ಗೋವಾ ಚಿತ್ರೋತ್ಸವ | ‘ದ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನಕ್ಕೆ ವಿರೋಧ: ಕರಪತ್ರ ಹಂಚಿದವರ ಬಂಧನ

Date:

ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಸುದಿಪ್ತೋ ಸೇನ್ ಅವರ ವಿವಾದಾತ್ಮಕ ಚಲನಚಿತ್ರ ‘ದ ಕೇರಳ ಸ್ಟೋರಿ’ ಸಿನಿಮಾದ ಪ್ರದರ್ಶನವನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟಿಸಿದ ಕೇರಳದ ಇಬ್ಬರು ಪ್ರತಿನಿಧಿಗಳನ್ನು ಪಣಜಿ ಪೊಲೀಸ್ ಠಾಣೆಯಲ್ಲಿ ಒಂದು ಗಂಟೆಗಳ ಕಾಲ ಬಂಧಿಸಿಟ್ಟಿದ್ದ ಘಟನೆ ವರದಿಯಾಗಿದೆ.

‘ದ ಕೇರಳ ಸ್ಟೋರಿ’ ಸಿನಿಮಾವು ಸುಳ್ಳು ಬಂಡಲ್ ಕತೆಯನ್ನು ಒಳಗೊಂಡಿದೆ. ಚಿತ್ರದ ಮೂಲದ ಬಗ್ಗೆ ನಿರ್ದೇಶಕರು ಈವರೆಗೆ ತಿಳಿಸಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನವನ್ನು ವಿರೋಧಿಸಿ ಕೇವಲ ಕರಪತ್ರ ಹಿಡಿದಿದ್ದರೆಂಬ ಕಾರಣಕ್ಕೆ ಗೋವಾ ಪೊಲೀಸರು ಶ್ರೀನಾಥ್ ಮತ್ತು ಅರ್ಚನಾ ರವಿ ಎಂಬುವವರನ್ನು ಸೋಮವಾರ(ನ.27) ಸಂಜೆಯ ವೇಳೆಗೆ ಒಂದು ಗಂಟೆ ಬಂಧನದಲ್ಲಿ ಇಟ್ಟಿದ್ದರು ಎಂದು ವರದಿಯಾಗಿದೆ.

2023ರ ವರ್ಷ ಮೇ 5ರಂದು ಬಿಡುಗಡೆಯಾಗಿದ್ದ ‘ದ ಕೇರಳ ಸ್ಟೋರಿ’ ಚಿತ್ರವು ತಪ್ಪು ಮಾಹಿತಿ ಮತ್ತು ಮುಸ್ಲಿಮರ ವಿರುದ್ಧ ಉದ್ದೇಶಿತ ದ್ವೇಷ ಪ್ರಚಾರವನ್ನು ಬಿಚ್ಚಿಟ್ಟಿದೆ ಎಂದು ಆರೋಪ ಕೇಳಿ ಬಂದಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೇರಳದಿಂದ ಬಂದಿದ್ದ ಪ್ರತಿನಿಧಿಗಳಾಗಿ ಬಂದಿದ್ದ ಚಿತ್ರ ಕಲಾವಿದೆ ಅರ್ಚನಾ ರವಿ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಶ್ರೀನಾಥ್ ಎಂಬುವವರು ಕೇರಳ ಸ್ಟೋರಿ ಕಥೆಯನ್ನು ವ್ಯಂಗ್ಯವಿರುವ ಮೀಮ್‌ಗಳ ಪ್ರತಿಗಳನ್ನು ಜನರಿಗೆ ಹಂಚಿ ತಮ್ಮ ವಿರೋಧ ಸೂಚಿಸಿದ್ದಾರೆ. ಅಲ್ಲದೇ, ಸುದಿಪ್ತೋ ಸೇನ್ ಅವರ ಸಂದರ್ಶನ ವೇಳೆ ಕೂಡ ಭಾಗವಹಿಸಿ ಇತರ ಪ್ರತಿನಿಧಿಗಳಿಗೆ ಮೀಮ್‌ಗಳನ್ನು ವಿತರಿಸಿದರು. ಅಲ್ಲದೇ, ಖುದ್ದು ನಿರ್ದೇಶಕ ಸುದಿಪ್ತೋ ಸೇನ್‌ಗೂ ವಿತರಿಸಿದ್ದಾರೆ.

ಜನರಿಗೆ ವಿತರಿಸಿದ್ದ ಮೀಮ್

“ಸುದಿಪ್ತೋ ಸೇನ್: ದಿ ಕೇರಳ ಸ್ಟೋರಿ, ಮೂಲ: ನನ್ನನ್ನು ನಂಬು ಬ್ರೋ!” ಎಂಬ ಶೀರ್ಷಿಕೆಯೊಂದಿಗೆ ವಿಚಿತ್ರವಾದ ಬೊಂಬೆ ಕೋತಿಯ ಜನಪ್ರಿಯ ಟೆಂಪ್ಲೇಟ್ ಅನ್ನು ಈ ಮೀಮ್ ಒಳಗೊಂಡಿತ್ತು.

ಇವರಿಬ್ಬರ ಶಾಂತಿಯುತ ಪ್ರತಿಭಟನೆಯನ್ನು ಗಮನಿಸಿದ ನಂತರ ಚಿತ್ರದ ನಿರ್ದೇಶಕ ಸುದಿಪ್ತೋ ಅವರೊಂದಿಗೆ ಮಾತಿನ ಚಕಮಕಿ ಕೂಡ ಕೆಲ ನಿಮಿಷಗಳವರೆಗೆ ನಡೆಸಿದ ಬಗ್ಗೆ ಕೇರಳದ ಪ್ರತಿನಿಧಿಗಳು ಇನ್‌ಸ್ಟಾಗ್ರಾನ್‌ ಲೈವ್ ಅಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಬೆಳವಣಿಗೆಯ ನಂತರ ಪೊಲೀಸರು ಮಧ್ಯಪ್ರವೇಶಿಸಿ, ಅವರನ್ನು ಠಾಣೆಗೆ ಕರೆದೊಯ್ದು, ಒಂದು ಗಂಟೆಗಳ ಕೂರಿಸಿದ್ದರು. ಸುದೀಪ್ತೋ ಅವರು ದೂರು ನೀಡಿದ ಬಳಿಕ ಚಲನಚಿತ್ರೋತ್ಸವದ ಸಂಘಟಕರು ತಮ್ಮ ಪಾಸ್‌ಗಳನ್ನು ಕಿತ್ತುಕೊಳ್ಳಲಾಯಿತು ಎಂದು ಶ್ರೀನಾಥ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

“ನೀವು ದ್ವೇಷವನ್ನು ಹರಡುತ್ತಿರುವುದರಿಂದ ನೀವು ಇದನ್ನು ಮಾಡಬಾರದು ಎಂದು ಪೊಲೀಸರು ಹೇಳಿದ್ದಾರೆ. ಆದರೆ ವಾಸ್ತವವಾಗಿ ನಾವು ದ್ವೇಷವನ್ನು ವಿರೋಧಿಸುತ್ತಿದ್ದೇವೆ. ಕೇರಳ ಸ್ಟೋರಿ ಕೇರಳದ ಜನರ ವಿರುದ್ಧ ದ್ವೇಷ ಪ್ರಚಾರದ ಚಿತ್ರವಾಗಿದೆ. ಹಾಗಾಗಿ, ಅದನ್ನು ನೋಡಿಯೂ ನಾವು ಸುಮ್ಮನೆ ಕೂರುವುದಿಲ್ಲ. ನಾವು ಕೇರಳದವರು. ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡುವ ಚಲನಚಿತ್ರದ ವಿರುದ್ಧ ನಿಂತಿದ್ದೇವೆ” ಎಂದು ಶ್ರೀನಾಥ್ ಹೇಳಿದರು.

ಕಳೆದ ವರ್ಷ ಗೋವಾದಲ್ಲಿ ನಡೆದಿದ್ದ ಚಲನಚಿತ್ರೋವದಲ್ಲಿ ಮತ್ತೋರ್ವ ವಿವಾದಾತ್ಮಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರ ದಿ ಕಾಶ್ಮೀರ್ ಫೈಲ್ಸ್‌ ಚಿತ್ರವನ್ನು ತೀರ್ಪುಗಾರರ ಸಮಿತಿಯ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್, “ಅಶ್ಲೀಲ” ಮತ್ತು “ಪ್ರೊಪಗ್ಯಾಂಡ ಚಲನಚಿತ್ರ” ಎಂದು ಉಲ್ಲೇಖಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದರ್ಶನ್ ಪ್ರಕರಣ | ಆರೋಪಿ ನಟನಿಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ...

ದೇಶಕ್ಕೆ ನೀಟ್ ಅಗತ್ಯವಿಲ್ಲ, ಅದನ್ನು ರದ್ದುಗೊಳಿಸುವುದೊಂದೇ ಪರಿಹಾರ: ತಮಿಳು ನಟ ವಿಜಯ್

ನೀಟ್ ವಿರುದ್ಧದ ನಿರ್ಣಯವನ್ನು ಸ್ವಾಗತಿಸುವ ಮೂಲಕ ನಿರ್ಣಯಕ್ಕೆ ಬೆಂಬಲ ಸೂಚಿಸಿದ ತಮಿಳು...

ತನ್ನನ್ನು ತಾನು ಅತ್ಯಂತ ಕೊಳಕು ನಟ ಎಂದು ಕರೆದುಕೊಂಡ ನವಾಜುದ್ದೀನ್ ಸಿದ್ದಿಕಿ

ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಅವರು ತನ್ನನ್ನು ತಾನು ಕೊಳಕು ನಟ...

ಬಿಜೆಪಿ ಶಾಸಕನಿಂದ ಬೆದರಿಕೆ: ಹೈದರಾಬಾದ್‌ನಲ್ಲಿ ಕಾರ್ಯಕ್ರಮ ರದ್ದುಗೊಳಿಸಿದ ಹಾಸ್ಯ ಕಲಾವಿದ

ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ನಿಂದ ಬೆದರಿಕೆ ಸ್ವೀಕರಿಸಿದ ನಂತರ ಹಾಸ್ಯ...