ನಿಗಮ-ಮಂಡಳಿ ನೇಮಕ | ಸಿಎಂ-ಡಿಸಿಎಂ ನಡುವೆ ಮೂಡದ ಒಮ್ಮತ; ನ.28ಕ್ಕೆ ಮತ್ತೆ ಸುರ್ಜೇವಾಲ ಸಭೆ

Date:

Advertisements
  • ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವೆ ಒಮ್ಮತ ಮೂಡಿಲ್ಲ
  • ಶಾರ್ಟ್ ಲಿಸ್ಟ್ ಸಮೇತ ತೆರಳಿರುವ ರಣದೀಪ್‌ ಸಿಂಗ್ ಸುರ್ಜೆವಾಲ 

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲ ನೇತೃತ್ವದಲ್ಲಿ ಮಂಗಳವಾರ (ನ.22) ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಚಾರವಾಗಿ ಸಭೆ ನಡೆದಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವೆ ಒಮ್ಮತ ಮೂಡಿಲ್ಲ ಎಂದು ತಿಳಿದುಬಂದಿದೆ.

ತಡರಾತ್ರಿವರೆಗೂ ನಡೆದ ಸಭೆ ಅಪೂರ್ಣಗೊಂಡಿದೆ. ನಿಗಮ ಮಂಡಳಿಗಳ ನೇಮಕ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಅವರು ತಮ್ಮ ಪರವಾಗಿರುವ ನಾಯಕರಿಗೆ ಕೊಡಿಸಲು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ರಣದೀಪ​ ಸುರ್ಜೆವಾಲ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ನವೆಂಬರ್​ 28ರಂದು ಮತ್ತೆ ರಾಜ್ಯಕ್ಕೆ ಸುರ್ಜೇವಾಲ ಆಗಮಿಸಲಿದ್ದಾರೆ. ಇನ್ನು ಮಂಗಳವಾರ ನಡೆದ ಸಭೆಯಲ್ಲಿ ಹಲವು ನಾಯಕರ ಹೆಸರು ಪ್ರಸ್ತಾಪವಾಗಿದ್ದು, ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಪಟ್ಟಿ ಸಮೇತ ತೆರಳಿರುವ ಸುರ್ಜೆವಾಲ ಎಐಸಿಸಿ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ನಂತರ ರಾಜ್ಯಕ್ಕೆ ಆಗಮಿಸಿ ಅಂತಿಮ ತೀರ್ಮಾನ ಮಾಡುವ ಸಾಧ್ಯತೆ ಇದೆ.

Advertisements

ಆದಷ್ಟು ಬೇಗ ನೇಮಕ: ಡಿಕೆಶಿ

ಸಭೆಯ ಬಳಿಕ ಡಿಕೆ ಶಿವಕುಮಾರ್‌ ಸುದ್ದಿಗಾರರ ಜೊತೆ ಮಾತನಾಡಿ, “ನಾವು ಲೋಕಸಭಾ ಚುನಾವಣೆಗೆ ಹೋಗಬೇಕು. ಹೀಗಾಗಿ ಸೂಕ್ತ ನಾಯಕರಿಗೆ ನಿಗಮ ಮಂಡಳಿ ಸ್ಥಾನ ಸಿಗಬೇಕಿದೆ. ನಮ್ಮ ನಾಯಕರ ನಡುವೆ ಚರ್ಚೆ ನಡೆದಿದ್ದು, ಆದಷ್ಟು ಬೇಗ ನೇಮಕವಾಗಲಿದೆ” ಎಂದು ತಿಳಿಸಿದರು.

ಡಾ. ಜಿ ಪರಮೇಶ್ವರ್‌ ಮುನಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ನಮ್ಮಲ್ಲಿ ಯಾವುದೇ ನಾಯಕರು ಮುನಿಸಿಕೊಂಡಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ನಾವೆಲ್ಲ ಒಗ್ಗಟ್ಟಾಗಿಯೇ ಇದ್ದೇವೆ” ಎಂದು ಹೇಳಿದರು.

ಸರ್ಕಾರದ ಅಧೀನದಲ್ಲಿ ಒಟ್ಟಾರೆ 85 ನಿಗಮಗಳಿದ್ದು, ಅಲ್ಲಿಗೆ ನೇಮಕ ಮಾಡುವ ಪೂರ್ಣ ಅಧಿಕಾರ ಸರ್ಕಾರಕ್ಕಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಧಿಕಾರದ ಸರದಿ ಬಂದಾಗ ನೇಮಕಗಳನ್ನು ಮಾಡುತ್ತವೆ.

ಸಂಭಾವ್ಯರ ಪಟ್ಟಿ ಹೀಗಿದೆ

ಶಿವಲಿಂಗೇಗೌಡ
ಬಿ.ಕೆ ಸಂಗಮೇಶ್
ಬಂಗಾರಪೇಟೆ ನಾರಾಯಣಸ್ವಾಮಿ
ಕೆ.ವೈ ನಂಜೇಗೌಡ
ಬಿ.ಆರ್ ಪಾಟೀಲ್
ಪಿ.ಎಂ ನರೇಂದ್ರ ಸ್ವಾಮಿ
ರಮೇಶ್ ಬಾಬು ಬಂಡಿಸಿದ್ದೇಗೌಡ
ಅನಿಲ್ ಚಿಕ್ಕಮಾದು
ಟಿ.ಡಿ ರಾಜೇಗೌಡ
ರಘುಮೂರ್ತಿ
ಭೀಮಣ್ಣ ನಾಯ್ಕ್
ಸತೀಶ್ ಸೈಲ್
ಪ್ರಸಾದ್ ಅಬ್ಬಯ್ಯ
ಜಿ.ಟಿ ಪಾಟೀಲ್
ಡಿ.ಆರ್ ಪಾಟೀಲ್
ಗಣೇಶ್ ಹುಕ್ಕೇರಿ
ಮಹಾಂತೇಶ್ ಕೌಜಲಗಿ
ಯಶವಂತ್ ರಾಯ್ ಗೌಡ ಪಾಟೀಲ್
ಬಿ.ಜಿ ಗೋವಿಂದಪ್ಪ
ರಾಘವೇಂದ್ರ ಹಿಟ್ನಾಳ್
ಬಸನಗೌಡ ತುರುವಿಹಾಳ್

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X