ರಾಜ್ಯ ರಾಜಧಾನಿ ಬೆಂಗಳೂರಿನ ಸೌತ್ ಎಂಡ್ ಸರ್ಕಲ್‌ನಲ್ಲಿರುವ ಡಿಸಿಪಿ ಕಚೇರಿ ಎದುರಿನ ರಸ್ತೆಯಲ್ಲಿ ಯುವತಿ ಬಟ್ಟೆಯನ್ನು ಎಳೆದಾಡಿ ಅಶ್ಲೀಲ್‌ವಾಗಿ ನಿಂದಿಸಿದ ಕಿಡಿಗೇಡಿಯನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹರೀಶ್ (22) ಬಂಧಿತ ಆರೋಪಿ. ಈತನು ಬಿನ್ನಿಪೇಟೆ ನಿವಾಸಿ. 500 ಸಿಸಿಟಿವಿ ದೃಶ್ಯಗಳ ಪರಿಶೀಲನೆಯ ಬಳಿಕ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಏನಿದು ಘಟನೆ?
ನವೆಂಬರ್ 6ರಂದು 10.40ರ ಸುಮಾರಿಗೆ 26 ವರ್ಷದ ಯುವತಿಯೊಬ್ಬರು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ, ಕಿಡಿಗೇಡಿ ಯುವಕ ಬೈಕ್ನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಯುವತಿ ಸೌತ್ ಎಂಡ್ ಸರ್ಕಲ್‌ನಲ್ಲಿರುವ ಡಿಸಿಪಿ ಕಚೇರಿ ಎದುರು ಬರುತ್ತಿದ್ದಂತೆ, ಯುವಕ ರಸ್ತೆಯಲ್ಲಿ ಆಕೆಯ ಬಟ್ಟೆಯನ್ನು ಎಳೆದಾಡಿ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಇನ್ನುಮುಂದೆ ‘ನಮ್ಮ ಮೆಟ್ರೋ’ದಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್
ಸ್ವಲ್ಪ ಸಮಯದ ಬಳಿಕ ಬೈಕ್ ಯೂಟರ್ನ್ ತೆಗೆದುಕೊಂಡು ಗಾಡಿಯ ಸಮೇತ ಪರಾರಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಯುವತಿ ನವೆಂಬರ್ 8ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.