- ಆರೋಪಿ ಬಂಧನದಿಂದ ₹8 ಲಕ್ಷ ಮೌಲ್ಯದ ನಾನಾ ಬೈಕ್ ಪತ್ತೆ
- ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು
ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಮುಖ ರಸ್ತೆಗಳಲ್ಲಿ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಗೀಳಿಗೆ ಬಿದ್ದದ್ದ ಯುವಕನೊಬ್ಬ, ತನ್ನ ಬಳಿ ಬೈಕ್ ಇಲ್ಲವೆಂದು ಬಾಲಕರೊಂದಿಗೆ ಸೇರಿ 17 ಬೈಕ್‌ಗಳನ್ನು ಕದ್ದಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದು, ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಶರತ್ (22) ಬಂಧಿತ ಆರೋಪಿ. ಆತನ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶರತ್ ಮತ್ತು ಇತರ ಆರೋಪಿಗಳು ನಗರದಲ್ಲಿ ಮನೆ ಮುಂದೆ ನಿಲ್ಲಿಸಿರುವ ಡಿಯೋ ಬೈಕ್‌ಗಳನ್ನೇ ಹೆಚ್ಚಾಗಿ ಕದಿಯುತ್ತಿದ್ದರು.
ಆರೋಪಿ ಶರತ್ ಐವರು ಬಾಲಕರ ಜೊತೆ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ವಿಲೀಂಗ್ ಮಾಡುತ್ತಿದ್ದ. ತನ್ನ ಬಳಿ ಬೈಕ್ ಇಲ್ಲವೆಂದು ಕೊಡಿಗೆಹಳ್ಳಿ, ಮಾಗಡಿರೋಡ್, ಬಸವೇಶ್ವರನಗರ ಸೇರಿದಂತೆ ನಗರದ ನಾನಾ ಕಡೆ ಬೈಕ್ ಕಳ್ಳತನ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಚುನಾವಣೆ ಹಿನ್ನೆಲೆ ನಗರದಲ್ಲಿ ನಾಕಬಂದಿಯಾಕಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ, ಪೊಲೀಸರು ಆತನನ್ನು ನೋಡುವ ಮುನ್ನವೇ ಆತ ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ಆತನನ್ನ ಹಿಡಿದು ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪೊಲೀಸರೆಂದು ಹೇಳಿಕೊಂಡು ಯೆಮೆನ್ ಪ್ರಜೆಯಿಂದ ₹4 ಲಕ್ಷ ದೋಚಿದ ದುಷ್ಕರ್ಮಿಗಳು
ಪರಿಶೀಲನೆ ವೇಳೆ ಆರೋಪಿ ನಡೆಸಿದ ಕೃತ್ಯಗಳು ಬೆಳಕಿಗೆ ಬಂದಿವೆ. ಇತನ ಮಾಹಿತಿ ಆದರಿಸಿ ಪೊಲೀಸರು ಐವರು ಬಾಲಕರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಸದ್ಯ ಆರೋಪಿ ಬಂಧನದಿಂದ ₹8 ಲಕ್ಷ ಮೌಲ್ಯದ ನಾನಾ ಬೈಕ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.