ಬೆಂಗಳೂರು | ಇನ್ನುಮುಂದೆ ‘ನಮ್ಮ ಮೆಟ್ರೋ’ದಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್

Date:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ‘ನಮ್ಮ ಮೆಟ್ರೋ’ದಲ್ಲಿ ಇನ್ನುಮುಂದೆ ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗುವುದು ಎಂದು ನಿಗಮ ತಿಳಿಸಿದೆ.

- Advertisement -

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇಷ್ಟುದಿನ ಮೆಟ್ರೋ ಆವರಣದಲ್ಲಿ ಕ್ಯಾಮರಾ ಬಳಕೆ, ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಅನುಮತಿಗಾಗಿ ಸಿನಿಮಾ, ಧಾರಾವಾಹಿ ನಿರ್ಮಾಪಕರು ಕಾಯಬೇಕಿತ್ತು. ಆದರೆ, ಇದೀಗ ಬಿಎಂಆರ್‌ಸಿಎಲ್‌ ಶೂಟಿಂಗ್ ನಡೆಸಲು ಅನುಮತಿ ನೀಡಿದ್ದು, ಇನ್ನುಮುಂದೆ ಮೆಟ್ರೋ ನಿಲ್ದಾಣಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಸಿನಿತಾರೆಯರು ಕಾಣಸಿಗುವ ಸಾಧ್ಯತೆಯಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಷೇರುದಾರರ ಇಂದಿನ ಜಾಗತಿಕ ಮಂತ್ರ- ‘ಅಮೆರಿಕವನ್ನು ನಂಬಿ ಹಣ...

ಅಮೆರಿಕನ್ನರು ಮಾತ್ರವಲ್ಲ, ವಿದೇಶಗಳ ಸಾಮಾನ್ಯ ಜನರೂ ಮುಗಿಬಿದ್ದು ಅಮೆರಿಕದ ಷೇರುಗಳನ್ನು ಕೊಳ್ಳುತ್ತಿದ್ದಾರೆ. ಅಮೆರಿಕದ ರಾಜಕೀಯ ನಾಯಕತ್ವದ ಬಗ್ಗೆ ಅವರಿಗೆ ಅಸಮಾಧಾನವಿದ್ದಿರಬಹುದು. ಆದರೆ ಅಮೆರಿಕನ್ ಕಂಪನಿಗಳ ಷೇರುಗಳ ಮೇಲೆ ಮಾತ್ರ ಅವರೆಲ್ಲರಿಗೂ ವಿಪರೀತ ವ್ಯಾಮೋಹ...

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ದಿನಕ್ಕೆ ನಮ್ಮ ಮೆಟ್ರೋದಲ್ಲಿ 7 ಲಕ್ಷ ಜನ ಪ್ರಯಾಣಿಸುತ್ತಾರೆ. ಮೆಟ್ರೋ ನಿಲ್ದಾಣದಲ್ಲಿ ಸಿನಿಮಾ-ಧಾರಾವಾಹಿ ಚಿತ್ರೀಕರಣ ನಡೆಯುವುದರಿಂದ ಜನರು ನೇರವಾಗಿ ಚಿತ್ರೀಕರಣ ಯಾವ ರೀತಿ ನಡೆಯುತ್ತದೆ ಎಂಬುದನ್ನು ಕಾಣಬಹುದು.

ಈಗಾಗಲೇ ಚೆನ್ನೈ, ದೆಹಲಿ ಮೆಟ್ರೋ ಆವರಣದಲ್ಲಿ ಶೂಟಿಂಗ್‌ಗೆ ಅವಕಾಶ ನೀಡಲಾಗಿದೆ. ಅದರಂತೆ, ಬೆಂಗಳೂರು ಮೆಟ್ರೋ ಕೂಡ ಇದೀಗ ಅನುಮತಿ ನೀಡಿದೆ. ಕೆಲವು ಮಾರ್ಗಸೂಚಿಗಳನ್ನು ನೀಡಿದೆ.

