ನ . 23ರಿಂದ ಭಾರತದಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ 16 ಸದಸ್ಯರ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದ್ದು , ಬಹುತೇಕ ಹೊಸ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ.
ನೂತನ ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕ ಹಾಗೂ ರುತುರಾಜ್ ಗಾಯಕ್ವಾಡ್ ಅವರನ್ನು ಉಪನಾಯಕರಾಗಿ ಆಯ್ಕೆ ಮಾಡಲಾಗಿದೆ. ತಂಡದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ.
🚨 NEWS 🚨#TeamIndia’s squad for @IDFCFIRSTBank T20I series against Australia announced.
Details 🔽 #INDvAUShttps://t.co/2gHMGJvBby
— BCCI (@BCCI) November 20, 2023
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (WK), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಖೇಶ್ ಕುಮಾರ್
ಗಮನಿಸಿ: ಶ್ರೇಯಸ್ ಅಯ್ಯರ್ ಡಿಸೆಂಬರ್ 1ಮತ್ತು 3ರ ರಾಯ್‌ಪುರ ಮತ್ತು ಬೆಂಗಳೂರಿನ ಕೊನೆಯ ಎರಡು ಪಂದ್ಯಗಳಿಗೆ ಉಪನಾಯಕನಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಟಿ20 ಸರಣಿ
1. ನವೆಂಬರ್ 23 – ವಿಶಾಖಪಟ್ಟಣಂ
2. ನವೆಂಬರ್ 26 – ತಿರುವನಂತಪುರಂ
3. ನವೆಂಬರ್ 28 – ಗುವಾಹಟಿ
4. ಡಿಸೆಂಬರ್ 1 – ರಾಯ್‌ಪುರ
5.ಡಿಸೆಂಬರ್ 3- ಬೆಂಗಳೂರು
ಎಲ್ಲ ಪಂದ್ಯಗಳ ಆರಂಭ ಸಂಜೆ 7 ಗಂಟೆ
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ ಕ್ರಿಕೆಟ್ | ದಾಖಲೆಗಳ ಸರದಾರ ಮೊಹಮ್ಮದ್ ಶಮಿಗೊಂದು ಸಲಾಮ್