- ‘ರಾಜಕೀಯ ಅಜೆಂಡಾವನ್ನು ವಿಸ್ತರಿಸಲು ತೆಗಳುವುದು ಸರಿಯಲ್ಲ’
- ‘ಇನ್ಫೋಸಿಸ್ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿ ಮಾಡುತ್ತದೆ’
ಜನರಿಗೆ ಉಚಿತಗಳನ್ನು ಸುಮ್ಮನೆ ಕೊಟ್ಟರೆ ಸಮಾಜಕ್ಕೆ ಮಾರಕ ಎಂದು ಹೇಳಿಕೆ ನೀಡಿ ಪರೋಕ್ಷವಾಗಿ ‘ಗ್ಯಾರಂಟಿ’ ಯೋಜನೆಗಳನ್ನು ಟೀಕಿಸಿದ್ದ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಮಾತಿಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್‌ನ ಕೆಲವು ಸಚಿವರಿಂದ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ನಾರಾಯಣಮೂರ್ತಿ ಮಾತುಗಳನ್ನು ಕಟುವಾಗಿ ಟೀಕಿಸಲಾಗುತ್ತಿದೆ. ಈ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಾರಾಯಣಮೂರ್ತಿ ಪರ ನಿಂತು ಹೇಳಿಕೆ ನೀಡಿದ್ದಾರೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಯತ್ನಾಳ, “ಸೈದ್ಧಾಂತಿಕ, ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಬಿಟ್ಟು ದೇಶವನ್ನು ಕಟ್ಟುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿರುವ ನಾರಾಯಣಮೂರ್ತಿಗಳನ್ನು ನಿಮ್ಮ ರಾಜಕೀಯ ಅಜೆಂಡಾವನ್ನು ವಿಸ್ತರಿಸಲು ತೆಗಳುವುದು, ಹೀಯಾಳಿಸುವುದು ಮೂರ್ಖತನ” ಎಂದು ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರ್ನಾಟಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆತಂಕವಿದೆಯೇ?
“ಇನ್ಫೋಸಿಸ್ ದೇಶಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿ ಮಾಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಕೇವಲ ರಾಜಕಾರಣಿಗಳಿಗೆ ಸೀಮಿತವಲ್ಲ, ಅದು ಎಲ್ಲರಿಗೂ ಇರುವ ಹಕ್ಕು” ಎಂದು ಹೇಳಿದ್ದಾರೆ.
“ನಾರಾಯಣಮೂರ್ತಿಗಳು ದೇಶದ ಹಾಗೂ ಕರ್ನಾಟಕದ ಹೆಮ್ಮೆ. ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದ ದಿಗ್ಗಜರು. ಐಟಿ ಕ್ಷೇತ್ರದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಲು 80 ರ ದಶಕದಲ್ಲೇ ಯಾವುದೇ ಸರ್ಕಾರದ ಯೋಜನೆಯ ಸಹಾಯ ಪಡೆಯದೇ, ಸ್ವತಂತ್ರವಾಗಿ ಇನ್ಫೋಸಿಸ್ ಎಂಬ ದೈತ್ಯ ಸಂಸ್ಥೆಯನ್ನು ಪ್ರಾರಂಭಿಸಿದ ಅದ್ಭುತ ಸಾಹಸಿ” ಎಂದು ಬಣ್ಣಿಸಿದ್ದಾರೆ.
ನಾರಾಯಣ ಮೂರ್ತಿಗಳು ದೇಶದ ಹಾಗೂ ಕರ್ನಾಟಕದ ಹೆಮ್ಮೆ. ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದ ದಿಗ್ಗಜರು. ಐ.ಟಿ. ಕ್ಷೇತ್ರದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಲು 80 ರ ದಶಕದಲ್ಲೇ ಯಾವುದೇ ಸರ್ಕಾರದ ಯೋಜನೆಯ ಸಹಾಯ ಪಡೆಯದೇ, ಸ್ವತಂತ್ರವಾಗಿ ಇನ್ಫೋಸಿಸ್ ಎಂಬ ದೈತ್ಯ ಸಂಸ್ಥೆಯನ್ನು ಪ್ರಾರಂಭಿಸಿದ ಅದ್ಬುತ ಸಾಹಸಿ.
.. Contd
1/1 pic.twitter.com/ip7dH1kbNx— Basanagouda R Patil (Yatnal) (@BasanagoudaBJP) December 2, 2023