ವೇತನ ಸಮಸ್ಯೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಯಾಲಿಸಿಸ್ ಸಿಬ್ಬಂದಿ ನವೆಂಬರ್ 30ರಿಂದ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ರಾಜ್ಯದಲ್ಲಿ 202 ಡಯಾಲಿಸಿಸ್ ಕೇಂದ್ರಗಳಿವೆ. ನ.30 ರಿಂದ ಡಯಾಲಿಸಿಸ್ ಸಿಬ್ಬಂದಿ ಕೆಲಸ ಮಾಡುವುದನ್ನು ನಿಲ್ಲಿಸಿದರೆ, ರೋಗಿಗಳೂ ಪರದಾಡುವ ಸ್ಥಿತಿ ಎದುರಾಗುತ್ತದೆ.
ಮುಖ್ಯವಾಗಿ ಡಯಾಲಿಸಿಸ್ ಸಿಬ್ಬಂದಿಗೆ ಸಂಪೂರ್ಣ ವೇತನ ಸಿಗುತ್ತಿಲ್ಲ. ಸಿಗುತ್ತಿರುವ ವೇತನದಲ್ಲೂ ಕತ್ತರಿ ಬೀಳುತ್ತಿದೆ. ಈ ಹಿಂದೆ ಕೊರೊನಾ ನೆಪ ಹೇಳಿ ಸರ್ಕಾರ ಸಿಬ್ಬಂದಿ ಸಂಬಳಕ್ಕೆ ಕತ್ತರಿ ಹಾಕಿತ್ತು. ಇದೀಗ, ಕಳೆದ ಎರಡುವರೆ ವರ್ಷಗಳಿಂದ ಡಯಾಲಿಸಿಸ್ ಸಿಬ್ಬಂದಿ ಅರ್ಧ ಸಂಬಳ ಪಡೆದು ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ವೇತನ ಕೂಡ ನೀಡಿಲ್ಲ. ವೇತನ ಸಿಗದೇ, ಪಿಎಫ್, ಇಎಸ್ಐ ಇಲ್ಲದೇ 650 ಸಿಬ್ಬಂದಿಗಳು ಪರದಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಾಂಪ್ರದಾಯಿಕ ಗರಡಿ ಮನೆಗೆ ಹೂಡಿಕೆ ಮಾಡಿದ ಕ್ರಿಕೆಟಿಗ ಧೋನಿ
ರಾಜ್ಯದಲ್ಲಿ ಒಟ್ಟು 202 ಡಯಾಲಿಸಿಸ್ ಕೇಂದ್ರಗಳಿವೆ. ಈ ಪೈಕಿ ಬೆಂಗಳೂರು, ತುಮಕೂರು, ರಾಮನಗರ, ಗದಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ಸೆಂಟರ್ಗಳಿವೆ. ಇಲ್ಲಿ ಗ್ರೂಪ್ ಡಿ, ಸ್ಟಾಫ್, ಡಯಾಲಿಸಿಸ್ ಟೆಕ್ನಿಶಿಯನ್ಸ್ ಸೇರಿ ಒಟ್ಟು 650 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 2500 ಜನರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ.