ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಪರಿಚಿತನನ್ನು ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಫಾರೂಕ್ ಖಾನ್ ಕೊಲೆಯಾದ ವ್ಯಕ್ತಿ. ಸುಹೇಲ್, ಮುಬಾರಕ್, ಅಲಿ ಅಕ್ರಮ್ ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಾದ ವ್ಯಕ್ತಿ ಮತ್ತು ಆರೋಪಿಗಳು ಪರಿಚಿತರು.
ಸೋಮವಾರ ಬೆಳಗ್ಗೆ ಫಾರೂಕ್ ಖಾನ್ ಅವರನ್ನು ಆರೋಪಿಗಳು ಆಟೋದಲ್ಲಿ ಕಿಡ್ನಾಪ್ ಮಾಡಿ, ಅರ್ಕಾವತಿ ಲೇಔಟ್ ರಸ್ತೆಯಲ್ಲಿ ಚಾಕುವಿನಿಂದ ಖಾನ್‌ನ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ್ದಾರೆ.
ಇತ್ತ ಫಾರೂಕ್ ಖಾನ್ ಕಾಣಿಸದೇ ಇರುವಾಗ ಆತನ ಕುಟುಂಬಸ್ಥರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೇ ವೇಳೆಗೆ ಕೊಲೆ ಮಾಡಿರುವ ಆರೋಪಿಗಳಾದ ಸುಹೇಲ್, ಮುಬಾರಕ್ ಹಾಗೂ ಅಲಿ ಅಕ್ರಮ್ ಅವರು ಠಾಣೆಗೆ ಬಂದು ದ್ವೇಷದ ಹಿನ್ನೆಲೆ, ಖಾನ್‌ನನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.
ಹತ್ಯೆಯಾದ ಫಾರೂಕ್ ಖಾನ್ ಆರೋಪಿ ಸಹೇಲ್‌ಗೆ, “ನೀನು ಗಾಂಜಾ ಮಾರಾಟ ಮಾಡುತ್ತೀಯಾ, ನೀನು ಕೆಟ್ಟದಾಗಿ ಮಾತನಾಡಿ, ನನ್ನನ್ನು ಕೆಟ್ಟದಾಗಿ ಬಿಂಬಿಸುತ್ತಿಯಾ ಈ ಬಗ್ಗೆ ನಾನು ಪೊಲೀಸರಿಗೆ ಮಾಹಿತಿ ನೀಡುತ್ತೇನೆ” ಎಂದು ಫಾರೂಕ್ ಖಾನ್ ಹೇಳಿದ್ದರು ಎಂದು ಬಂಧಿತ ಆರೋಪಿ ಹೇಳಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಸೆ.18 ರಂದು 1,53,965 ಗಣೇಶ ಮೂರ್ತಿಗಳ ವಿಸರ್ಜನೆ
“ನಾನು ಗಾಂಜಾ ವ್ಯವಹಾರ ನಡೆಸುತ್ತಿಲ್ಲ. ಆದರೂ ಖಾನ್ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ. ಇದರಿಂದ ಕೋಪಗೊಂಡು ಸ್ನೇಹಿತರ ಜತೆಗೆ ಸೇರಿ ಹಲ್ಲೆ ಮಾಡಿ ಕೊಲೆ ಮಾಡಿದ್ದೇನೆ” ಎಂದು ಆರೋಪಿ ಹೇಳಿದ್ದಾನೆ.