ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ನಾಯಕ ಎಂದೆನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಇನ್ನುಮುಂದೆ ಬೆಂಗಳೂರಿನಲ್ಲೊಂದು ಉದ್ಯಮ ಆರಂಭಿಸಲಿದ್ದಾರೆ. ಹೌದು, ಆಧುನಿಕ ಗರಡಿ ಮನೆ ತಗ್ಡಾ ರಹೋ ಫಿಟ್ನೆಸ್ ಸ್ಟಾರ್ಟಪ್‌ಗೆ ಅವರು ಹೂಡಿಕೆ ಮಾಡಿದ್ದಾರೆ. ಆದರೆ, ಸ್ಟಾರ್ಟಪ್ ಮಾಲೀಕರು ಧೋನಿ ಮಾಡಿದ ಹೂಡಿಕೆಯ ಮೊತ್ತ ಅಥವಾ ಖರೀದಿಸಿದ ಷೇರುಗಳ ಸಂಖ್ಯೆಯ ಮಾಹಿತಿಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.
ತಗ್ಡಾ ರಹೋ ವ್ಯಾಯಾಮ ಶಾಲೆಯು ಸಾಂಪ್ರದಾಯಿಕ ಶೈಲಿಯ ವ್ಯಾಯಾಮ ಪದ್ದತಿಗೆ ಆಧುನಿಕ ಸ್ಪರ್ಶ ನೀಡುವ ಕಂಪನಿಯಾಗಿದೆ. ಸಾಂಪ್ರದಾಯಿಕ ಗರಡಿ ಮನೆಗಳಲ್ಲಿರುವ ವ್ಯಾಯಾಮ ಸಲಕರಣೆಗಳನ್ನು ಬಳಸಿ ಫಿಟ್ನೆಸ್ ಕಲ್ಪಿಸಲಾಗುತ್ತದೆ. ಮನೀಶ್ ಮಲ್ಹೋತ್ರಾ ಅವರು ಸಂಸ್ಥಾಪಿಸಿದ ಈ ಫಿಟ್ನೆಸ್ ಸ್ಟಾರ್ಟಪ್ನ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ.
ಈ ತರಬೇತಿ ಕೇಂದ್ರಗಳನ್ನು ‘ಡಗ್ ಔಟ್’ ಎಂದು ಕರೆಯಲಾಗುತ್ತದೆ. ಈಗಾಗಲೇ, ಬೆಂಗಳೂರಿನ ಅಲಸೂರಿನ ಎಸ್ಯುಎಫ್ಸಿ ಗ್ರೌಂಡ್ಸ್ ಹಾಗೂ ಹೆಚ್ಎಸ್ಆರ್ ಲೇಔಟ್ನಲ್ಲಿ ಡಗ್ ಔಟ್ಗಳಿವೆ. ಈ ಸೆಂಟರ್‌ಗಳಲ್ಲಿ ಹಲವು ಜನ ಟ್ರೆನಿಂಗ್ ಪಡೆಯುತ್ತಿದ್ದಾರೆ. ಈ ಡಗ್ ಔಟ್‌ಗಳು ಬೆಳಗ್ಗೆ 6:30-10 ಹಾಗೂ ಸಂಜೆ 5ರಿಂದ 9ರವರೆಗೂ ತೆರೆದಿರುತ್ತವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆ ಪ್ರವೇಶಿಸಿದ ಮಹಿಳೆ
ಸಾಂಪ್ರದಾಯಿಕ ಗರಡಿ ಮನೆಗಳಲ್ಲಿರುವ ವ್ಯಾಯಾಮ ಸಲಕರಣೆಗಳನ್ನು ಬಳಸಿ ಫಿಟ್ನೆಸ್ ತರಬೇತಿ ಕೊಡಲಾಗುತ್ತದೆ. ಸಾಂಪ್ರದಾಯಿಕ ಉಪಕರಣದ ಜೊತೆಗೆ ಆಧುನಿಕ ತಂತ್ರವನ್ನು ಕಲಿಸಿಕೊಡಲಾಗುತ್ತದೆ.
ಈ ಬಗ್ಗೆ ಮಾತನಾಡಿರುವ ಮಹೇಂದ್ರ ಸಿಂಗ್ ಧೋನಿ, “ತಗ್ಡಾ ರಹೋ ತುಂಬಾ ಕುತೂಹಲಕಾರಿ ಎಂದೆನಿಸುತ್ತಿದೆ. ಈ ತಗ್ದಾ ಜನರು ಮರೆತು ಹೋಗಿರುವ ದೈಹಿಕ ಕಸರತ್ತನ್ನು ಮರಳಿ ತರುತ್ತಿದೆ” ಎಂದು ಹೇಳಿದ್ದಾರೆ.