  • ಶೂಟಿಂಗ್‌ ಸ್ಕ್ರಿಪ್ಟ್‌ನ್ನು ಸಲ್ಲಿಸುವುದು ಕಡ್ಡಾಯ, ಪೀಕ್‌ ಸಮಯದಲ್ಲಿ ಚಿತ್ರೀಕರಣ ಮಾಡುವಂತಿಲ್ಲ.
  • ಚಿತ್ರೀಕರಣದ ವೇಳೆ ಮೆಟ್ರೋ ಬಾಗಿಲು ತೆರೆಯಲು ಅನುಮತಿ ಇಲ್ಲ, ಅನುಮತಿ ನೀಡುವ ಸ್ಥಳದಲ್ಲಿ ಮಾತ್ರ ಚಿತ್ರೀಕರಣ ನಡೆಸಬಹುದು. ಶೂಟಿಂಗ್‌ ಸಮಯದಲ್ಲಿ ಮೆಟ್ರೋ ಸಿಬ್ಬಂದಿ ಹಾಜರಿರುತ್ತಾರೆ.
  • ಮೆಟ್ರೋಗೆ ಹಾನಿಯಾದರೆ, ಅಥವಾ ಅವಘಡ ನಡೆದರೆ ಅದಕ್ಕೆ ಚಿತ್ರತಂಡವೇ ಸಂಪೂರ್ಣ ಜವಾಬ್ದಾರಿ, ಚಿತ್ರೀಕರಣದ ತಂಡದಲ್ಲಿರುವ ಮಹಿಳೆಯರ ಸುರಕ್ಷತೆ ಜವಾಬ್ದಾರಿಯೂ ಚಿತ್ರತಂಡದ್ದೇ, ಸೂಕ್ತ ಭದ್ರತೆಗೆ ಹೆಚ್ಚುವರಿ ಸಿಬ್ಬಂದಿ, ಪೊಲಿಸ್‌ ಗೃಹ ರಕ್ಷಕ ಸಿಬ್ಬಂದಿ ನಿಯೋಜನೆಗೆ ಸೂಚನೆ.
  • ರೈಲಿನಲ್ಲಿ ಚಿತ್ರೀಕರಣಕ್ಕೆ ದಿನಕ್ಕೆ ₹6 ಲಕ್ಷ ಶುಲ್ಕ ನಿಗದಿಪಡಿಸಲಾಗಿದ್ದು, ಕನ್ನಡ ಚಿತ್ರಗಳಿಗೆ 25% ರಿಯಾಯಿತಿ ಸಿಗಲಿದೆ.
  • ಮೆಟ್ರೋ ನಿಲ್ದಾಣದಲ್ಲಿ ಅಥವಾ ರೈಲಿನ ಮೇಲೆ ಡ್ರೋನ್‌ ಕ್ಯಾಮೆರಾ ಬಳಸಿ ಚಿತ್ರೀಕರಣ ನಡೆಸಬೇಕಾದರೆ ವಿಶೇಷ ಅನುಮತಿ ಪಡೆಯಬೇಕು, ಇಂತಹ ಶೂಟಿಂಗ್‌ಗೆ 25% ಅಧಿಕ ಶುಲ್ಕ ಪಾವತಿಸಬೇಕು.
  • ಮೆಟ್ರೋ ಆವರಣದಲ್ಲಿ ಸಾಕು ಪ್ರಾಣಿಗಳನ್ನು ಶೂಟಿಂಗ್‌ಗೆ ಬಳಸುವುದು, ಡ್ರೈವರ್‌ ಕ್ಯಾಬಿನ್‌ನಲ್ಲಿ ಚಿತ್ರೀಕರಣ ನಿಷೇಧಿಸಲಾಗಿದೆ.
  • ಮೆಟ್ರೋ ಆವರಣದಲ್ಲಿ ಚಿತ್ರೀಕರಣ ಮಾಡಲಾದರೆ, ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಸ್ಕ್ರಿಪ್ಟ್ ತೋರಿಸಿ  ನಿರಪೇಕ್ಷಣಾ ಪತ್ರ ಪಡೆಯಬೇಕು.
  • ಚಿತ್ರೀಕರಣದ ಸಂದರ್ಭದಲ್ಲಿ ಆದಷ್ಟು ಕಡಿಮೆ ಹಾಗೂ ಅಗತ್ಯವಿರುವ ಸಿಬ್ಬಂದಿ ಮಾತ್ರ ಇರಬೇಕು, ಪ್ರಯಾಣಿಕರಿಗೆ ಸಮಸ್ಯೆ ಆಗದ ರೀತಿ ಚಿತ್ರೀಕರಣ ನಡೆಯಬೇಕು.
  • ಚಿತ್ರೀಕರಣಕ್ಕೆ 30 ದಿನ ಇರುವಾಗಲೇ ಸಿನಿಮಾ ಅಥವಾ ಸೀರಿಯಲ್‌ ಸ್ಕ್ರಿಪ್ಟ್ ಜತೆಗೆ ಶೂಟ್ ಮಾಡುವ ಮುನ್ನ ಅಪ್ಲಿಕೇಶನ್ ಹಾಕುವುದು ಕಡ್ಡಾಯ.
  • ಯಾವ ಡೇಟ್ ನಲ್ಲಿ ಶೂಟಿಂಗ್ ಮಾಡುತ್ತೇವೆ. ಯಾವ ಲೊಕೇಶನ್ ನಲ್ಲಿ ಮಾಡ್ತೇವೆ ಅಂತ ಉಲ್ಲೇಖ ಮಾಡಬೇಕು.
  • ಲಾ ಅಂಡ್ ಅರ್ಡರ್ ಸಮಸ್ಯೆ ಆಗುವ, ಸಮಾಜಕ್ಕೆ ಹಾನಿ ಉಂಟಾಗುವ, ಜನರ ಭಾವನೆಗೆ ಧಕ್ಕೆ ಉಂಟಾಗುವ ಯಾವುದೇ ಸಿನಿಮಾ ಅಥವಾ ಸೀರಿಯಲ್‌ ಶೂಟಿಂಗ್‌ಗೆ ನಿರ್ಬಂಧ ಹೇರಿದೆ.

