1990 -2000ರ ದಶಕದಲ್ಲಿ ಅತ್ಯುತ್ತಮ ಕ್ಷೇತ್ರ ರಕ್ಷಣೆ ಮೂಲಕ ವಿಶ್ವ ಕ್ರಿಕೆಟ್ ಪ್ರಿಯರಲ್ಲಿ ಮನೆಮಾತಾಗಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕತೆ ಜಾಂಟಿ ರೋಡ್ಸ್ ಇತ್ತೀಚಿಗೆ ಬೆಂಗಳೂರಿಗೆ ಭೇಟಿ ನೀಡಿದ್ದ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಖಾಸಗಿ ಕಾರ್ಯಕ್ರಮದ ಕಾರಣ ಇತ್ತೀಚೆಗೆ ಕ್ರಿಕೆಟಿಗ ಜಾಂಟಿ ರೋಡ್ಸ್ ಬೆಂಗಳೂರಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ತಾವಿರುವ ಸ್ಥಳಕ್ಕೆ ತೆರಳಲು ಕಾರ್ ಬುಕ್ ಮಾಡಿಕೊಂಡಿದ್ದರು.
ಜಾಂಟಿ ರೋಡ್ಸ್ ಅವರನ್ನು ಕರೆದುಕೊಂಡು ಹೋಗಲು ಕಾರಿನ ಚಾಲಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಸಂಚಾರ ದಟ್ಟಣೆ ಉಂಟಾಗುವ ಕಾರಣದಿಂದ ನಗರದಿಂದ ಬೆಂಗಳೂರು ವಿಮಾನ ನಿಲ್ದಾಣದಿಂದ ನಗರಕ್ಕೆ ತಲುಪಲು ಹೆಚ್ಚು ಸಮಯವಾಗುವ ಕಾರಣ ಹತ್ತಿರದಲ್ಲೇ ರಸ್ತೆಬದಿಯಲ್ಲಿನ ಹೋಟೆಲ್‌ನಲ್ಲಿ ರುಚಿಕರವಾದ ಆಹಾರ ಸವಿದು ನಂತರ ಪ್ರಯಾಣಿಸೋಣ ಎಂದು ಚಾಲಕ ಸಲಹೆ ನೀಡಿದ್ದಾನೆ.
ಚಾಕಲನ ಮಾತಿಗೆ ಸಮ್ಮತಿಸಿದ ಜಾಂಟಿ ರೋಡ್ಸ್ ರಸ್ತೆಬದಿಯಲ್ಲಿರುವ ಹೋಟೆಲ್‌ಗೆ ಚಾಲಕನೊಟ್ಟಿಗೆ ತೆರಳಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಬರೆದುಕೊಂಡಿರುವ ಅವರು, “ಬೆಂಗಳೂರು ವಿಮಾನ ನಿಲ್ದಾಣದಿಂದ ತೆರಳುವಾಗ ಟ್ಯಾಕ್ಸಿ ಚಾಲಕ ತನ್ನ ನೆಚ್ಚಿನ ರೆಸ್ಟೋರೆಂಟ್‌ನಲ್ಲಿ ರಸ್ತೆಬದಿಯಲ್ಲಿ ಆಹಾರ ಸೇವಿಸಲು ನಿಲ್ಲಿಸಲು ಸೂಚಿಸಿದಾಗ, ಕೃತಜ್ಞತೆಯಿಂದ ನಾನು ಅವರ ಸಲಹೆಯನ್ನು ತೆಗೆದುಕೊಂಡೆ. ರುಚಿಕರವಾದ ಮಂಗಳೂರು ಬನ್ಸ್ ಮತ್ತು ಮೈಸೂರು ಮಸಾಲೆ ದೋಸೆ, ಮಸಾಲಾಚಾಯ್‌ನೊಂದಿಗೆ ಮುಗಿದಿದೆ. ಲವ್ ಇಂಡಿಯಾ,” ಎಂದು ಬರೆದಿದ್ದಾರೆ. ಜೊತೆಗೆ ಹೋಟೆಲ್ ಸಿಬ್ಬಂದಿ ಜೊತೆ ಭಾವಚಿತ್ರ ಹಂಚಿಕೊಂಡಿರುವ ಅವರು, ಅತ್ಯುತ್ತಮ ಸಿಬ್ಬಂದಿ ಎಂದು ಹೊಗಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಚಿನ್ ರವೀಂದ್ರ ರೀತಿ ಶ್ರೇಯಸ್ ಅಯ್ಯರ್‌ಗೂ ಕೂಡ ಇದೆ ಕರ್ನಾಟಕದ ನಂಟು
ಜಾಂಟಿ ಪ್ರಕಟಿಸಿರುವ ಪೋಸ್ಟ್ ಇದುವರೆಗೂ 5.26 ಲಕ್ಷ ವೀಕ್ಷಣೆಗಳನ್ನು ಕಂಡಿದೆ. 11 ಸಾವಿರ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಫೀಲ್ಡಿಂಗ್‌ನ ಅರ್ಥವನ್ನು ಮರು ವ್ಯಾಖ್ಯಾನಿಸಿದ ಅತ್ಯಂತ ಅಪ್ರತಿಮ ಆಟಗಾರರಲ್ಲಿ ನೀವು ಒಬ್ಬರು! ನೀವು ಉತ್ತಮ ಮೆನುವನ್ನು “ಕ್ಯಾಚಿಂಗ್” ಮಾಡುವುದನ್ನು ನೋಡಲು ಈಗ ಸಂತೋಷವಾಗಿದೆ!” ಎಂದು ಅಭಿಮಾನಿಯೊಬ್ಬರು ಟ್ವೀಟ್ ಮೂಲಕ ಬಣ್ಣಿಸಿದ್ದಾರೆ.
“ಜಾಂಟಿ ಅವರು ಭಾರತದ ಫೀಲ್ಡಿಂಗ್ ಕೋಚ್ ಆಗಿರಬೇಕು. ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟಗಾರರಿಗೆ ಕ್ಷೇತ್ರ ರಕ್ಷಣೆ ಕೆಲಸ ಕಷ್ಟದ ಕೆಲಸವಾಗಿದೆ. ಆದರೆ, ಭಾರತವು ಈ ವಿಭಾಗದಲ್ಲಿ ಸುಧಾರಿಸಬೇಕಾಗಿದೆ” ಎಂದು ಮತ್ತೊಬ್ಬರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಜಾಂಟಿ ರೋಡ್ಸ್ ಅವರು ಸದ್ಯ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೇ ಇದ್ದಾರೆ.
When taxi driver at Bengaluru airport suggested to stop at his favourite restaurant for a roadside bite, because according to him: "traffic will be standing!" Grateful I took his advice. Excellent #mangalorebun and #Mysoremasaldosa, finished off with #masalachai #loveIndia pic.twitter.com/tH3KjykLUI
— Jonty Rhodes (@JontyRhodes8) November 21, 2023