ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಪ್ರತಿಷ್ಠಿತ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ 1,020 ಉದ್ಯೋಗವನ್ನು ಸೃಷ್ಟಿಸಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕ, ಸಿಇಒ ಯತೀಶ ಕೆ.ಎಸ್. ಅವರು ಈ ಬಗ್ಗೆ ಮಾಹಿತಿ ನೀಡಿದರು.
ಸರಕಾರಿ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪೆನಿಗಳು, ಭಾರತೀಯ ನೌಕಾಪಡೆ, ಕೈಗಾ ಅಣುಸ್ಥಾವರ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಿಗೆ ದಶಕದಿಂದ ತಂತ್ರಜ್ಞಾನ ಸೇವೆಯನ್ನು ನೀಡುತ್ತಿರುವ ಪ್ರತಿಷ್ಠಿತ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಸಾಮಾನ್ಯ ಜನರಿಗೂ ಎಐ ತಂತ್ರಜ್ಞಾನದ ಪ್ರಯೋಜನಗಳನ್ನು ತಲುಪಿಸುವ ಮಹತ್ವದ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯಂತೆ ರಾಜ್ಯದಲ್ಲಿ 1,020 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ದೊರಕಲಿದೆ ಎಂದು ಅವರು ಹೇಳಿದರು.
ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಯಾವುದೇ ಪದವೀಧರರಾಗಿರಬೇಕು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಕೌಶಲ್ಯವನ್ನು ಹೊಂದಿರಬೇಕು. ಪ್ರತೀ ತಾಲೂಕಿನಿಂದ ನಾಲ್ವರು ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳಿಗೆ ತಮ್ಮ ತಾಲೂಕಿನಿಂದಲೇ ಕೆಲಸ ಮಾಡಲು ಅವಕಾಶ ಇರಲಿದೆ ಎಂದು ತಿಳಿಸಿದರು.
ಆಯ್ಕೆಯಾದ ಅಭ್ಯರ್ಥಿಗಳು ಆರ್ಟಿಫಿಶಯಲ್ ಇಂಟೆಲಿಜೆನ್ಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೊದಲ 6 ತಿಂಗಳು ಫಿಲ್ಡ್‌ನಲ್ಲಿದ್ದು ಕಾರ್ಯನಿರ್ವಹಿಸಲು ಸಿದ್ಧರಿರಬೇಕು. 6 ತಿಂಗಳು ಫೀಲ್ಡ್‌ನಲ್ಲಿ ಅನುಭವ ಪಡೆದುಕೊಂಡ ಬಳಿಕ ಅವರನ್ನು ಸಂಸ್ಥೆಯ ಖಾಯಂ ಉದ್ಯೋಗಿಯಾಗಿ ಕಚೇರಿಗೆ ನೇಮಿಸಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆ ಆನ್ಲೈನ್ ಮತ್ತು ವೈಯಕ್ತಿಕ ಇಂಟರ್‍ವ್ಯೂ ಮೂಲಕ ನಡೆಯಲಿದೆ ಎಂದು ಅವರು ತಿಳಿಸಿದರು.
ಆಸಕ್ತರು ಸಂಸ್ಥೆಯ ವೆಬ್‌ಸೈಟ್ https://yaticorp.com/ai-career/, ಇಮೇಲ್ career@yaticorp.com ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ 1st Floor, 677, suite 899, 13th cross, sector – 1, HSR layout, Bangalore, 560102, door no.: 4-152/14(3), 2nd floor, sri ram building, kottara chowki, mangalore – 575006 ವಿಳಾಸವನ್ನು ಸಂಪಕರ್ಕಿಸಬಹುದಾಗಿದೆ. ಮೇ 23 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಕೃಪಾ ಕೆ., ಹ್ಯೂಮನ್ ರಿಸೋರ್ಸ್ ಭೂಮಿಕಾ ಪೂಜಾರಿ, ಸೋಮಶೇಖರ್ ಅಯ್ಯ, ಇಂದ್ರೇಶ್ ಎಂ.ಎಸ್. ಉಪಸ್ಥಿರಿದ್ದರು.