ಈಶಾನ್ಯ ರಾಜ್ಯದಲ್ಲಿನ ಜನಾಂಗೀಯ ಹಿಂಸಾಚಾರವನ್ನು ಆಧರಿಸಿದ ‘ಮಣಿಪುರ ಫೈಲ್ಸ್’ ಕೃತಿಯ ಮೂಲಕ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ಸಿಲ್ಚಾರ್ ಮೂಲದ ಬರಹಗಾರ ಪ್ರಣಬಾನಂದ ದಾಸ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಸ್ಸಾಂನ ಸಿಲ್ಚಾರ್ ಮೂಲದ ಬರಹಗಾರ ಪ್ರಣಬಾನಂದ ದಾಸ್ ವಿರುದ್ಧ ಕ್ಷನ್ 153 ಎ (ಧರ್ಮ, ಜನಾಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 200 ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಗುಜರಾತ್‌ನಲ್ಲಿ ಪ್ರಕರಣ ಹಿಂಪಡೆಯದ ದಲಿತ ಮಹಿಳೆಯ ಹತ್ಯೆ; ಮಧ್ಯ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರ
ಕಂಗ್ಲೇಪಕ್ ಕನ್ಬಲುಪ್ (ಕೆಕೆಎಲ್) ಯುವ ನಾಯಕ ಲುವಾಂಗ್ಚಾಯು ನ್ಗಮ್ಖೀಂಗಕ್ಪಾ ಅವರು ಪ್ರಣಬಾನಂದ ದಾಸ್ ವಿರುದ್ಧ ನವೆಂಬರ್ 25 ರಂದು ಇಂಫಾಲ್ ಪೂರ್ವ ಜಿಲ್ಲೆಯ ಪೊರೊಂಪಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಣಬಾನಂದ ಅವರು ಸಂಘರ್ಷದ ಒಂದು ಭಾಗವನ್ನು ಮಾತ್ರ ವಿವರಿಸುವ ಮೂಲಕ ಹಿಂಸಾಚಾರವನ್ನು ಪಕ್ಷಪಾತದಿಂದ ವಿವರಿಸಿದ್ದಾರೆ ಎಂದು ಆರೋಪಿಸಿಸಲಾಗಿದೆ.
ಈ ವರ್ಷದ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈತೇಯಿ ಮತ್ತು ಇತರ ಜಿಲ್ಲೆಗಳ ಕಣಿವೆ ಪ್ರದೇಶದ ಕುಕಿ ಸಮುದಾಯದ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.