‘ಫ್ರೀಡಂ ಪಾರ್ಕ್’ನಿಂದ ನಮಗೆ ‘ಫ್ರೀಡಂ’ ಕೊಡಿ: ಸಿಎಂ ಸಿದ್ದರಾಮಯ್ಯಗೆ ‘ಮಹಾಧರಣಿ’ ಆಗ್ರಹ

Date:

Advertisements

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗಳು ಕೇವಲ ‘ಫ್ರೀಡಂ ಪಾರ್ಕ್‌’ಗೆ ಸೀಮಿತವಾಗಿದ್ದು, ಇದು ಪ್ರತಿಭಟಿಸುವ ಹಕ್ಕಿಗೆ ಧಕ್ಕೆಯಾಗಿದೆ. ಈ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯಬೇಕಾಗಿದೆ. ಹಾಗಾಗಿ, ‘ಫ್ರೀಡಂ ಪಾರ್ಕ್’ನಿಂದ ನಮಗೆ ‘ಫ್ರೀಡಂ’ ಕೊಡಿ ಎಂದು ‘ಮಹಾಧರಣಿ’ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆಯುವ ಮೂಲಕ ಆಗ್ರಹ ವ್ಯಕ್ತಪಡಿಸಿದೆ.

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮಹಾಧರಣಿಯ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಹಕ್ಕೊತ್ತಾಯ ಮನವಿಯಲ್ಲಿ ಸಂಯುಕ್ತ ಹೋರಾಟ ಸಮಿತಿಯ ನಾಯಕರು ಆಗ್ರಹಿಸಿದ್ದಾರೆ.

dharani 5

ಫ್ರೀಡಂ ಪಾರ್ಕ್ ಬಿಟ್ಟರೆ ಮತ್ತೆಲ್ಲೂ ಪ್ರತಿಭಟನೆ ಮಾಡಬಾರದು, ಪ್ಯಾಲೆಸ್ತೀನ್ ವಿಚಾರಕ್ಕೆ ಪ್ರತಿಭಟನೆ,ಪ್ರದರ್ಶನ ಮಾಡಬಾರದು ಎಂಬಂತಹ ಸರ್ವಾಧಿಕಾರಿ ಕ್ರಮಗಳನ್ನು ಸರ್ಕಾರ ನಿಲ್ಲಿಸಿ ಪ್ರಜಾತಾಂತ್ರಿಕವಾಗಿ ನಡೆದುಕೊಳ್ಳಬೇಕು. ದ್ವೇಷ ಬಿತ್ತಿ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವ ಶಕ್ತಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಮುಖಂಡರು ಆಗ್ರಹಿಸಿದ್ದಾರೆ.

Advertisements

dharani 6

ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಹಕ್ಕೊತ್ತಾಯ ಪತ್ರವನ್ನು ಭಗವಾನ್ ರೆಡ್ಡಿಯವರು ವಾಚಿಸಿದರು. ದುಡಿಯುವ ಜನರ ಮಹಾ ಧರಣಿಯ ಪ್ರಮುಖ ಹಕ್ಕೊತ್ತಾಯಗಳು ಹೀಗಿವೆ.

1. ಕರ್ನಾಟಕ ಸರ್ಕಾರವು 2020ರಲ್ಲಿ ಜಾರಿಗೊಳಿಸಿದ ಕರ್ನಾಟಕ ರಾಜ್ಯ ಭೂ-ಸುಧಾರಣಾ ತಿದ್ದುಪಡಿ ಕಾಯ್ದೆ, ಕರ್ನಾಟಕ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕರ್ನಾಟಕ ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು.
2.2023ರ ಫೆಬ್ರವರಿಯಲ್ಲಿ ಜಾರಿಗೆ ತಂದಿದ್ದ ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 12 ಗಂಟೆಗೆ ಏರಿಸುವಂತೆ ಕಾರ್ಖಾನೆ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ರದ್ದುಗೊಳಿಸಬೇಕು.
3. ಬಗರ್‌ಹುಕುಂ ರೈತರನ್ನು ಒಳಗೊಂಡಂತೆ ಉಳುಮೆ ಮಾಡುತ್ತಿರುವ ಎಲ್ಲ ಸಣ್ಣ ರೈತರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಬಲವಂತದ ಭೂಸ್ವಾಧೀನ ನಿಲ್ಲಿಸಿ, ರೈತ ಸ್ನೇಹಿ ವೈಜ್ಞಾನಿಕ ಪರಿಹಾರ ಕ್ರಮವನ್ನು ಪಾಲಿಸಬೇಕು. ಪ್ರತಿಯೊಬ್ಬರಿಗೂ ವಸತಿ ಹಕ್ಕನ್ನು ಖಾತ್ರಿಪಡಿಸಬೇಕು.
4. ಅರಣ್ಯ ಹಕ್ಕು ಕಾಯ್ದೆ-2006 ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಹಾಗೂ ಅರಣ್ಯವಾಸಿಗಳ ಮೇಲಿನ ಫಾರೆಸ್ಟ್ ಇಲಾಖೆಯ ಕಿರುಕುಳ ನಿಲ್ಲಬೇಕು. ಅರಣ್ಯವಾಸಿಗಳಿಗೆ ರಾಜ್ಯ ಸರ್ಕಾರ ಅಭಯಹಸ್ತ ನೀಡಬೇಕು ಮತ್ತು ಅವರು ಕಟ್ಟಿಕೊಂಡಿರುವ ಮನೆ ಮತ್ತು ಉಳುಮೆ ಮಾಡುತ್ತಿರುವ ಭೂಮಿಗೆ ಕೂಡಲೇ ಹಕ್ಕುಪತ್ರ ನೀಡಬೇಕು.

