟಣ ಗ್ರಾಮದ ನಿವಾಸಿ ಈದಿನ.ಕಾಮ್ ಜೊತೆ ಮಾತನಾಡಿ, “ಮನೆ ಮನೆಗೆ ಶೌಚಾಲಯ ಎಂದು ಮಾಡಿದ್ದಾರೆ. ಆದರೆ, ಅದು ನಾಮಕೆ ವಾಸ್ತೆಗಷ್ಟೇ ಇದೆ. ಶೌಚಾಲಯ ಬಾಗಿಲು ಮುರಿದು ಹೋಗಿವೆ. ಸರಿಯಾದ ರೀತಿಯಲ್ಲಿ ನಿರ್ಮಾಣ ಆಗಿಲ್ಲ” ಎಂದು ಆರೋಪಿಸಿದರು.
ಗ್ರಾಮದ ನಿವಾಸಿ ಶಿವಲಿಂಗಮ್ಮ ಮಾತನಾಡಿ, “ಮನೆ ಮನೆಗೆ ಶೌಚಾಲಯ ಮಾಡ್ತೀವಿ ಅಂತ ಹೇಳುತ್ತಲೇ ಇದ್ದಾರೆ. ಅದರೆ, ಈವರೆಗೂ ಯಾರ ಮನೆಗೂ ಶೌಚಾಲಯ ನೀಡಲಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ನಿವಾಸಿ ಜಯಶ್ರೀ ಮಾತನಾಡಿ, “ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ನಾವೆಲ್ಲರೂ ರೋಡಿಗೆ ಹೋಗುತ್ತೇವೆ. ನಮ್ಮ ಗ್ರಾಮದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಹೆಣ್ಣುಮಕ್ಕಳಿಗೆ ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ. ಸಾರ್ವಜನಿಕರ ಶೌಚಾಲಯ ಬೇಕೇ ಬೇಕು” ಎಂದು ಅಗ್ರಹಿಸಿದರು.
ವೀರಣ್ಣ ಗೌಡ ಗ್ರಾಮ ಪಂಚಾಯತ್ ಕಾರ್ಯದರ್ಶಿ ಈದಿನ.ಕಾಮ್ ಪ್ರತಿನಿಧಿಯೊಂದಿಗೆ ಮಾತನಾಡಿ,
“ಪಟ್ಟಣ ಗ್ರಾಮದಲ್ಲಿ ಒಟ್ಟು ಸಾವಿರದ ಅರನ್ನೂರು ಮನೆಗಳಿವೆ. ಎಂಟುನ್ನೂರು ಮನೆಗಳಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಉಳಿದ ಎಂಟುನ್ನೂರು ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡುವುದು ಬಾಕಿ ಇದೆ” ಎಂದು ತಿಳಿಸಿದರು.