ಹುತಾತ್ಮ ಯೋಧನ ತಾಯಿ ಕಣ್ಣೀರಿಡುವಾಗ ಚೆಕ್‌ ನೀಡಿ ಫೋಟೋಗೆ ಬಲವಂತ ಮಾಡಿದ ಬಿಜೆಪಿ ನಾಯಕರು!

Date:

Advertisements

ಜಮ್ಮು ಕಾಶ್ಮೀರದ ರಜೌರಿ ಎನ್‌ಕೌಂಟರ್‌ನಲ್ಲಿ ಹುತಾತ್ಮನಾದ ಯೋಧನೋರ್ವನ ತಾಯಿಗೆ ಉತ್ತರ ಪ್ರದೇಶದ ಸಚಿವರು ಮತ್ತು ಬಿಜೆಪಿ ನಾಯಕರು ಪರಿಹಾರ ಚೆಕ್‌ ನೀಡುವ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಬಿಜೆಪಿ ಶಾಸಕ ಜಿ ಎಸ್ ಧರ್ಮೇಶ್ ಅವರು, ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ಗುಪ್ತಾ ಅವರ ತಾಯಿಗೆ ಆಗ್ರಾ ನಿವಾಸದಲ್ಲಿ ಚೆಕ್ ಹಸ್ತಾಂತರಿಸುವಾಗ ಅವರ ತಾಯಿಯೊಂದಿಗೆ ತಮ್ಮ ಫೋಟೋ ತೆಗೆಸಿಕೊಂಡಿದ್ದಾರೆ.

ದುಃಖತಪ್ತ ಗುಪ್ತಾ ಅವರ ತಾಯಿ, “ಇದನ್ನು ಸಾರ್ವಜನಿಕ ಪ್ರದರ್ಶನ ಮಾಡಬೇಡಿ” ಎಂದು ದಯನೀಯವಾಗಿ ಕೇಳಿಕೊಂಡರೂ ಕೂಡ ಬಿಜೆಪಿಯ ಸಚಿವ ಅದನ್ನು ಲೆಕ್ಕಿಸದೇ ಫೋಟೋಗೆ ಪೋಸ್‌ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Advertisements

ವಿಡಿಯೋದಲ್ಲಿ, ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಬಿಜೆಪಿ ಶಾಸಕ ಜಿಎಸ್ ಧರ್ಮೇಶ್ ಅವರು ಹುತಾತ್ಮ ಯೋಧ ಕ್ಯಾಪ್ಟನ್ ಗುಪ್ತಾ ಅವರ ತಾಯಿಗೆ ಪರಿಹಾರ ಚೆಕ್ ಹಸ್ತಾಂತರಿಸುವುದು ಮತ್ತು ಫೋಟೋ ತೆಗೆಸಿಕೊಳ್ಳುವುದು ಕಂಡು ಬಂದಿದೆ. ಈ ವೇಳೆ ಗದ್ಗದಿತಳಾದ ತಾಯಿ, ತನ್ನ ಕೈಗಳನ್ನು ಹಿಂದಕ್ಕೆ ಎಳೆದು, “ಇದನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಬೇಡಿ. ನನ್ನ ಮಗನನ್ನು ವಾಪಸ್ ಕೊಡಿ, ನನಗೆ ಇದೆಲ್ಲ ಬೇಡ” ಎಂದು ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಬಿಜೆಪಿ ನಾಯಕರು ಅದನ್ನು ಕೇಳಿಯೂ ಕೇಳಿಸಿಕೊಳ್ಳದ ರೀತಿ ವಿಡಿಯೋವನ್ನು ಮಾಡಿದ್ದಾರೆ. ಫೋಟೋವನ್ನು ತೆಗೆಸಿಕೊಂಡಿದ್ದಾರೆ.

ಈ ಘಟನೆಯ ವಿಡಿಯೋವನ್ನು ವಿಪಕ್ಷ ನಾಯಕರು ಹಂಚಿಕೊಂಡಿದ್ದು, ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ನೆಟ್ಟಿಗರು ಕೂಡ ಖಂಡಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ‘ಎಕ್ಸ್‌’ನಲ್ಲಿ ವಿಡಿಯೊವನ್ನು ಹಂಚಿಕೊಂಡು, ‘ರಣಹದ್ದುಗಳು’ ಎಂದು ಬರೆದುಕೊಂಡಿದೆ.

ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ವಿಡಿಯೋವನ್ನು ಹಂಚಿಕೊಳ್ಳುತ್ತಾ, “ಇದು ನಾಚಿಕೆಗೇಡು. ತಾಯಿ ತನ್ನ ಮಗನ ಶವಕ್ಕಾಗಿ ಕಾಯುತ್ತಿರುವಾಗ, ಪ್ರಚಾರ ಉದ್ದೇಶಗಳಿಗಾಗಿ ಫೋಟೋ ತೆಗೆಯಲು ಸಚಿವರು ಹೆಚ್ಚು ಆಸಕ್ತಿ ವಹಿಸಿದ್ದರು” ಎಂದು ಹೇಳಿದ್ದಾರೆ.

ಶಿವಸೇನೆ ಉದ್ಧವ್ ಬಣದ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ವಿಡಿಯೋ ಹಂಚಿಕೊಂಡು, ‘ಇದು ನಾಚಿಕೆಗೇಡು’ ಎಂದು ಬರೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎರಡು ದಿನಗಳ ಎನ್‌ಕೌಂಟರ್‌ನಲ್ಲಿ ಐವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದು, ಅದರಲ್ಲಿ ಕ್ಯಾಪ್ಟನ್ ಶುಭಂ ಗುಪ್ತಾ ಕೂಡ ಒಬ್ಬರು.

ಇವರ ಜೊತೆಗೆ ಕರ್ನಾಟಕದ ಸೈನಿಕ ಕ್ಯಾಪ್ಟನ್ ಎಂವಿ ಪ್ರಾಂಜಲ್, ಹವಾಲ್ದಾರ್ ಅಬ್ದುಲ್ ಮಜೀದ್, ಲ್ಯಾನ್ಸ್ ನಾಯಕ್ ಸಂಜಯ್ ಬಿಷ್ತ್ ಮತ್ತು ಪ್ಯಾರಾಟ್ರೂಪರ್ ಸಚಿನ್ ಲಾರ್ ಅವರು ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಇತರ ಸೇನಾ ಸಿಬ್ಬಂದಿಯಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X