ಗದಗ | ಕನ್ನಡ ಕಥಾ ಪರಂಪರೆಗೆ ನಮ್ಮ ನೆಲದ ಕೊಡುಗೆ ಅನನ್ಯ: ಟಿ ಎಸ್ ಗೊರವರ 

Date:

Advertisements
  • ‘ನಮ್ಮದೇ ಪರಿಸರದ ಬರಹಗಾರರು ಎನ್ನುವುದು ಅಭಿಮಾನದ ಸಂಗತಿ’
  • ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ

‘ಪಂಚತಂತ್ರ’ ರಚಿಸಿದ ಸವಡಿಯ ದುರ್ಗಸಿಂಹ, ‘ಮಣ್ಣು’ ಎನ್ನುವ ಅಪರೂಪದ ಕತೆ ಬರೆದ ಅಬ್ಬಿಗೇರಿಯ ಗಿರಡ್ಡಿ ಗೋವಿಂದರಾಜ ಅವರು ನಮ್ಮದೇ ಪರಿಸರದ ಬರಹಗಾರರು ಎನ್ನುವುದು ಅಭಿಮಾನದ ಸಂಗತಿ. ಕನ್ನಡ ಕಥಾ ಪರಂಪರೆ ವಿಸ್ತರಿಸುವಲ್ಲಿ ನಮ್ಮ ನೆಲದ ಕೊಡುಗೆ ಅನನ್ಯ ಎಂದು ಕಥೆಗಾರ ಟಿ ಎಸ್ ಗೊರವರ ಹೇಳಿದರು.

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ನವೋದಯ, ನವ್ಯ, ಪ್ರಗತಿಶೀಲ ಹಾಗೂ ದಲಿತ-ಬಂಡಾಯ ಸಾಹಿತ್ಯ ಕಾಲಘಟ್ಟಗಳ ಭಿನ್ನ ಭಿನ್ನ ವಸ್ತು, ವಿಷಯ, ವಿನ್ಯಾಸ, ನಿರೂಪಣೆಗಳಿಂದ ನಮ್ಮ ಕಥನ ಪರಂಪರೆ ಶ್ರೀಮಂತಗೊಂಡಿದೆ. ನವೋದಯ ಕಾಲದ ಸಣ್ಣಕಥೆಗಳು ಬಹು ಮುಖ್ಯವಾಗಿ ಮಾನವತಾವಾದ, ಆದರ್ಶವಾದ, ರಾಷ್ಟ್ರೀಯತೆಯನ್ನು ತಳಹದಿಯನ್ನಾಗಿಸಿಕೊಂಡು ರಚನೆಯಾಗಿವೆ. ನಂತರ ಬಂದ ಪ್ರಗತಿಶೀಲ ಸಾಹಿತ್ಯ ನವೋದಯದ ಮಿತಿ ಮತ್ತು ಕೊರತೆಗಳನ್ನು ಗುರುತಿಸಿಕೊಂಡು ಕಥಾ ವಸ್ತುವಿನ ಆಯ್ಕೆಯಲ್ಲಿ ಹೊಸತನ ತಂದಿದೆ” ಎಂದರು.

Advertisements

ಈ ಸುದ್ದಿ ಓದಿದ್ದೀರಾ? ಕೆಪಿಸಿಸಿ ಮಾಧ್ಯಮ ವಕ್ತಾರೆಯಾಗಿ ಯುಟಿ ಫರ್ಝಾನ ನೇಮಕಗೊಳಿಸಿದ ಡಿ ಕೆ ಶಿವಕುಮಾರ್

“ಪಶ್ಚಿಮ ಸಾಹಿತ್ಯದ ಪ್ರೇರಣೆಯಿಂದ ನವ್ಯ ಚಳುವಳಿ ಪ್ರಾರಂಭವಾಯಿತು. ನವ್ಯದ ನಂತರ ಬಂದ ದಲಿತ-ಬಂಡಾಯ ಘಟ್ಟದ ಕತೆಗಾರರು ವರ್ಣ ಮತ್ತು ವರ್ಗ ವ್ಯವಸ್ಥೆಯನ್ನು ವಿರೋಧಿಸುತ್ತ ಶೋಷಣೆಯ ವಿರುದ್ಧ  ಗಟ್ಟಿಯಾದ ಸೈದ್ಧಾಂತಿಕ ತಳಹದಿಯ ಮೇಲೆ ಕತೆಗಳನ್ನು ರಚನೆ ಮಾಡಿದ್ದಾರೆ” ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಸ್ ಎಸ್ ಪಟ್ಟೇದ, “ಕಥೆ ಕೇಳುವುದೆಂದರೆ ಎಲ್ಲರಿಗೂ ಬಹಳ ಇಷ್ಟ, ಕಥೆಯಿಂದ ಮಾನವೀಯ ಮೌಲ್ಯಗಳನ್ನೂ ಜೀವನದಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು. ಇಂದು ಕಥೆ ಬರೆಯುವವರ ಮಾತುಗಳನ್ನು ಹಾಗೂ ಅವರ ಅನುಭವಗಳನ್ನು ಕೇಳೋಣ” ಎಂದರು.

ಕಸಾಪ ತಾಲೂಕ ಅಧ್ಯಕ್ಷ ಅಮರೇಶ ಗಾಣಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, “ತಾಲೂಕು ಘಟಕವು ಕರ್ನಾಟಕ ನಾಮಕರಣ ಸಂಭ್ರಮ ವಿಶೇಷ ಉಪನ್ಯಾಸ ಹಾಗೂ ಸಂವಾದಗಳ ಮೂಲಕ ಆಚರಿಸುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ  ಆಯೋಜಿಲಾಗುವುದು” ಎಂದು ಹೇಳಿದರು.

ಪ್ರೊ ಬಿ ಎ ಕೆಂಚರಡ್ಡಿ, ಗುರುಸಿದ್ದಯ್ಯ ಸೂಗಿರಯ್ಯನಮಠ, ಶರಣಪ್ಪ ರೇವಡಿ, ಪ್ರಭು ಚವಡಿ, ಶಿವಯ್ಯ ಚಕ್ಕಡಿಮಠ, ಪ್ರಾಚಾರ್ಯ ಬಸಯ್ಯ ಹಿರೇಮಠ, ಪ್ರೊ ಬಿ ವಿ ಮುನವಳ್ಳಿ, ಡಾ ಐ ಜೆ ಮ್ಯಾಗೇರಿ ಅಕ್ಕಮಹಾದೇವಿ ನರಗುಂದ, ಬಸಣ್ಣ ಕೊಟಗಿ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X