ಈ ಸುದ್ದಿ ಓದಿದ್ದೀರಾ? ‘ಬೆಂಗಳೂರು ಕಂಬಳ’ಕ್ಕೆ ಚಾಲನೆ ನೀಡಲಿದ್ದಾರೆ ಅಶ್ವಿನಿ ಪುನೀತ್​ ರಾಜ್‌ಕುಮಾರ್

ಇದು ತುಂಬಾ ಒಳ್ಳೆಯ ವಿಚಾರ ಕನ್ನಡ ಚಲನಚಿತ್ರರಂಗ ಇದನ್ನು ಸ್ವಾಗತಿಸುತ್ತದೆ. ಕನ್ನಡಿಗರಿಗೆ 25% ರಿಯಾಯಿತಿ ನೀಡಿರುವುದು ಸಂತಸದ ವಿಷಯ. ಇದರಿಂದ ನಮ್ಮ ಕನ್ನಡ ಚಿತ್ರರಂಗ ಬೆಳೆಯುತ್ತದೆ. ಬೇರೆಬೇರೆ ಭಾಷೆಯ ಚಲನಚಿತ್ರಗಳು ನಮ್ಮ ರಾಜ್ಯದಲ್ಲಿ ‌ಚಿತ್ರೀಕರಣ ಆಗುತ್ತದೆ. ಬೆಂಗಳೂರಿನ ಮೆಟ್ರೋಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿದ್ದು ಸಂತಸದ ವಿಷಯ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮೀಳಾ ಜೋಷಾಯ್ ಹೇಳಿದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಒಕ್ಕಲಿಗ ಸಂಘದಲ್ಲಿ ಬದಲಾವಣೆ ಆಗಬೇಕಿದೆ, ಆಡಳಿತದಲ್ಲಿ ಪಾರದರ್ಶಕತೆ ಬೇಕಿದೆ: ಹರೀಶ್‌ ರೆಡ್ಡಿ ಆರೋಪ

ಜಿಲ್ಲೆಯ ಹೆಮ್ಮೆಯಾದ ಚಿಕ್ಕಬಳಾಪುರ ತಾಲೂಕು ಒಕ್ಕಲಿಗರ ಸಂಘವು ಕೆಲವೇ ಬಲಾಢ್ಯರ ಕಪಿಮುಷ್ಟಿಗೆ...

ಉಡುಪಿ | ಕಿನ್ನಿಮೂಲ್ಕಿಯಲ್ಲಿ ಮಾನಸಿಕ ಅಸ್ವಸ್ಥ ಯುವಕನಿಂದ ತಡರಾತ್ರಿ ದಾಂಧಲೆ: ಸ್ಥಳೀಯರಲ್ಲಿ ಆತಂಕ

ಮಾನಸಿಕ ಅಸ್ವಸ್ಥ ಯುವಕನೊಬ್ಬ ತಡರಾತ್ರಿ ಉಗ್ರವಾಗಿ ವರ್ತಿಸಿ ದಾಂಧಲೆ ನಡೆಸಿದ ಪರಿಣಾಮ...

‘ಕನ್ನಡದೂರು’ ಜಾತ್ರೆಗೆ ಮುಖ್ಯಮಂತ್ರಿಗಳಿಗೆ ಆಹ್ವಾನ

ನಾಡಿನ ಏಕೀಕರಣದ ಆಶಯವನ್ನು ಸಾರುವ ಉದ್ದೇಶದಿಂದ 'ನಾವು ದ್ರಾವಿಡ ಕನ್ನಡಿಗರು' ಚಳುವಳಿಯ...

ಒಂದು ವಾರದೊಳಗೆ ರೈತರಿಗೆ ಸಾಲ ಮಂಜೂರು ಮಾಡದಿದ್ದರೆ ಹೋರಾಟ: ಹೊಸೂರ್ ಕುಮಾರ್

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ...