ಪ್ರೊ. ಅರ್ನಾಲ್ಡ್ ಡಿಕ್ಸ್ : ಉತ್ತರಾಖಂಡ ಸುರಂಗ ರಕ್ಷಣಾ ಕಾರ್ಯಾಚರಣೆಯ ಹಿಂದಿನ ಶಕ್ತಿ

Date:

Advertisements

ಉತ್ತರಾಖಂಡನ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳ ಕಾಲ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಮಟ್ಟದ ನೆಲದಡಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಸುರಂಗ ಕೊರೆಯುವ ಯತ್ನದಲ್ಲಿ ಭಾರತೀಯ ತಂತ್ರಜ್ಞರು ಆರಂಭದಲ್ಲಿ ವಿಫಲರಾದ ಕಾರಣ ಆಸ್ಟ್ರೇಲಿಯಾದ ಸುರಂಗ ತಜ್ಞ ಪ್ರೊ. ಅರ್ನಾಲ್ಡ್ ಡಿಕ್ಸ್ ಅವರನ್ನು ಕರೆಸಲಾಗಿತ್ತು. ಅವರು, ‘ಸುರಂಗದಲ್ಲಿ ಸಿಲುಕಿರುವವರನ್ನು ಯಾವುದೇ ಪ್ರಾಣಾಪಾಯವಿಲ್ಲದೆ ಕ್ರಿಸ್‌ಮಸ್‌ಗೂ ಮುನ್ನ ರಕ್ಷಿಸಿ ಕರೆತರುತ್ತೇನೆ’ ಎಂದು 41 ಕಾರ್ಮಿಕರ ಕುಟುಂಬಕ್ಕೆ ಮಾತು ನೀಡಿದ್ದರು. 17 ದಿನಗಳ ನಂತರ ಇವರ ಕೊಟ್ಟ ಮಾತು ಈಡೇರಿತ್ತು. ಕಾರ್ಮಿಕರೆಲ್ಲರೂ ಸುರಕ್ಷಿತವಾಗಿ ಹೊರಬಂದರು.

ಅರ್ನಾಲ್ಡ್ ಡಿಕ್ಸ್ ಯಾರು?

Advertisements

55 ವರ್ಷದ ಅರ್ನಾಲ್ಡ್ ಅವರು ಜಿನಿವಾ ಮೂಲದ ಅಂತಾರಾಷ್ಟ್ರೀಯ ಸುರಂಗ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್‌ ಅಸೋಷಿಯೇಷನ್‌ನ ಮುಖ್ಯಸ್ಥರು. ಅಂಡರ್‌ಗ್ರೌಂಡ್ ಸ್ಪೇಸ್‌ ಅಸೋಷಿಯೇಷನ್‌ ನೆಲದಡಿಯ ನಿರ್ಮಾಣಕ್ಕೆ ಸಂಬಂಧಿಸಿದ ನೈತಿಕ, ಕಾನೂನು, ಪರಿಸರ ಮತ್ತು ರಾಜಕೀಯ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ. ಡಿಕ್ಸ್ ಅವರು ಇಷ್ಟು ಮಾತ್ರವಲ್ಲದೆ ಆಸ್ಟ್ರೇಲಿಯಾದ ಮೊನಾಶ್ ವಿವಿಯಿಂದ ಭೂಗರ್ಭ, ಇಂಜಿನಿಯರಿಂಗ್ ಹಾಗೂ ಕಾನೂನು ಪದವಿಗಳನ್ನು ಪಡೆದು ಆ ವಿಷಯಗಳಲ್ಲಿಯೂ ಪರಿಣಿತಿ ಹೊಂದಿದ್ದಾರೆ.

ಡಿಕ್ಸ್ ಅವರ ತಂಡ ತನ್ನ ಗ್ರಾಹಕರಿಗೆ ಸುರಂಗದ ಮಾನದಂಡಗಳು ಮತ್ತು ಅನುಸರಣೆ ಸಲಹೆಯ ಜೊತೆ ಅಪಾಯದ ಮೌಲ್ಯಮಾಪನಗಳು/ ವಿಪತ್ತಿನ ಸಂದರ್ಭದ ತನಿಖೆಗಳು, ಅಗ್ನಿ ಸಮಸ್ಯೆಗಳಲ್ಲಿ ಜೀವ ಸುರಕ್ಷತೆ, ಟೆಂಡರ್‌ ಮೌಲ್ಯಮಾಪನಗಳ ಬಗ್ಗೆ ಸ್ಪಷ್ಟ, ಉಪಯುಕ್ತ ಫಲಿತಾಂಶಗಳನ್ನು ನಿಖರವಾಗಿ ಒದಗಿಸುತ್ತದೆ.

ಇವರ ಅದ್ಭುತ ಸೇವೆಗಳಿಗಾಗಿ ಹಲವು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಬಂದಿವೆ. ಕಳೆದ 20 ವರ್ಷಗಳಿಂದ ಡಿಕ್ಸ್ ತಂಡ ನಿರಂತರವಾಗಿ ಅಂತಾರಾಷ್ಟ್ರೀಯ ಸುರಂಗ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್‌ ಅಸೋಷಿಯೇಷನ್‌ಗೆ ಸಂಬಂಧಿಸಿದ ಕಾರ್ಯಗಳನ್ನು ನೆರವೇರಿಸುತ್ತಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಖ್ಯಮಂತ್ರಿ ಜನಸ್ಪಂದನ; ಆಡಳಿತ ವೈಫಲ್ಯದ ವಿರಾಟ್ ದರ್ಶನ

2016- 2019ರ ನಡುವೆ ಕತಾರ್ ರೆಡ್ ಕ್ರಾಸ್ ಕ್ರೆಸೆಂಟ್ ಸೊಸೈಟಿಯಲ್ಲಿ (ಕ್ಯೂಆರ್‌ಸಿಎಸ್) ಸ್ವಯಂ ಕಾರ್ಯಕರ್ತರಾಗಿ ಕೆಲಸ ಮಾಡಿದ್ದ ಡಿಕ್ಸ್, 2020ರಲ್ಲಿ ಅಂಡರ್‌ಗ್ರೌಂಡ್ ವರ್ಕ್ಸ್ ಚೇಂಬರ್ಸ್ ರಚಿಸಲು ಲಾರ್ಡ್ ರಾಬರ್ಟ್ ಮೈರ್ ಪೀಟರ್ ವಿಕ್ಕೆರಿ ಕ್ಯೂಸಿ ಸೇರಿಕೊಂಡರು. ಅಲ್ಲಿ ಅವರು ಭೂಗತ ಪ್ರದೇಶಗಳಲ್ಲಿನ ಸಂಕೀರ್ಣ ಯೋಜನೆಗಳು, ನಿರ್ಣಾಯಕ ಸವಾಲುಗಳಿಗೆ ತಾಂತ್ರಿಕ ಮತ್ತು ನಿಯಂತ್ರಣ ಪರಿಹಾರಗಳನ್ನು ಒದಗಿಸಿದ್ದರು.

ಇಷ್ಟಲ್ಲದೆ ಆಸ್ಟ್ರೇಲಿಯಾದ ಕಾನೂನು ಸಂಬಂಧಿತ ವಿಕ್ಟೋರಿಯನ್ ಬಾರ್‌ನ ಸದಸ್ಯರಾಗಿದ್ದಾರೆ ಮತ್ತು ಟೋಕಿಯೊ ಸಿಟಿ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ (ಸುರಂಗಗಳು) ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಅವರ ಮೂರು ದಶಕದ ವೃತ್ತಿಜೀವನದಲ್ಲಿನ ಸಾಧನೆಗಳಿಗಾಗಿ ಆಸ್ಟ್ರೇಲಿಯನ್ ಟನೆಲಿಂಗ್ ಸೊಸೈಟಿ, ಇಂಟರ್‌ ನ್ಯಾಷನಲ್‌ ಅಸೋಸಿಯೇಷನ್ ​​ಫಾರ್ ಫೈರ್ ಸೇಫ್ಟಿ ಸೈನ್ಸ್ ಮತ್ತು ಅಮೆರಿಕದ ನ್ಯಾಷನಲ್ ಫೈರ್ ಪ್ರೊಟೆಕ್ಷನ್ ಅಸೋಸಿಯೇಷನ್‌ನಿಂದ ಗೌರವಿಸಲ್ಪಟ್ಟಿದ್ದಾರೆ.

ನವೆಂಬರ್‌ 20ರಂದು ಆಗಮನ

ನ.12 ರಂದು ಸಿಲ್ಕ್ಯಾರಾದಲ್ಲಿ ಭೂಕುಸಿತ ಉಂಟಾಗಿ ಸ್ಥಳೀಯ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 20 ರಂದು ಅವರ ಅನುಭವ ಮತ್ತು ಪರಿಣತಿಯನ್ನು ಗಮನದಲ್ಲಿಟ್ಟುಕೊಂಡು, ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಕೇಂದ್ರದಿಂದ ಅವರನ್ನು ಸಂಪರ್ಕಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಡಿಕ್ಸ್ ಅವರ ತಂಡ ಸಿಲ್ಕ್ಯಾರಾ ಸುರಂಗವನ್ನು ಪರಿಶೀಲಿಸಿದರು, ಕಾರ್ಯನಿರತ ಇಲಿ-ರಂಧ್ರ ಗಣಿಗಾರಿಕೆ ತಂಡ, ಭಾರತೀಯ ಸೇನೆ, ವಿಪತ್ತು ನಿರ್ವಹಣಾ ಸಂಸ್ಥೆಗಳೊಂದಿಗೆ ಸಮನ್ವಯಗೊಳಿಸಿದರು ಮತ್ತು ಅವಶೇಷಗಳಿಂದ ರಕ್ಷಿಸುವ ತಾಂತ್ರಿಕ ಪರಿಹಾರಗಳನ್ನು ಸೂಚಿಸಿದರು. ದಿನದ 24 ಗಂಟೆ ಕೆಲಸ ಮಾಡಿ ರಕ್ಷಣಾ ತಂಡದ ಜೊತೆ ಸಿಲುಕಿಕೊಂಡಿದ್ದ 41 ಕಾರ್ಮಿಕರಿಗೂ ಧೈರ್ಯ ತುಂಬಿದರು. ಅಂತಿಮವಾಗಿ ಯಶಸ್ವಿಯೂ ಆದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X