ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಆಸ್ತಿಯನ್ನು ಜಪ್ತಿ ಮಾಡಿದ್ದ ಜಾರಿ ನಿರ್ದೇಶನಾಲಯದ ಕ್ರಮವನ್ನು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಖಂಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಾರಿ ನಿರ್ದೇಶನಾಲಯದ ನಡೆ ಕೇಂದ್ರ ಸರ್ಕಾರದ ಕೃಪಾ ಪೋಷಿತ ಕೀಳು ಮಟ್ಟದ ರಾಜಕೀಯ ನಡೆಯಾಗಿದೆ. ತನಿಖಾ ಸಂಸ್ಥೆಯು ಕೇಂದ್ರದ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಸಿಬಲ್ ಆರೋಪಿಸಿದ್ದಾರೆ.
“ಅಜ್ಞಾನವೇ ಆನಂದವಾಗಿರುವಾಗ, ಬುದ್ಧಿವಂತರಾಗಿರುವುದು ಮೂರ್ಖತನ. ಇಡಿ ಕಾನೂನಿನ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ನಾನು ಭಾವಿಸುತ್ತೇನೆ. ಷೇರುದಾರರು ಷೇರುದಾರಾಗಿದ್ದರೆ, ಆಸ್ತಿಯು ಕಂಪನಿಯ ಮಾಲೀಕತ್ವದಲ್ಲಿದೆ. ಕಂಪನಿಯು ದಿವಾಳಿಯಾದರೆ ಷೇರುದಾರರಿಗೆ ಏನೂ ಸಿಗುವುದಿಲ್ಲ. ಹಾಗಾದರೆ ಯಾರು ಯಾರಿಗೆ ಮೋಸ ಮಾಡಿದರು? ಎಲ್ಲಿ ನಂಬಿಕೆಯ ಉಲ್ಲಂಘನೆ? ಯಾರು ಪಿತೂರಿ ಮಾಡಿದ್ದಾರೆ? ಇಡಿಗೂ, ನ್ಯಾಯಾಲಯಗಳಿಗೂ ಕಾನೂನು ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನಾನು ಈ ಘಟನೆಯಿಂದ ಸ್ವಲ್ಪ ದಿಗ್ಭ್ರಮೆಗೊಂಡಿದ್ದೇನೆ,” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಗೆ ಮತ ನೀಡದವರಿಗೆ ಕುಡಿಯುವ ನೀರು ನಿರಾಕರಣೆ!
“ಆದರೆ ಇಂದು ದೇಶದಲ್ಲಿ ಏನಾಗಿದೆ ಎಂದರೆ ಇಡಿ ಕೇಂದ್ರದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದೆ. ಹೆಚ್ಚು ಮುಖ್ಯವಾದ ಇನ್ನೊಂದು ವಿಷಯವೆಂದರೆ ನ್ಯಾಷನಲ್ ಹೆರಾಲ್ಡ್ ಸೆಕ್ಷನ್ 25ರ ಕಂಪನಿಯಾಗಿದೆ. ಅದು ಲಾಭದ ಕಂಪನಿಯಲ್ಲ. ಎಜಿಎಲ್ ಸಂಸ್ಥೆಯನ್ನು ಸ್ಥಗಿತಗೊಳಿಸಿದರೆ, ಅದು ಮತ್ತೊಂದು ಲಾಭರಹಿತ ಕಂಪನಿಗೆ ಸೇರ್ಪಡೆಯಾಗುತ್ತದೆ. ಯಂಗ್ ಇಂಡಿಯಾ ಮತ್ತೊಂದು ಲಾಭರಹಿತ ಸಂಸ್ಥೆಯಾಗಿದೆ” ಎಂದು ಹೇಳಿದರು.
“ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲಿನ ಮುನ್ಸೂಚನೆ ಗೋಚರಿಸಿದೆ. ಡಿಸೆಂಬರ್ 3 ರ ಫಲಿತಾಂಶ ಹೊರಬೀಳಲಿದ್ದು, ಜನರ ಗಮನವನ್ನು ಬೇರೆಡೆ ಸೆಳೆಯುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ” ಎಂದು ಸಿಬಲ್ ತಿಳಿಸಿದರು.
ಯುಪಿಎ 1 ಮತ್ತು 2ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಕಪಿಲ್ ಸಿಬಲ್, ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾದರು.
ಇಡಿ ಕ್ರಮವನ್ನು “ಸೇಡು ತೀರಿಸಿಕೊಳ್ಳುವ ತಂತ್ರ” ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಈ ಸಂಸ್ಥೆಯು ಬಿಜೆಪಿಯ ‘ಸಮ್ಮಿಶ್ರ ಪಾಲುದಾರ’ನಾಗಿದ್ದು, ಚುನಾವಣೆಗಳಲ್ಲಿ ಸೋಲುವ ಭೀತಿಯಿಂದ ಈ ರೀತಿ ಮಾಡಲಾಗುತ್ತಿದೆ” ಎಂದು ತಿಳಿಸಿದೆ.
Young Indian(YI)
Associated Journals Ltd(AJL)ED attaches 752cr worth properties of AJL
Allege :
YI shareholders owners of AJL’s assets
Cheating & Breach of trustLaw:
Shareholders are never owners of company’s assets
YI a not for profit companyA new low in politics
— Kapil Sibal (@KapilSibal) November 22, 2023