ಪಾದಚಾರಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಹಾಗೂ ಆಕೆಯ 9 ತಿಂಗಳ ಮಗು ಸಾವನಪ್ಪಿರುವ ಘಟನೆ ಪೂರ್ವ ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿರುವ ಹೋಪ್ ಫಾರ್ಮ್ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು 23 ವರ್ಷದ ಸೌಂದರ್ಯ ಮತ್ತು ಅವರ 9 ತಿಂಗಳ ಪುತ್ರಿ ಸುವೀಕ್ಷಾ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಸೌಂದರ್ಯ ಅವರು ತಮ್ಮ 9 ತಿಂಗಳ ಮಗುವಿನೊಂದಿಗೆ ವೈಟ್‌ಫೀಲ್ಡ್‌ನಲ್ಲಿರುವ ಹೋಪ್ ಫಾರ್ಮ್ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪಾದಚಾರಿ ರಸ್ತೆಯಲ್ಲಿ ವಿದ್ಯುತ್ ಸಂಚಾರವಾಗುತ್ತಿದ್ದ ತಂತಿ ಮೇಲೆ ಕಾಲಿಟ್ಟಿದ್ದಾರೆ. ತಕ್ಷಣ ವಿದ್ಯುತ್ ಸ್ಪರ್ಷವಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
How could a live wire be just hanging?
Thousands of people walk on this footpath next to bus stop. Metro is just a walk away.
This is criminal negligence.
A young lady, whose life has been brutally taken away. A rolling bag with her belongings at the side, standing mute… https://t.co/6aogS0Rinu
— Whitefield Rising (@WFRising) November 19, 2023
ದಾರಿಹೋಕರು ಕೂಡಲೇ ಕಾಡುಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ)ನ ಮೂವರು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ವೈಟ್‌ಫೀಲ್ಡ್) ಡಾ ಶಿವಕುಮಾರ್ ಗುಣಾರೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?
“ವಿದ್ಯುತ್ ಸಂಚಾರವಾಗುತ್ತಿರುವ ತಂತಿ ಕೆಳಗೆ ನೇತಾಡುತ್ತಿತ್ತು? ಬಸ್ ನಿಲ್ದಾಣದ ಪಕ್ಕದಲ್ಲಿರುವ ಈ ಪಾದಚಾರಿ ಮಾರ್ಗದಲ್ಲಿ ಸಾವಿರಾರು ಜನ ಸಂಚರಿಸುತ್ತಾರೆ. ಮೆಟ್ರೋ ನಿಲ್ದಾಣ ಸ್ವಲ್ಪ ದೂರದಲ್ಲಿದೆ. ಇದು ಕ್ರಿಮಿನಲ್ ಮನೋಭಾವದ ನಿರ್ಲಕ್ಷ್ಯ.ಯುವತಿ ಹಾಗೂ ಆಕೆಯ 9 ತಿಂಗಳ ಮಗುವಿನ ಪ್ರಾಣವನ್ನು ಕ್ರೂರವಾಗಿ ತೆಗೆಯಲಾಗಿದೆ” ಎಂದು ವೈಟ್‌ಫೀಲ್ಡ್ ರೈಸಿಂಗ್, ಸಿಟಿಜನ್ ಫೋರಂ ಸಂಘಟನೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.