ಗುಜರಾತ್ | ಅಕಾಲಿಕ ಮಳೆಯಿಂದ ಸಿಡಿಲು ಬಡಿದು 20 ಮಂದಿ ಸಾವು

Date:

Advertisements

ಗುಜರಾತ್‌ನ 251 ತಾಲೂಕುಗಳ ಪೈಕಿ 230ಕ್ಕೂ ಹೆಚ್ಚು ತಾಲೂಕುಗಳಲ್ಲಿ ಗುಡುಗು ಸಹಿತ ಅಕಾಲಿಕ ಮಳೆಯಾಗಿದೆ. ಭಾನುವಾರ ಸಿಡಿಲು ಬಡಿದು ಅಪ್ರಾಪ್ತರು ಸೇರಿದಂತೆ ಸುಮಾರು 20 ಮಂದಿ ಸಾವನ್ನಪ್ಪಿದ್ದು, ಒಂಬತ್ತುಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯಲ್ಲಿ 22 ವರ್ಷದ ಯುವಕ ಬೈಕ್​​ನಲ್ಲಿ ಪ್ರಯಾಣಿಸುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇನ್ನು ಮೆಹ್ಸಾನಾ ಜಿಲ್ಲೆಯಲ್ಲಿ ಆಟೋರಿಕ್ಷಾ ಮೇಲೆ ಮರ ಬಿದ್ದು 29 ವರ್ಷದ ಯುವಕ ಮೃತಪಟ್ಟಿದ್ದಾನೆ. ದಹೋದ್‌ನಲ್ಲಿ ಮೂವರು ಮತ್ತು ಭರೂಚ್‌ನಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದರೆ, ಇದರ ಜತೆಗೆ ತಾಪಿ ಜಿಲ್ಲೆಯಲ್ಲಿ ಇಬ್ಬರು ಮತ್ತು ಸಬರ್ಕಾಂತ, ಅಹಮದಾಬಾದ್, ಮೆಹ್ಸಾನಾ, ಅಮ್ರೇಲಿ, ಬೊಟಾಡ್, ಪಂಚಮಹಲ್, ಖೇಡಾ, ಸೂರತ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಕೆಲವು ಕಡೆ ಸಿಡಿಲಿನ ಅಬ್ಬರಕ್ಕೆ 40ಕ್ಕೂ ಹೆಚ್ಚು ದನ, ಕುರಿಗಳೂ ಸಾವನ್ನಪ್ಪಿವೆ. ಸೂರತ್ ಜಿಲ್ಲೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಈ ಎಲ್ಲ ಮೃತರು ತಮ್ಮ ಕೃಷಿ ಚಟುವಟಿಕೆಯಲ್ಲಿದ್ದಾಗ ಅಥವಾ ಹೊರಗೆ ಕೆಲಸದಲ್ಲಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisements

ಭರೂಚ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಭೂರಿಬೆನ್ ರಾಥೋಡ್ (60) ಮತ್ತು ಮೊಮ್ಮಗ ಆಕಾಶ್ ರಾಥೋಡ್ (15) ಸಾವನ್ನಪ್ಪಿದ್ದಾರೆ. ಅಂಬೇಟಾ ಗ್ರಾಮದಲ್ಲಿ ತನ್ನ ಮಗಳ ಕುಟುಂಬದೊಂದಿಗೆ ಭೂರಿಬೆನ್ ವಾಸಿಸುತ್ತಿದ್ದರು. ತಮ್ಮ ಮೊಮ್ಮಗ ಆಕಾಶ್ ಜತೆಗೆ ಹನ್ಸೋಟ್ ತಾಲೂಕಿನ ಅಲಿಯಾ ಬೆಟ್ ದ್ವೀಪದಲ್ಲಿ ಮೀನುಗಾರಿಕೆಗೆ ತೆರಳಿದ್ದಾರೆ. ಈ ವೇಳೆ, ದಾರಿಯಲ್ಲಿದ್ದಾಗ ಮಳೆ ಆರಂಭವಾಗಿದೆ. ಬಳಿಕ ಸಮೀಪದಲ್ಲಿರುವ ಮರದ ಬಳಿ ಆಶ್ರಯ ಪಡೆದಿದ್ದಾರೆ. ಇದ್ದಕ್ಕಿದ್ದಂತೆ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲವು ಮೀನುಗಾರರು ಅವರನ್ನು ಕಂಡು ಭರೂಚ್ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

ಅಮ್ರೇಲಿಯಲ್ಲಿ ಸಿಡಿಲು ಬಡಿದು 16 ವರ್ಷದ ಬಾಲಕ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಈತ ಜಫ್ರಾಬಾದ್ ತಾಲೂಕಿನ ರೋಹಿಸಾ ಗ್ರಾಮದ ನಿವಾಸಿ ಭವೇಶ್ ದರ್ಶನ್ ಭಾಯಿ ವಘೇಲಾ ಎಂದು ಪೊಲೀಸರು ಗುರುತಿಸಿದ್ದಾರೆ. ಬಾಲಕ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.

“ಬೆಳಿಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬಾಲಕನು ತನ್ನ ಹತ್ತಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಭಾರೀ ಮಳೆಯ ಸಮಯದಲ್ಲಿ ಸಿಡಿಲು ಬಡಿದು ಸಾವಾಗಿದೆ. ವಘೇಲಾ ಅವರು ಬೆಳೆ ಹಾನಿಯಾಗದಂತೆ ಬೆಳೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಸಿಡಿಲು ಬಡಿದಿದೆ. ಈ ಸಂಬಂಧ ನೈಸರ್ಗಿಕ ಅಪಘಾತ ಪ್ರಕರಣ ದಾಖಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಈಶಾನ್ಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಲ್ಲಿ ಚಂಡಮಾರುತ ಉಂಟಾದ ಪರಿಣಾಮ ಮಳೆ ಆರಂಭವಾಗಿದೆ. ಜತೆಗೆ, ದಕ್ಷಿಣ ಗುಜರಾತ್‌ನಿಂದ ಕೇರಳದವರೆಗೂ ಟ್ರಫ್ ವಿಸ್ತರಿಸುತ್ತಿದೆ. ಈ ಹವಾಮಾನ ವ್ಯವಸ್ಥೆಗಳ ಸಂಯೋಜನೆಯಿಂದ ಗುಜರಾತ್‌ನಲ್ಲಿ ಅಕಾಲಿಕ ಮಳೆ ಉಂಟಾಗಿದೆ” ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಾದೇಶಿಕ ನಿರ್ದೇಶಕಿ ಮನೋರಮಾ ಮೊಹಂತಿ ತಿಳಿಸಿದ್ದಾರೆ.

“ಸೂರತ್ ಮತ್ತು ನವಸಾರಿ ಕರಾವಳಿ ಜಿಲ್ಲೆಗಳಾದ ಜುನಾಗಢ್, ಗಿರ್ ಸೋಮನಾಥ್, ಭಾವನಗರ, ಅಮ್ರೇಲಿ, ರಾಜ್‌ಕೋಟ್ ಮತ್ತು ಬೊಟಾಡ್ ಸೋಮವಾರದವರೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಅಹಮದಾಬಾದ್, ತಾಪಿ, ಡ್ಯಾಂಗ್, ಛೋಟಾ ಉದೇಪುರ್ ಮತ್ತು ದಾಹೋಡ್‌ನಲ್ಲಿ ಸೋಮವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸೋಮವಾರವೂ ಮಳೆಯಾಗಲಿದೆ. ಮಂಗಳವಾರದಿಂದ ರಾಜ್ಯವು ಶುಷ್ಕ ಹವಾಮಾನವನ್ನು ಅನುಭವಿಸುವ ನಿರೀಕ್ಷೆಯಿದೆ” ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನ.27 ಮತ್ತು ನ.28 ರಂದು ಈ ಮಾರ್ಗದಲ್ಲಿ ಸಂಚಾರ ಬಂದ್; ಎಲ್ಲೆಲ್ಲಿ? ಇಲ್ಲಿದೆ ನೋಡಿ

ಭಾನುವಾರ ರಾತ್ರಿ 8 ಗಂಟೆಯವರೆಗೆ ಸುರೇಂದ್ರನಗರದ ಚುಡಾದಲ್ಲಿ ಅತಿ ಹೆಚ್ಚು 111 ಮಿಮೀ ಮಳೆ ದಾಖಲಾಗಿದೆ. ಸೂರತ್ ನಗರದಲ್ಲಿ 99 ಮಿಮೀ ಮತ್ತು ಸೂರತ್ ಜಿಲ್ಲೆಯ ಉಮರ್ಪಾದದಲ್ಲಿ 89 ಮಿಮೀ ಮಳೆಯಾಗಿದೆ. ಖೇಡಾದ ನಾಡಿಯಾಡ್‌ನಲ್ಲಿ 80 ಮಿಮೀ ಭಾರೀ ಮಳೆ ದಾಖಲಾಗಿದೆ.

ರಾಜ್‌ಕೋಟ್‌ನಲ್ಲಿ ಮಳೆ ಮತ್ತು ಆಲಿಕಲ್ಲು ಮಳೆಯಾದರೆ, ಸೂರತ್ ಗಾಂಧಿನಗರ ಮತ್ತು ಅಹಮದಾಬಾದ್‌ನಲ್ಲಿ ಬೆಳಿಗ್ಗೆ ತುಂತುರು ಮಳೆ ಸುರಿದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X