ಜಾನುವಾರು ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ ಮಾಡಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬಳ್ಳೂರ್ ಹುಂಡಿ ಗ್ರಾಮದ ರತ್ನಮ್ಮ (55) ಮೃತ ದುರ್ದೈವಿ. ರತ್ನಮ್ಮ ಅವರು ಶುಕ್ರವಾರ ಜಾನುವಾರು ಮೇಯಿಸಲು ತೆರಳಿದ್ದರು. ಮಧ್ಯಾಹ್ನ ಆಕೆಯ ಮೇಲೆ ಹುಲಿ ದಾಳಿ ಮಾಡಿದೆ. ಆಕೆಯ ಎಡಭಾಗದ ದೇಹವನ್ನನು ತಿಂದಿದೆ. ಘಟನೆಯಿಂದಾಗಿ ಕಾಡಂಚಿನ ಗ್ರಾಮಗಳಲ್ಲಿ ಆತಂಕ ವ್ಯಾಪಸಿಸಿದೆ.
ಇತ್ತೀಚೆಗಷ್ಟೇ ತಾಲೂಕಿನ ಜೇನುಕಟ್ಟೆ ಗ್ರಾಮದಲ್ಲಿ ಹಸು ಮೇಲೆ ಹುಲಿ ದಾಳಿ ಮಾಡಿತ್ತು. ಆಗಲೇ ಹುಲಿ ಹಾವಳಿಯನ್ನು ತಡೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಇದೀಗ, ಮಹಿಳೆ ಹುಲಿ ದಾಳಿಗೆ ಬಲಿಯಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.