dharani 8 pic
5. ಎಲ್ಲ ರೀತಿಯ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾಯಿಸಿ, ಪಿಂಚಣಿ ಸೇರಿದಂತೆ ಸಮಗ್ರ ಸಾಮಾಜಿಕ ಸುರಕ್ಷತೆಯನ್ನು ಒದಗಿಸಬೇಕು. ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿರುವ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಯೋಜನೆ, ತಾಯ್ತನದ ಆರೈಕೆ ಸೌಲಭ್ಯ, ಜೀವ ಹಾಗೂ ಅಂಗವೈಕಲ್ಯ ವಿಮೆ, ಮತ್ತಿತರ ಕಲ್ಯಾಣ ಸೌಲಭ್ಯಗಳನ್ನು ಒದಗಿಸಬೇಕು.
6. ಐಸಿಡಿಎಸ್, ಅಕ್ಷರ ದಾಸೋಹ, ಆಶಾ ಮುಂತಾದ ಯೋಜನೆಗಳನ್ನು ಯಾವುದೇ ಸ್ವರೂಪದಲ್ಲಿ ಖಾಸಗೀಕರಣ ಮಾಡಬಾರದು. ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಸಮರ್ಪಕವಾಗಿ ಜಾರಿ ಮಾಡಬೇಕು.
7. ಕಲ್ಯಾಣ ಮಂಡಳಿಯ ನಿಧಿ ದುರ್ಬಳಕೆ ನಿಲ್ಲಿಸಿ, ಕಟ್ಟಡ ಕಾರ್ಮಿಕರಿಗೆ ಜಾರಿಯಲ್ಲಿರುವ ಸೌಲಭ್ಯಗಳ ಜೊತೆಗೆ ಇಎಸ್‌ಐ, ವಸತಿ ಸೌಲಭ್ಯವನ್ನು ಒದಗಿಸಬೇಕು. ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ಕಡಿತ ಮಾಡದೇ ಕೂಡಲೇ ಬಿಡುಗಡೆ ಮಾಡಬೇಕು.
8. ಅಂಗನವಾಡಿ ನೌಕರರಿಗೆ ಗ್ಯಾರಂಟಿ ಜಾರಿಗೊಳಿಸಿ, ಪೌಷ್ಠಿಕ ಆಹಾರದಲ್ಲಾಗುವ ಭ್ರಷ್ಟಾಚಾರ ನಿಲ್ಲಿಸಿ. ಬಿಸಿಯೂಟ ಮತ್ತು ಆಶಾ ನೌಕರರಿಗೆ ನಿವೃತ್ತ ಸೌಲಭ್ಯ ಜಾರಿಗೊಳಿಸಿ ಹಾಗೂ ಕನಿಷ್ಟ ವೇತನ ಜಾರಿಗೊಳಿಸಿ.
9. ಹಳ್ಳಿಗಳನ್ನು ಘಟಕವಾಗಿಟ್ಟುಕೊಂಡು ಕೂಡಲೇ ಬರಪರಿಹಾರವನ್ನು ಘೋಷಿಸಬೇಕು. ಕೃಷಿ ವಿಮೆಯನ್ನು ಖಾಸಗಿಯವರಿಗೆ ಬಿಡದೆ ಸರ್ಕಾರವೇ ನಡೆಸಬೇಕು, ಸರ್ಕಾರವೇ ಕಂತು ಕಟ್ಟಬೇಕು. ಈ ಹಿಂದಿನ ಸರ್ಕಾರ ಪರಿಹಾರ ಧನವನ್ನು ಸಂಕಷ್ಟ ರೈತರ ಬದಲು ತಮ್ಮವರ ಖಾತೆಗಳಿಗೆ ಕಳುಹಿಸಿ ವಂಚಿಸಿರುವ ಪ್ರಕರಣ ತ್ವರಿತ ತನಿಖೆ ನಡೆದು ಶಿಕ್ಷೆಯಾಗಬೇಕು.
10. ರಾಜ್ಯದ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಪೌರ ಕರ‍್ಮಿಕರನ್ನು ಕೂಡಲೇ ಖಾಯಂಗೊಳಿಸಬೇಕು.
11. ಸಮಾನ ಕನಿಷ್ಟ ವೇತನವನ್ನು ಏಕ ಅಧಿಸೂಚನೆಯಲ್ಲಿ ಎಲ್ಲ ವಿಭಾಗಗಳಿಗೆ ಪ್ರಕಟಿಸಬೇಕು.
12. ರೈತ ಮಹಿಳೆಯರನ್ನು ರೈತರು ಎಂದು ಪರಿಗಣಿಸಿ ರೈತರಿಗೆ ಸಿಗುವ ಎಲ್ಲ ಸೌಲಭ್ಯ ಸಿಗುವಂತಾಗಬೇಕು ಮತ್ತು ಎಸ್‌ಹೆಚ್‌ಜಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಕೃಷಿಗಾಗಿ ಸಾಲ ಪಡೆದ ಮಹಿಳೆಯರ ಸಾಲ ಮನ್ನಾ ಮಾಡುವಂತಾಗಬೇಕು.
