ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿರಂಕುಶ ಪ್ರಭುತ್ವ ಮೆರೆಯುತ್ತಿದೆ. ಅಮಾಯಕರು, ರೈತ ಹೋರಾಟಗಾರರು ಹಾಗೂ ರಾಷ್ಟ್ರ ಭಕ್ತ ಕಾರ್ಯಕರ್ತರ ಮೇಲೆ ನಡೆಯುತ್ತಿದ್ದ ಪೋಲಿಸ್ ದರ್ಪ, ದೌರ್ಜನ್ಯ ಇದೀಗ ವಕೀಲರತ್ತವೂ ತಿರುಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಎಕ್ಸ್ ತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಂ ಅವರ ಮೇಲೆ ನಡೆದಿರುವ ಪೊಲೀಸರ ಅಮಾನುಷ ಹಲ್ಲೆ ಅತ್ಯಂತ ಖಂಡನೀಯ” ಎಂದು ಹೇಳಿದ್ದಾರೆ.
“ಪೊಲೀಸರ ಎಲ್ಲೆ ಮೀರಿದ ಗೂಂಡಾ ವರ್ತನೆ ಗಮನಿಸಿದರೆ ಗೃಹ ಸಚಿವರು ಇಲಾಖೆಯ ಮೇಲೆ ನಿಯಂತ್ರಣ ಕಳೆದುಕೊಂಡಿರುವಂತೆ ಕಾಣುತ್ತಿದೆ. ವಕೀಲರ ಮೇಲೆ ನಡೆದಿರುವ ಹಲ್ಲೆ ಪ್ರಕರಣವೂ ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ನಡೆದಿರುವ ಪೊಲೀಸ್ ದೌರ್ಜನ್ಯಗಳ ಕುರಿತು ಸರ್ಕಾರ ಈ ಕೂಡಲೇ ಗಂಭೀರ ಕ್ರಮ ತೆಗೆದುಕೊಂಡು ಪೊಲೀಸ್ ದಬ್ಬಾಳಿಕೆಗೆ ಅಂಕುಶ ಹಾಕದಿದ್ದರೆ ಬಿಜೆಪಿ ಕೈ ಕಟ್ಟಿ ಕೂರದು” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಠಾಣೆಯಲ್ಲಿ ಕೂಡಿಹಾಕಿ ಯುವ ವಕೀಲನಿಗೆ ಥಳಿತ; ಪಿಎಸ್‌ಐ ಸೇರಿ 6 ಮಂದಿ ಅಮಾನತು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿರಂಕುಶ ಪ್ರಭುತ್ವ ಮೆರೆಯುತ್ತಿದೆ. ಅಮಾಯಕರು,ರೈತ ಹೋರಾಟಗಾರರು ಹಾಗೂ ರಾಷ್ಟ್ರ ಭಕ್ತ ಕಾರ್ಯಕರ್ತರ ಮೇಲೆ ನಡೆಯುತ್ತಿದ್ದ ಪೋಲಿಸ್ ದರ್ಪ, ದೌರ್ಜನ್ಯ ಇದೀಗ ವಕೀಲರತ್ತವೂ ತಿರುಗಿದೆ, ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಂ ಅವರ ಮೇಲೆ ನಡೆದಿರುವ ಪೋಲಿಸರ ಅಮಾನುಷ ಹಲ್ಲೆ ಅತ್ಯಂತ ಖಂಡನೀಯ.
ಪೋಲಿಸರ… pic.twitter.com/vFoqYduluW
— Vijayendra Yediyurappa (@BYVijayendra) December 2, 2023