- 1900 ಬಸ್‌ಗಳ ಪೈಕಿ 921 ಎಲೆಕ್ಟ್ರಿಕ್ ಬಸ್
- ಅಧಿಕೃತ ನೋಂದಣಿ ಬಳಿಕ ಸಾರ್ವಜನಿಕ ಸೇವೆಗೆ ಬಸ್
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ವರ್ಷದ ಅಂತ್ಯದ ವೇಳೆಗೆ ಸುಮಾರು 1,900 ಬಸ್‌ಗಳನ್ನು ರಸ್ತೆಗೆ ಇಳಿಸಲು ನಿರ್ಧರಿಸಿದೆ.
1900 ಬಸ್‌ಗಳ ಪೈಕಿ 921 ಎಲೆಕ್ಟ್ರಿಕ್ ಬಸ್‌ಗಳಾಗಿವೆ. ಪ್ರತಿ ತಿಂಗಳು 100 ಬಸ್‌ಗಳಂತೆ ಬಿಎಂಟಿಸಿಗೆ ಸೇರ್ಪಡೆಯಾಗಲಿವೆ. ಜುಲೈ ಅಂತ್ಯದ ವೇಳೆಗೆ ನೂರು ಹೊಸ ಬಸ್‌ಗಳು ನಗರದ ರಸ್ತೆಗೆ ಇಳಿಯಲಿವೆ.
ಈಗಾಗಲೇ ಟಾಟಾ ಮೋಟರ್ಸ್ ಸಬ್ಸಿಡರಿ ಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಮೊಬಿಲಿಟಿ ಸಲ್ಯೂಷನ್ ಸಂಸ್ಥೆಯು 921 ಬಸ್‌ಗಳನ್ನು ಬಿಎಂಟಿಸಿಗೆ ನೀಡುವ ಗುತ್ತಿಗೆ ತೆಗೆದುಕೊಂಡಿದೆ.
921 ಬಸ್‌ಗಳ ಪೈಕಿ ಈಗಾಗಲೇ 1 ಬಸ್ ಬಿಎಂಟಿಸಿ ಬಳಿಯಿದೆ. ಇನ್ನೂ ಅಧಿಕೃತ ನೋಂದಣಿ ಕಾರ್ಯ ಮುಗಿದ ಬಳಿಕ ಈ ಬಸ್‌ಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ.
“ಇ-ಬಸ್‌ಗಳನ್ನು ಪ್ರತಿ ಕಿಲೋಮೀಟರ್‌ಗೆ ₹41 ವೆಚ್ಚದಲ್ಲಿ ಖರೀದಿಸಲಾಗಿದೆ. ಕಂಪನಿಯಿಂದ ಚಾಲಕರ ಜೊತೆಗೆ ಬಸ್‌ಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದೆ. ಚಾಲಕರು ಮತ್ತು ಬಸ್‌ಗಳ ನಿರ್ವಹಣೆ ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಬಿಎಂಟಿಸಿ ಮಾರ್ಗಗಳನ್ನು ನೋಡಿಕೊಳ್ಳುತ್ತದೆ ಹಾಗೂ ನಿರ್ವಾಹಕರನ್ನು ಒದಗಿಸುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಿಸಿಬಿ ದಾಳಿ ಬಳಿಕ ಇ-ಸಿಗರೇಟ್ ಮಾರಾಟ ಮಳಿಗೆಗೆ ಸೀಲ್
“ಈ ಬಸ್‌ಗಳು ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲಿವೆ. ನೆಲ ಮಟ್ಟದಿಂದ ಸ್ವಲ್ಪ ಮೇಲೆ ಈ ಬಸ್‌ಗಳು ಇರಲಿದ್ದು, ಬಸ್‌ನ ಅಡಿ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಪಾದಚಾರಿಗಳು ಸಿಲುಕಲು ಸಾಧ್ಯವಿಲ್ಲ. ಅಂಗವಿಕಲರು ಸೇರಿದಂತೆ ಪ್ರಯಾಣಿಕರು ಆರಾಮವಾಗಿ ಬಸ್ ಹತ್ತಿ ಇಳಿಯಬಹುದು” ಎಂದರು.