13. ಮಹಿಳೆ, ದಲಿತ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರ ಹಾಗೂ ಜಾತಿ, ಧರ್ಮ, ಅಂತಸ್ತುಗಳ ಹೆಸರಿನಲ್ಲಿ ನಡೆಯುತ್ತಿರುವ ಮರ್ಯಾದಾಗೇಡು ಹತ್ಯೆ, ಹಿಂಸೆ ತಡೆಗಟ್ಟಲು ಕಾನೂನು ಮತ್ತು ತ್ವರಿತ ವಿಶೇಷ ಮಹಿಳಾ ನ್ಯಾಯಲಗಳನ್ನು ಸ್ಥಾಪಿಸಲು ಒತ್ತಾಯ.
14. ಮೀಸಲಾತಿಯ ವಿಚಾರದಲ್ಲಿ ನಡೆಯುತ್ತಿರುವ ಗೊಂದಲವನ್ನು ಕೊನೆಗೊಳಿಸಬೇಕು. ಜಾತಿ ಜನಗಣತಿಯನ್ನು ಸೂಕ್ತ ಸಮಿತಿಗೆ ಒಪ್ಪಿಸಿ ತಳಸಮುದಾಯಗಳನ್ನು ಮತ್ತಷ್ಟು ಒಡೆಯದೆ ಅವರಲ್ಲಿ ಐಕ್ಯತೆ ಮೂಡುವ ಮತ್ತು ಜನಸಂಖ್ಯೆಗನುಗುಣವಗಿ ಸಾಮಾಜಿಕ ಪಾಲು ದಕ್ಕುವಂತಹ ಪರಿಹಾರ ಕ್ರಮಕ್ಕೆ ಮುಂದಾಗಬೇಕು.
15. ರಾಜ್ಯದ ಜನಸಂಪನ್ಮೂಲಗಳನ್ನು ಸಂಪೂರ್ಣ ಸದುಪಯೋಗ ಮಾಡಿಕೊಳ್ಳಬೇಕು. ಕಾವೇರಿ ನೀರಿಗೆ ಸಮಗ್ರ ಮತ್ತು ನ್ಯಾಯಯುತ ಸಂಕಷ್ಟ ಪರಿಹಾರ ಸೂತ್ರ ರೂಪಿಸಲು ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಮಹದಾಯಿ ಯೋಜನೆಯ ಜಾರಿಗೆ ಪಟ್ಟು ಹಿಡಿಯಬೇಕು. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಸಮಿತಿ ಶಿಫಾರಸಿಗೆ ಅನುಗುಣವಾಗಿ ಹೆಚ್ಚಿಸಬೇಕು.
16. ಫ್ರೀಡಂ ಪಾರ್ಕ್ ಬಿಟ್ಟರೆ ಮತ್ತೆಲ್ಲೂ ಪ್ರತಿಭಟನೆ ಮಾಡಬಾರದು, ಪ್ಯಾಲೆಸ್ತೀನ್ ವಿಚಾರಕ್ಕೆ ಪ್ರತಿಭಟನೆ, ಪ್ರದರ್ಶನ ಮಾಡಬಾರದು ಎಂಬಂತಹ ಸರ್ವಾಧಿಕಾರಿ ಕ್ರಮಗಳನ್ನು ಸರ್ಕಾರ ನಿಲ್ಲಿಸಿ ಪ್ರಜಾತಾಂತ್ರಿಕವಾಗಿ ನಡೆದುಕೊಳ್ಳಬೇಕು.
17. ದ್ವೇಷ ಬಿತ್ತಿ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವ ಶಕ್ತಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.
18. ಎಸ್‌ಇಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯನ್ನು ಅನುಷ್ಟಾನಗೊಳಿಸಲು ಏಕ ಗವಾಕ್ಷಿ ಪದ್ದತಿಯ ಮೂಲಕ ಅನುದಾನ ಮತ್ತು ಕಾರ್ಯಕ್ರಮಗಳು ಜಾರಿಯಾಗಬೇಕು. ಜನರ ಈ ಮೂಲಭೂತ ಸಮಸ್ಯೆಗಳನ್ನು ಚರ್ಚಿಸಲು ಜನತಾ ಅಧಿವೇಶನವನ್ನು ಕರೆಯಬೇಕು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X