ಏನಿದೆ ಪುರಾವೆ?: ಹಿಂಡನ್‌ಬರ್ಗ್ ಪ್ರಕರಣದಲ್ಲಿ ಸುಪ್ರೀಂ ಕಠಿಣ ಪ್ರಶ್ನೆ

Date:

ಅದಾನಿ ಸಮೂಹವನ್ನು ಗುರಿಯಾಗಿಸಿಕೊಂಡು ಜಾರ್ಜ್ ಸೊರೊಸ್ ಬೆಂಬಲಿತ ಸಮೂಹ ಯೋಜನೆ ವರದಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಅರ್ಜಿದಾರರ ವಿರುದ್ಧ ಕಠಿಣ ಪ್ರಶ್ನೆಗಳನ್ನು ಕೇಳಿದೆ.

“ನಾವು ವಿದೇಶಿ ವರದಿಗಳನ್ನು ಏಕೆ ಸತ್ಯವೆಂದು ತೆಗೆದುಕೊಳ್ಳಬೇಕು? ನಾವು ವರದಿಯನ್ನು ತಿರಸ್ಕರಿಸುತ್ತಿಲ್ಲ, ಆದರೆ ನಮಗೆ ಪುರಾವೆ ಬೇಕು. ಹಾಗಾದರೆ ಅದಾನಿ ಸಮೂಹದ ವಿರುದ್ಧ ನಿಮ್ಮ ಬಳಿ ಏನು ಪುರಾವೆ ಇದೆ?” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದರು.

ಜಾರ್ಜ್ ಸೊರೊಸ್ ಹಾಗೂ ರಾಕೆಟ್ ಫೆಲ್ಲರ್ ಬ್ರದರ್ಸ್ ಫಂಡ್ ಅನುದಾನಿತ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ(ಒಸಿಸಿಆರ್ ಪಿ)ಯು ಇಬ್ಬರು ವಿದೇಶಿ ಹೂಡಿಕೆದಾರರ ಮೂಲಕ ಅದಾನಿ ಸಮೂಹ ಆಂತರಿಕ ವಹಿವಾಟು ಮಾಡುತ್ತಿದೆ ಎಂದು ಆರೋಪಿಸಿದೆ. ಈ ಆರೋಪವನ್ನು ಅದಾನಿ ಸಮೂಹ ಯಾವುದೇ ಆಧಾರವಿಲ್ಲ ಎಂದು ಅಲ್ಲಗಳೆದಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಡ್ರಗ್ಸ್ ಖರೀದಿಸಲು ಹೆತ್ತ ಮಕ್ಕಳನ್ನೆ ಮಾರಾಟ ಮಾಡಿದ ದಂಪತಿ

“ನಾವು ಅಂತಹ ವರದಿಗಳ ಮೇಲೆ ಕ್ರಮ ಕೈಗೊಂಡರೆ ನಮ್ಮ ಏಜೆನ್ಸಿಗಳು ಏನು ಮಾಡುತ್ತವೆ? ವಿದೇಶಿ ವರದಿಗಳಿಂದ ಭಾರತೀಯ ನೀತಿಗಳ ಮೇಲೆ ಪ್ರಭಾವ ಬೀರುವ ಹೊಸ ಪ್ರವೃತ್ತಿ ಇದಾಗಿದೆ” ಎಂದು ಭಾರತೀಯ ಷೇರುಪೇಟೆಯ ನಿಯಂತ್ರಣ ಪ್ರಾಧಿಕಾರ (ಸೆಬಿ) ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಅದಾನಿ ಹಗರಣವು ಭಾರತದ ಒಕ್ಕೂಟ ಸರ್ಕಾರದಲ್ಲಿ ಮೋದಿ ಹಿಡಿತವನ್ನು ದುರ್ಬಲಗೊಳಿಸಲಿದೆ ಮತ್ತು ಬಹು ಅಪೇಕ್ಷಿತ ಸಾಂಸ್ಥಿಕ ಸುಧಾರಣೆಗೆ ಕಾರಣವಾಗಲಿದೆ. ಅದಾನಿಯ ಅವರ ವ್ಯವಹಾರದ ತೊಂದರೆಗಳಿಂದ ಪ್ರಧಾನಿ ಮೋದಿ ದುರ್ಬಲರಾಗುತ್ತಾರೆ ಎಂದು ಅಮೆರಿಕಾದ ಕೋಟ್ಯಾಧಿಪತಿ 92 ವರ್ಷದ ಜಾರ್ಜ್ ಸೊರೊಸ್ ಈ ವರ್ಷದ ಫೆಬ್ರವರಿಯಲ್ಲಿ ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಹೇಳಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಎಪಿ ಜೊತೆ ಮೈತ್ರಿಗೆ ವಿರೋಧ : ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ

ಆಮ್‌ ಆದ್ಮಿ ಪಕ್ಷದೊಂದಿಗಿನ ಮೈತ್ರಿ ವಿರೋಧಿಸಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ...

ಖಾಸಗಿ ಸಂಪತ್ತಿನ ಬಗ್ಗೆ ರಾಹುಲ್ ಮಾತನಾಡಿಲ್ಲ; ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ: ಸಿಎಂ ರೇವಂತ್ ರೆಡ್ಡಿ

ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿ, ಅಧಿಕಾರ ಹಿಡಿದ ಕೆಲ ತಿಂಗಳುಗಳಲ್ಲೇ...

ಉದ್ಧವ್‌, ಶರದ್ ಪರವಾಗಿ ಅನುಕಂಪದ ಅಲೆಯಿದೆ ಎಂದ ಅಜಿತ್ ಪವಾರ್ ಬಣದ ನಾಯಕ!

"ರಾಜ್ಯದಲ್ಲಿ (ಮಹಾರಾಷ್ಟ್ರ) ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಪರವಾಗಿ ಅನುಕಂಪದ...

ಹಾಸನ ಪೆನ್‌ಡ್ರೈವ್‌ | ಪ್ರಜ್ವಲ್ ರೇವಣ್ಣ ದೇಶಬಿಟ್ಟು ಓಡಿ ಹೋಗಲು ಮೋದಿ ಸಹಾಯ ಮಾಡಿದರಾ?; ರಾಷ್ಟ್ರಮಟ್ಟದಲ್ಲಿ ಆಕ್ರೋಶ

ಹಾಸನ ಪೆನ್‌ಡ್ರೈವ್‌ ಪ್ರಕರಣವು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆಗೆ...