ಸಾಲದ ಹೊರೆ ತಾಳಲಾಗದೆ ರೈತರೊಬ್ಬರು ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾಲ್ಕಿ ತಾಲೂಕಿನ ಕರಡ್ಯಾಳ ಗ್ರಾಮದಲ್ಲಿ ನಡೆದಿದೆ.
ಕರಡ್ಯಾಳ ಗ್ರಾಮದ ಸಂಗಪ್ಪ ಕಾಶಪ್ಪ ಮೈನಾಳೆ (35) ಎಂಬುವರು ಆತ್ಮಹತ್ಯೆಗೆ ಶರಣಾದ ರೈತ.
ಮೃತ ರೈತ ತಮ್ಮ 30 ಗುಂಟೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಿರ್ವಹಣೆಗಾಗಿ ಕೋನಮೇಳಕುಂದಾ ಪಿಕೆಪಿಎಸ್‌ನಲ್ಲಿ 50 ಸಾವಿರ ಮತ್ತು ಖಾಸಗಿಯಾಗಿ ಸುಮಾರು 7 ಲಕ್ಷ ರೂ. ಸಾಲ ಮಾಡಿದ್ದರು. ಸಕಾಲಕ್ಕೆ ಬೆಳೆ ಬೆಳೆಯಲಾಗದೇ ಸಾಲ ತೀರಿಸುವ ಚಿಂತೆಯಲ್ಲಿ ಮನನೊಂದು ಮನೆಯಲ್ಲಿ ನೇಣು ಬೀಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಮೃತ ರೈತನ ಪತ್ನಿ ಮೀನಾಕ್ಷಿ ಸಂಗಪ್ಪ ಮೈನಾಳೆ ನೀಡಿರುವ ದೂರಿನ ಮೇರೆಗೆ ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.